ಜೈ ಜಿನೇಂದ್ರ ಬಂಧುಗಳೆ, ವಿಶ್ವವ್ಯಾಪ್ತಿ ಆರೋಗ್ಯ ತುರ್ತುಪರಿಸ್ಥಿತಿ ಸೃಷ್ಟಿಸಿರುವ ಕೊವಿಡ್ 19 ದಿನ ದಿಂದ ದಿನಕ್ಕೆ ವ್ಯಾಪಿಸುತ್ತಿದು ಅನೇಕ ದೇಶಗಳಲ್ಲಿ ಚಿಂತಾಜನಕ ಸ್ಥಿತಿ ನಿರ್ಮಾಣಗೊಂಡಿದೆ. ಆದರೆ ಭಾರತದಲ್ಲಿ ಎಲ್ಲಾ ದೇಶಗಳಲ್ಲಿನ ಜನಸಂಖ್ಯೆಗಿಂತ್ತಲು ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶವಾದರು ನಮ್ಮಲಿ ಈ ಸೋಂಕು ನಿಗ್ರಹದಲ್ಲಿರುವುದರ ಹಿಂದೆ ನಮ್ಮ ಪ್ರಧಾನಿಯವರು ತೆಗೆದು ಕೊಂಡಿರುವ ದೃಢ ನಿರ್ಧಾರ ಪರಿಸ್ಥಿತಿಯ ಸೂಕ್ತ ನಿರ್ವಹಣೆ ಒಂದೇಡೆಯಾದರೆ ನಮ್ಮ ದೇಶ ವಾಸಿಗಳ ಕ್ರಿಯಾ ಶೀಲ ಮನೋಭಾವ, ವಿಪತ್ತಿನ ಸಮಯದಲ್ಲಿ ದೈರ್ಯಗೆಡದೆ ಅನೇಕ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸುವ ಕೆಲಸದೊಂದಿಗೆ ಸಮುದಾಯದ ಮಟ್ಟದಲ್ಲಿ ಆರ್ಥಿಕ ಸಮಾಜಿಕ ಅಗತ್ಯಗಳಿಗೆ ಸ್ಪಂದಿಸಿ ನಿರ್ಗತಿಕ ಬಡ ಜನರಿಗೆ ಸಹಾಯ ಹಸ್ತ ಚಾಚುತ್ತ ಅತ್ಯಂತ ಉತ್ಸಾಹಿಗಳಾಗಿ ಮನಸ್ಪೂರ್ತಿಯಾಗಿ ತೊಡಗಿಸಿಕೊಂಡಿದ್ದಾರೆ. ಅವರಿಗಾಗಿ ಒಂದು ದೊಡ್ಡ ಚಪ್ಪಾಳೆ. ಅವರ ಕಾರ್ಯಗಳನ್ನು ಗುರುತಿಸಿ ಒಂದು ಧನ್ಯವಾದ ಸಲ್ಲಿಕೆ ಅಷ್ಟೆ. ಈ ನಿಟ್ಟಿನಲ್ಲಿ ಚತುರ್ವಿದ ದಾನದಲ್ಲಿ ಎತ್ತಿದ ಕೈಯಾದ ಆಹಾರ ದಾನಕ್ಕೆ ಹೆಸರಾದ ಈ ಅಕ್ಷಯ ತೃತಿಯದಂದು ಹೇಳ ಬೇಕಾದರೆ, ಜೈನ ಸಮುದಾಯದ ಅನೇಕ ಸಂಘ ಸಂಸ್ಥೆಗಳು ರಾಜ್ಯಾದ್ಯಂತ ಕಾರ್ಯ ಪ್ರವೃತ್ತರಾಗಿದ್ದಾರೆ.
ಮೊದಲಿಗೆ ಹೇಳುವುದಾದರೆ, ಸಮುದಾಯದ ಮಂದಿಗೆ ಸ್ಪೂರ್ತಿಯಾಗಿ ನಿಂತು ಹೆಮ್ಮೆ ಪಡುವಂತೆ ನಮ್ಮವರಿಗೆಲ್ಲಾ ಉತ್ತೆಜನಕಾರಿಯಾಗಿ ತಮ್ಮದೆ ಕೊಡುಗೆ ನೀಡುತ್ತ ಬಂದಿರುವ ಪೂಜ್ಯ ಕಾವಂದರು ಪ್ರತಿಕೂಲ ಪರಿಸ್ಥಿಯ ನಿರ್ವಹಣೆಗಾಗಿ ಕೇಂದ್ರ ಸರ್ಕಾರಕ್ಕೆ ಐದು ಕೋಟಿ ರೂಗಳ ದೇಣಿಗೆ ನೀಡಿದ್ದಾರೆ. ಹಾಗೂ ಜನತೆಗೆ ಸ್ಪೂರ್ತಿ ನುಡಿಗಳಾಡಿದ್ದಾರೆ.
ನಮ್ಮ ಭಟ್ಟಾರಕರುಗಳು ಮಠದವತಿಯಿಂದ ಅನೇಕ ರೀತಿಯ ಸಹಾಯ ಸ್ಪೂರ್ತಿಯನ್ನು ನೀಡುತ್ತಿದ್ದು ಸಮುದಾಯದ ಜನರಿಗೆ ದೃತಿಗೆಡದಿರಲು ಕರೆ ನೀಡಿದ್ದಾರೆ.
ಕರೋನ ಸಂತ್ರಸ್ಥರಿಗೆ ನೆರವಾಗಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ಶ್ರವಣ ಬೆಳಗೊಳದ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಶ್ರೀ ಕ್ಷೇತ್ರದವತಿಯಿಂದ ಹತ್ತು ಲಕ್ಷರೂ ಡಿ.ಡಿ. ಹಾಸನದ ಜೈನ ಸಮಾಜದ ಅಧ್ಯಕ್ಷರಾದ ಅಜಿತ್ ಕುಮಾರ್ ಜೈನ್ ರವರ ಕಡೆಯಿಂದ ತಲುಪಿಸಿದ್ದಾರೆ. ಹಾಗೂ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಮಾನವೀಯ ನೆಲೆಯಲ್ಲಿ ಸ್ಪಂದಿಸುವುದು ಅತ್ಯಂತ ಅಗತ್ಯ ಎಂದು ಕರೆ ನೀಡಿದ್ದಾರೆ. ಭಾರತೀಯ ಜೈನ್ ಮಿಲನ್ ಜೋ಼ನ್ 8ರ ವತಿಯಿಂದಲು ವಿವಿದೆಡೆಗಳಲ್ಲಿ ಆಹಾರ ಪದಾರ್ಥ ವಿತರಣೆ ಹಾಗೂ ದೇಣಿಗೆ ಕಾರ್ಯ ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಸುರೇಂದ್ರ ಕುಮಾರ್ ರವರ ಮಾರ್ಗದರ್ಶನದಲ್ಲಿ ಹಾಗೂ ಪುಷ್ಪರಾಜ್ ಜೈನ್ ರವರ ನೇತೃತ್ವದಲ್ಲಿ ಭಾರತೀಯ ಜೈನ್ ಮಿಲನ್ ಜೋ಼ನ್ 8ರ ವತಿಯಿಂದ ಎರಡುವರೆ ಲಕ್ಷ ರೂಗಳು ಬೆಂಗಳೂರು ವಿಭಾಗದಿಂದ ಒಂಬತ್ತು ಕಾಲು ಲಕ್ಷ ರೂಗಳು ಮೂಡುಬಿದ್ರೆ ವಿಭಾಗದ ವತಿಯಿಂದ ಐವತ್ತು ಸಾವಿರ ರೂಗಳು ಹಾಗೂ ಪಿ.ಎಂ. ಕೇರ್ ಫಂಡ್ ಗೆ ಎರಡು ಲಕ್ಷ ರೂಗಳನ್ನು ನೀಡಲಾಗಿದೆ. ಹೀಗೆ ಹನ್ನೆರಡು ಲಕ್ಷಕ್ಕು ಹೆಚ್ಚು ದೇಣಿಗೆ ಹಾಗೂ ಸಹಾಕರವನ್ನು ಭಾರತೀಯ ಜೈನ್ ಮಿಲನ್ ವತಿಯಿಂದ ನೀಡಲಾಗಿದೆ.
ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಜನರು ಸಮಾಜಿಕ ಅಂತರ ಕಾಯಿದ್ದು ಕೊಳ್ಳುವ ಅನಿವಾರ್ಯದಿಂದ ರಾಜ್ಯದ ಎಲ್ಲಾ ಧಾರ್ಮಿಕ ಸ್ಥಳದಂತೆ ಜಿನ ಮಂದಿರಗಳಲ್ಲೂ ಪೂಜೆ ವಿಧಾನ ನಡೆಯದಿರುವ ಕಾರಣದಿಂದ ಆದಾಯ ನಿಂತು ಅವರ ಕುಟುಂಬಗಳಿಗೆ ಬಂದಿರುವ ಸಂಕಷ್ಟವನ್ನು ನಿವಾರಿಸಲು ಅಕ್ಷಯ ತೃತಿಯದ ಈ ಶುಭ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ಒಂದಿಷ್ಟು ಆಹಾರ ಸಾಮಗ್ರಿಗಳನ್ನು ಹೊಂಬುಜ ಮಠದಿಂದ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕರು ತಲುಪಿಸಿದ್ದಾರೆ. ಅಲ್ಲದೆ ಈ ಹಿಂದೆ ನಡೆಯುವ ಆಹಾರ ವಿತರಣೆ ದೇಣಿಗೆ ನೀಡಿರುವುದನ್ನು ಇಲ್ಲಿ ನೆನೆದುಕೊಳ್ಳಬಹುದು.
ಶ್ರೀ ನವಗ್ರಹ ತೀರ್ಥ ಕ್ಷೇತ್ರರವರು ವರುರೂ ವತಿಯಿಂದ ಶ್ರೀ ಧರ್ಮಸೇನ ಭಟ್ಟಾರಕರು ಐವತ್ತೊಂದು ಸಾವಿರದ ಡಿ.ಡಿ. ಯನ್ನು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಕೊಟ್ಟಿದ್ದಾರಲ್ಲದೆ ತಹಶಿಲ್ಲ್ಧಾರ್ ಆಫೀಸ್ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸ್ ಕಮಿಷನರ್ ಆಫೀಸ್ ಗೆ ಪೂರ್ಣ ಮುಖ ಮಾಸ್ಕ್ ಸ್ಯಾನಿಟೈಸರ್ ಹಾಗೂ ಹಣ್ಣುಗಳನ್ನು ಹಂಚಿದಾರೆ. ಈ ಸಂದರ್ಭದಲ್ಲಿ ಹುಬ್ಬಳ್ಳಿ ಸಮಾಜದ ಅಧ್ಯಕ್ಷರಾದ ಮಹಾವೀರ್ ಸೂಜಿರವರು ಹಾಗೂ ಉಪಾಧ್ಯಕ್ಷರಾದ ವಿಮಲ್ ತಾಳಿಕೋಟೆರವರು ಭಾಗವಹಿಸಿದ್ದಾರೆ ಹುಬ್ಬಳ್ಳಿ ಜೈನ ಸಮಾಜದವತಿಯಿಂದ ಆಹಾರ ಸಾಮಗ್ರಿಗಳು ವಿತರಣೆಯಾಗಿದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬಹುದ್ದಾಗಿದೆ. ಹಾಸನದ ಜೈನ ಸಮಾಜದವತಿಯಿಂದಲೂ ಕೂಡ ಶ್ರೀಕ್ಷೇತ್ರ ಶ್ರವಣ ಬೆಳಗೊಳದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ಜನರಿಗೆ ಆಹಾರ ವಿತರಣೆಯಾಗುತ್ತಿದ್ದು, ಪ್ರತಿದಿನ ಸಾವಿರಕ್ಕೂ ಹೆಚ್ಚು ಆಹಾರ ಪೊಟ್ಟಣಗಳನ್ನು ದಿನಕೊಂದು ವಿಧದಂತೆ ತಯಾರಿಸಲಾಗುತ್ತಿದ್ದು. ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಪ್ರಶಂಸನಿಯವಾಗಿದೆ. ಮಾಳ ಹರ್ಷೇಂದ್ರಕುಮಾರ್ ರವರು ಸಹ ಸ್ವತಃ ಹಾಗೂ ಅನೇಕ ಕೆ.ಜೆ.ಎ ದಾನಿಗಳಿಂದ ಬೇಕಾದ ಆಹಾರ ಪದಾರ್ಥಗಳನ್ನು ಒದಗಿಸುವಲ್ಲಿ ತೊಡಗಿದ್ದು ಹಾಗೂ ತಯಾರಾದ ಆಹಾರ ಪೊಟ್ಟಣಗಳನ್ನು ಬಡಜನರಿಗೆ ತಲುಪಿಸುತ್ತಿದ್ದಾರೆ, ಶೀತಲ್ ನಾಥ್ ಕುಮಾರ್ ರವರ ನೇತೃತ್ವದಲ್ಲಿ ಕೂಡ ರೋಟರಿವತಿಯಿಂದ ಬಡಕುಟುಂಬಗಳಿಗೆ ಎರಡು ಸಾವಿರ ರೂ ಮೌಲ್ಯದ ಸಾವಿರಕ್ಕು ಅಧಿಕ ಕಿಟ್ ಗಳನ್ನು ನೀಡಲಾಗಿದೆ, ಹಾಗೂ ಸ್ವತಃ ಕೆ.ಜೆ.ಎ ಆಹಾರ ವಿತರಣೆಯಲ್ಲಿ ಕೊಡುಗೆಯನ್ನು ನೀಡಿದ್ದಾರೆ. ಇನ್ನೂ ಇಲ್ಲಿ ನೋಡಿ ಹಾಸನದ ಈ ಜೈನ ಯುವಕರಾದ ಧಾರ್ಮಿಕ್ ಮತ್ತು ಶಶಾಂಕ್ ಯಾವ ಸಂಘ ಸಂಸ್ಥೆಯ ಸಹಾಯವಿಲ್ಲದೆ ಸ್ವತಃ ನಿಂತು ಮೂಕ ಪ್ರಾಣಿಗಳಿಗೆ ಆಹಾರ ವಿತರಣೆಯಲ್ಲಿ ನಿರತರಾಗಿದ್ದಾರೆ. ಮೈಸೂರು ಜೈನ ಸಮಾಜದ ವತಿಯಿಂದಲು ಕೂಡ ಅನೇಕ ಬಡ ಕುಟುಂಬಗಳಿಗೆ ನೇರವಾಗುತ್ತಲ್ಲಿದ್ದಾರೆ. ಪ್ರಸ್ತುತ ರಾಜ್ಯಾದ್ಯಂತ ಹೆಸರಾಗಿರುವ ಕರ್ನಾಟಕ ಜೈನ್ ಅಸೋಸಿಯೇಷನ್ ವತಿಯಿಂದ ನಡೆಯುತ್ತಿರುವ ಆಹಾರ ವಿತರಣೆ ಬಗ್ಗೆ ಕಳೆದ ವೀಡಿಯೋದಲ್ಲಿ ತಿಳಿಸಿದೆವು. ಅನೇಕ ದಾನಿಗಳು ಈ ಕೆಲಸಕ್ಕೆ ದೇಣಿಗೆ ನೀಡುವುದರ ಮೂಲಕ ಕೈ ಜೋಡಿಸಿದ್ದು, ಹಲವಾರು ಜನ ಸ್ವಯಂ ಸೇವಕರು ಕೈಜೋಡಿಸಿದ್ದು ನಿರಂತರ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಅವರ ಕೆಲಸ ಅದ್ಬುತ ಹಾಗೂ ಶ್ಲಾಘನೀಯ ಅವರಿಗೂ ಕೂಡ ಅಭಿನಂದನೆಗಳನ್ನು ಈ ಸಂದರ್ಭದಲ್ಲಿ ತಿಳಿಸುತ್ತ.
ನೋಡಿದಿರಲ್ಲಾ ವೀಕ್ಷಕರೆ ಇಷ್ಟೆಲ್ಲಾ ಸತ್ಕಾರ್ಯಗಳು ನಮ್ಮ ಸಮುದಾಯದವತಿಯಿಂದ ನಡೆದಿದೆ ಲಾಕ್ ಡೌನ್ ನ ಈ ಸಂದರ್ಭದಲ್ಲಿ ಬಿತ್ತರಗೊಳುತ್ತಿರುವ ಈ ವೀಡಿಯೋಗಳ ಯಾರ ಪ್ರಯೊಜಕತ್ವದಲೂ ತಯಾರಾಗಿದ್ದಲ್ಲ ನಮ್ಮ ಯೋದರನ್ನು ಹುರಿದುಂಬಿಸಲ್ಲು ಅವರ ಕಾರ್ಯಕ್ಕೆ ಶ್ಲಾಘನೆ ಹಾಗೂ ಕೃತಜ್ಞತೆಗೊಸ್ಕರ ತಯಾರಾದ ಇದು ಜ್ವಾಲಮಾಲ ಪ್ರಸ್ತುತಿ.













