ಅರತಿ ಪುರ ಅರೆತಿಪ್ಪೂರು ಹೀಗೆ ಜೈನ ಸಂಸ್ಕೃತಿಯನ್ನು ಕರ್ನಾಟಕದಲ್ಲಿ ಸಂವರ್ಧನೆಗೊಳಿಸಿದ ಗಂಗಾ ಹೊಯ್ಸಳರ ಕಾಲದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಹೀಗಿನ ಅರೆತಿಪ್ಪೂರು ಗ್ರಾಮವು ಭೌಗೋಳಿಕವಾಗಿ ಮತ್ತು ಐತಿಹಾಸಿಕವಾಗಿ ಹೋಲಿಕೆಯಲ್ಲಿ ಶ್ರವಣ ಬೆಳಗೊಳದಂತೆ ಕಂಡರೂ ಬಂದರು ವೈಭವಪುರ್ಣವಾಗಿಲ್ಲ. ಆದರೆ ಕಲಾಕೃತಿಯ ದೃಷ್ಟಿಯಿಂದ ಪ್ರಗತಿ ಪಡೆಯದಿದ್ದರು ರಮ್ಯತೆಯನ್ನು ಹೊಂದಿದೆ. ಇಲ್ಲಿನ ತೀರ್ಥಗಳಲ್ಲಿ ಶ್ವೇತ ಕಮಲಗಳು ಕಂಗೋಳಿಸುತ್ತವೆ.
ಪೂರ್ವಕ್ಕೆ ಎರಡು ಬೆಟ್ಟಗಳಿದ್ದು ಅದರಲ್ಲಿ ಒಂದು ಚಿಕ್ಕ ಬೆಟ್ಟ ಇದನ್ನು ಕನಕಗಿರಿ ಎಂದು ಕರೆಯಲಾಗುತ್ತದೆ, ಇಲ್ಲಿ ನೈಸರ್ಗಿಕ ಗುಹೆಗಳು ಜೈನ ಬಸದಿಗಳು ನೀರಿನ ಕೊಳಗಳು ಕಂಡು ಬರುತ್ತವೆ. ನೈಸರ್ಗಿಕ ಇಳಿಜಾರು ಉಪಯೋಗಿಸಿಕೊಂಡು ನೀರು ಸಂಗ್ರಹವಾಗುವ ಕೊಳಗಳಿವೆ, ಇಲ್ಲಿ ನೀರು ಯಾವಗಲು ಬತ್ತುವುದಿಲ್ಲವೆಂದು ಗ್ರಾಮಸ್ಥರ ಹೇಳಿಕೆ. ಈ ನೀರ-ನೆ ಪೂಜೆ ವಿಧಾನಗಳಿಗೆ ಬಳಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಈ ಕೊಳವನ್ನೆ ಕನಕಗಿರಿ ತೀರ್ಥವೆಂದು ಕರೆಯಲಾಗುತ್ತದೆ.
ಈ ಕೊಳಕ್ಕೆ ಹೊಂದಿಕೊಂಡಂತೆ ಇರುವ ದೊಡ್ಡ ಬಂಡೆಯ ಮೇಲೆ ಜೈನ ತೀರ್ಥಂಕರರ ಹದಿನಾಲ್ಕು ಮೂರ್ತಿಗಳನ್ನು ಕೆತ್ತಲಾಗಿದೆ. ಇವೆ ಅಲ್ಲದೆ ಗಂಗ ಅರಸರ ಕಾಲದ ಹತ್ತು ಬಸದಿಗಳು, ಹೊಯ್ಸಳರ ಕಾಲದ ನಾಲ್ಕು ಬಸದಿಗಳು ನಿರ್ಮಿತವಾಗಿದ್ದವು ಎಂದು ಅಲ್ಲಿನ ಹಲವು ಯಕ್ಷ ಯಕ್ಷಿಯರ ಪ್ರತಿಮೆಗಳು, ಬಸದಿ ಸ್ತಂಭಗಳು, ಸಿಂಗ ಪೀಠ, ಬೋದಿಕೆಗಳು, ಧಾರ್ಮಿಕ ಸಂಘರ್ಷದಿಂದಲೊ ಪ್ರಕೃತಿ ವಿಕೋಪದಿಂದಲೊ ಬಸದಿಯ ನಾಶವಾಗಿರುವ ಸಕ್ಷಾಗಳಾಗಿ ಉಳಿದಿವೆ.
ಇಲ್ಲಿನ ಮತ್ತೊಂದು ಬೆಟ್ಟ ದೊಡ್ಡ ಬೆಟ್ಟ, ಇದನ್ನು ಶ್ರವಣಪ್ಪನ ಬೆಟ್ಟ ಎನ್ನುವರು ಇಲ್ಲಿ ಹತ್ತು ಅಡಿ ಎತ್ತರದ ಬಾಹುಬಲಿಯ ವಿಗ್ರಹವಿದ್ದು ಶ್ರವಣ ಬೆಳಗೊಳ ಮೂರ್ತಿಯಷ್ಟು ಎತ್ತರ ಹಾಗೂ ಸೌಂದರ್ಯ ಹೊಂದಿಲ್ಲದಿದ್ದರೂ ಮನಮೋಹಿಸುವಂತಿದೆ. ಖಡ್ಗಾಸನ ಭಂಗಿಯ ಶಾಂತ ನಿತ್ತ ಪ್ರಾಚೀನ ಮೂರ್ತಿಯಾಗಿರುವುದು ವಿಶೇಷ.
ಈ ಮೂರ್ತಿಯು ಎಂಟನೇ ಶತಮಾನದಲ್ಲಿ ಗಂಗ ಅರಸರಿಂದ ನಿರ್ಮಾಣವಾಗಿರಬಹುದಾಗಿದೆ, ದಕ್ಷಿಣ ಭಾರತದಲ್ಲಿಯೇ ಪ್ರಾಚೀನ ಮೂರ್ತಿಯಾಗಿದೆ, ಇದು ದಕ್ಷಿಣಾಭಿಮುಖವಾಗಿರುವುದು ವಿಶೇಷ. ಶ್ರವಣ ಬೆಳಗೊಳದ ಪ್ರಸಿದ್ದತೆಗೆ ಮೊದಲೆ ಅರೆತಿಪ್ಪೂರು ಗಂಗರ ಪವಿತ್ರ ಜೈನ ಕೇಂದ್ರವಾಗಿತ್ತು ಇಲ್ಲಿನ ಗೊಮ್ಮಟನಿಂದಲೆ ಈ ಗ್ರಾಮ ಪವಿತ್ರ ಕೇಂದ್ರವಾಗಿರಬಹುದು ಉಹಿಸಬಹುದ್ದಾಗಿದೆ.
ದಿನಾಂಕ 26-01-2020ರಂದು ಶ್ರೀಕ್ಷೇತ್ರ ಅರತಿ ಪುರ ದಿಗಂಬರ ಜೈನ ಮಠದವತಿಯಿಂದ ಪರಮ ಪೂಜ್ಯ ಸ್ವಸ್ತಿಶ್ರೀ ಸಿದ್ಧಾಂತ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರ ನೇತೃತ್ವದಲ್ಲಿ 24 ತೀರ್ಥಂಕರರ ಮಹಾಭಿಷೇಕ ಮತ್ತು 108 ಅವನ ಕುಂಡಗಳಿಂದ ಶನಿಗ್ರಹ ಸರ್ವದೋಷ ನಿವಾರಕ ವಿಶ್ವಶಾಂತಿ ಮಹಾಯಜ್ಞಾ ಅತ್ಯಂತ ವಿಧಿವತ್ತಾಗಿ ನೆರವೇರಿಸಲಾಯಿತು. ಇದರ ಕೆಲವು ದೃಷ್ಯಾವಳಿಗಳನ್ನು ನಿಮ್ಮಗಾಗಿ ತಂದಿದ್ದೆವೆ.













