ತೀರ್ಥಂಕರ ಹೆಸರು ಸ್ಪರ್ದೆ HD

ಜೈ ಜಿನೇಂದ್ರ ವೀಕ್ಷಕರೆ, ಸರ್ವ ಭಟ್ಟಾರಕರಿಗು ಪೂಜ್ಯ ಕಾವಂದರಿಗು ವಂದಿಸುತ್ತ ಸ್ಪೂರ್ತಿ ನೀಡಿದ ಹೊಂಬುಜ ಶ್ರೀಗಳಿಗೂ ಅಭಿನಂದಿಸುತ್ತ, ನಿಮ್ಮ ನೆಚ್ಚಿನ ಜ್ವಾಲಮಾಲ ಡಾಟ್ ನ್ಯೂಸ್ ಅರ್ಪಿಸುತ್ತಿರುವ ಪುಟ್ಟಾಣಿಗಳಿಗಾಗಿ ಧಾರ್ಮಿಕ ಚಟುವಟಿಕೆಯ ಎರಡನೇ ಕಂತು ಕೂಡ ಮಕ್ಕಳಿಂದ ಕೂಡ ಉತ್ತಮ ಪ್ರತಿಕ್ರಿಯೆ ದೊರಕ್ಕಿದು ಮೊದಲ ಕಂತಿನಂತೆ ಈ ಬಾರಿಯು ಒಂದು ತಾಸಿನೊಳಗೆ 350ಕ್ಕೂ ಹೆಚ್ಚು ಮಕ್ಕಳು ಕರೆಗಳಿಗಾಗಿ ಪ್ರಯತ್ನಿಸಿದ್ದು 35 ರಿಂದ 40 ಮಕ್ಕಳಿಗೆ ಮಾತ್ರ ಕರೆ ದೊರಕಿದೆ. ಇದ್ದು ಅಂಕಿ ಅಂಶಕ್ಕಾಗಿ ಅಲ್ಲ. ಮಕ್ಕಳು ತೊರುತ್ತಿರುವ ಆಸಕ್ತಿಯ ವಿಷಯ ಈ ಬಾರಿಯ ವಿಷಯ 24 ತೀರ್ಥಂಕರರ ಹೆಸರು ಲಾಂಛನ. ಮಕ್ಕಳು ಜಿನ ಮಂದಿರಗಳಿಗೆ ಭೇಟಿ ನೀಡಿದಾಗ ಲಾಂಛನ ನೋಡಿ ತೀರ್ಥಂಕರರನ್ನು ಗುರುತಿಸುವಷ್ಟು ಶಕ್ತರಾಗ ಬೇಕೆನ್ನುವುದು ಉದ್ದೇಶ. ಆದ್ದರಿಂದ ಕರೆ ಸಿಗದ ಮಕ್ಕಳು ಆಯ್ಕೆಯಾಗದ ಮಕ್ಕಳು ಬೇಸರಿಸುವ ಅಗತ್ಯವಿಲ್ಲ ಪ್ರತಿ ಮಕ್ಕಳು ಮುದ್ದು ಮುದ್ದಾಗಿ ಸ್ಪಷ್ಟತೆಯಿಂದ ಉಚ್ಚರಿಸಿದರಲ್ಲದೆ ಉತ್ಸಹತೋರಿದ ಪರಿ ಅಮೋಘ. ಹಲವಾರು ಮಕ್ಕಳು ಸ್ವಲ್ಪವು ತಪ್ಪಿಲದಂತೆ ಹೇಳಿರುವುದರಿಂದ ಅವರೆಲ್ಲರು ಆಯ್ಕೆಯಾದಂತೆಯೆ,

ಇಲ್ಲಿದ್ದಾರೆ ಆಯ್ಕೆಯಾದ ಮಕ್ಕಳು. (ಶ್ರೀ ಶಾಂತ್ ಜೈನ್ ಬೆಂಗಳೂರು, ಸಾನ್ವಿ ಹುಬ್ಬಳ್ಳಿ, ಪ್ರಾಂಜಲಿ ಜೈನ್ ಕಾರ್ಕಳ, ಸಂಹಿತ ಬೆಂಗಳೂರು, ದೃತಿ ಜೈನ್ ಬೆಂಗಳೂರು, ದೃತಿ ತುಮಕೂರು, ಅಂಶಿ ಬೆಂಗಳೂರು, ಸಿಹಿ ಬೆಂಗಳೂರು, ಶುಧ್ಧಿ ಅಳದಂಗಡಿ, ದೃಷ್ಟಿ ಹೊರನಾಡು, ಲಕ್ಷ್ಮಿ ವೀರಾಪುರ, ಪ್ರಶಮ್ ಹಾಸನ, ಹರ್ಷವರ್ಧನ್ ಹುಬ್ಬಳ್ಳಿ, ಸುಚಯ್ ಬೆಂಗಳೂರು).

ಇಲ್ಲಿ ಮುದ್ದು ಕಂದಮ್ಮಗಳು ಕೂಡ  ಪ್ರಯತ್ನ ಪಟ್ಟಿದ್ದು, ಹುರಿದುಂಬಿಸುವ ಸಲುವಾಗಿ ಪ್ರಸ್ತುತ ಪಡಿಸಲಾಗಿದೆ ಒಮ್ಮೆ ನೋಡಿ.

ಮಕ್ಕಳೆ ಹೀಗೆ ಭಾಗವಹಿಸುತ್ತಿರಿ, ಹೀಗೆ ಕಲಿಯುತ್ತಿರಿ,

ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್.

ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ

ಜ್ವಾಲಮಾಲ ಡಾಟ್ ನ್ಯೂಸ್