ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣ ತೀರ್ಥ ನದಿಗಳ ಸಂಗಮದ ಸ್ಥಳದಲ್ಲಿರುವ 18 ಅಡಿ ಎತ್ತರದ ಈ ಮೂರ್ತಿಗೆ ಗ್ರಾಮಸ್ಥರು ಶ್ರವಣಕು ಎಂದು ಪೂಜಿಸುತ್ತಾರೆ. ಹೊಯ್ಸಳ ದೊರೆ ವಿಷ್ಣುವರ್ಧನನ ಮಹಾ ಪ್ರಧಾನ ದಂಡನಾಯಕ ಕುಣಸೀಮಯ್ಯನು ಈ ಬಾಹುಬಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದೆರೆನ್ನಲಾದ 875 ವರ್ಷಗಳ ಹಿಂದೆ ವಿಶಾಲವಾದ ದಿಣ್ಣೆಯ ಮೇಲೆ ಕಂಡುಬರುವ ಮೂರ್ತಿ ಹಾಗೂ ದೇವಸ್ಥಾನದ ಜಿನೇಶ್ವರ , ಯಕ್ಷ ಯಕ್ಷಿಯರ ಹಾಗೂ ಧ್ವಾರಪಾಲಕರ ಅನೇಕ ಮೂರ್ತಿಗಳ ಭಗ್ನಾವಶೇಷಗಳು ಅರೆಬರೆ ಜಕಿರುಮಂಟಪಗಳು , ಬಿರುಕು ಬಿಟ್ಟ ಅಲಂಕೃತ ಮೇಲ್ಛಾವಣಿಗಳು ನಯವಾದ ಹುಟ್ಟು ಕಂಬಗಳು ಸಂಘ ಪೀಠ ಹಾಗೂ ಕಲ್ಲು ಚಪ್ಪಡಿಗಳೆಲ್ಲವೂ ಗತಕಾಲದ ವೈವಿಧ್ಯಮಯ ಸಂಸ್ಕೃತಿಯನ್ನು ಸಾರಿಹೇಳುತ್ತಿವೆ. ವಿಶ್ವವಿಖ್ಯಾತ ಕೃಷ್ಣರಾಜಸಾಗರ ಹಿನ್ನೀರಿನ ಉತ್ತರ ದಿಕ್ಕಿನಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಗೆ ಸೇರಿದ ಬಸ್ತಿ ಹೊಸಕೋಟೆ. ಕುರುಬರ ಬಸದಿ ಹೀಗೆ ಬಸ್ತಿ ಬಸ್ತಿಹಳ್ಳಿ ಹೀಗೆ ಇನ್ನೂ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಗ್ರಾಮದಲ್ಲಿ ಪ್ರಾಚೀನ ಗೊಮ್ಮಟಮೂರ್ತಿಯೊಂದು ನೆಲೆನಂತಿದೆ. ಇದು ಪಂಚ ಬಸದಿಗಳೊಂದಿಗೆ ಜೈನರ ಪುಣ್ಯ ಕ್ಷೇತ್ರವಾಗಿ ಬೆಳಗಿ ಬಾಳಿದ ಪ್ರಾಪ್ತನ ಇತಿಹಾಸದ ಸ್ಥಳವಾಗಿದೆ. ಇಂತಹ ೊಂದು ಐತಿಹಾಸಿಕ ನಿಸರ್ಗ ರಮಣೀಯ ಸ್ಥಳ . ಈ ಸ್ಥಳದಲ್ಲಿರುವ ಭಗವಾನ್ ಬಾಹುಬಲಿಗೆ ಬಸದಿ ಹೊಸಕೋಟೆ ಭಗವಾನ್ ಬಾಹುಬಲಿ ದಿಗಂಬರ ಜೈನ್ ಟ್ರಸ್ಟ್ ವತಿಯಿಂದ ಮಹಾಮಸ್ತಕಾಭೀಷೇಕ .
ಪರಮಪೂಜ್ಯ ಸ್ವಸ್ಥೀಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು , ಸ್ವಸ್ಥಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಹಾಗೂ ಸ್ವಸ್ತಿಶ್ರೀ ಸಿದ್ದಾಂತ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ಹಾಗೂ ಮಾರ್ಗದರ್ಶನದೊಂದಿಗೆ ಧರ್ಮಸ್ಥಳದ ಶ್ರೀ ಸುರೇಂದ್ರಕುಮಾರ್ ಇವರ ಅಧ್ಯಕ್ಷತೆಯೊಂದಿಗೆ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಕೆ.ಆರ್. ಪೇಟೆ ತಾಲ್ಲೂಕಿನ ಶಾಸಕರಾದ ಶ್ರೀ ನಾರಾಯಣ ಗೌಡರು ಮೇಲುಕೋಟೆ ಕ್ಷೇತ್ರದ ಶಾಸಕರಾದ ಶ್ರೀ ಸಿ. ಎನ್ ಪುಟ್ಟರಾಜು , ಕೆ. ಆರ್ ನಗರ ಶಾಸಕರಾದ ಶ್ರೀ ಸಾ. ರಾ ಮಹೇಶ್ , ಮಂಡ್ಯ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಕೆ. ಶ್ರೀನಿವಾಸ್ , ರಾಜ್ಯ ಬಿ.ಜೆ.ಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಮ್. ವೈ ವಿಜಯೇಂದ್ರ ರವರು ಹಾಗೂ ಇನ್ನೂ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದು ವಿಜೃಭಂಣೆಯಿಂದ ಸಂಪನ್ನಗೊಳ್ಳಲಿದೆ. ಇಂತಹ ಒಂದು ಪುರಾತನ ಬಾಹುಬಲಿ ಕ್ಷೇತ್ರದಲ್ಲಿ ನಡೆಯುತ್ತಿರವ ವಿಶೇಷ ಕಾರ್ಯಕ್ರಮಕ್ಕೆ ಭಾಗವಹಿಸಿ ಕ್ಷೇತ್ರದ ಅಭಿವೃದ್ದಿ ಕಾರ್ಯಕ್ಕೆ ನಾವೂ ಕೂಡ ಭಾಗಿಯಾಗೋಣ ಬನ್ನಿ. ವಂದನೆಗಳೊಂದಿಗೆ ಜ್ವಾಲಾಮಾಲಾ ಡಾಟ್ ನ್ಯೂಸ್.













