ನಿನ್ನೆ ಸೆಮಿಫೈನಲ್ ಮುಗಿದು ಫೈನಲ್ ಗೆ ಬಂದಿರುವ ಒಂದು ಅಭೂತಪೂರ್ವಕಾರ್ಯಕ್ರಮ ಒಂದು ಕ್ರಾಂತಿಯನ್ನೇ ಸೃಷ್ಠಿಸಿದ ಕಾರ್ಯಕ್ರಮದಲ್ಲಿ ನೀವಿದ್ದೀರಾ ಇದೆರ ಪ್ರತಿಯೊಂದು ಕ್ಷಣವನ್ನು ಸವಿಯಿರಿ.
ತಾಯಿಯ ಒಡಲಲ್ಲಿ ಮಕ್ಕಳಿಗೆ ಭೇದವುಂಟೇ ? ಭಗವಂತನ ಸನ್ನಿಧಿಯಲ್ಲಿ ಭಕ್ತರಲ್ಲಿ ಭೇದವುಂಟೇ? ಬಂದಂತಹ ಅತಿಥಿಗಳನ್ನು ತಮ್ಮ ಸ್ವಂತ ಬಂಧುಗಳಂತೆ ಪ್ರೀತಿ ಮಮತೆ ತುಂಬಿ ಅತಿಥಿ ಸತ್ಕಾರದಲ್ಲಿ ಕಿಂಚಿತ್ತೂ ಲೋಪಬಾರದಂತೆ ನೋಡಿಕೊಂಡ ಶ್ರೀ ನಿರಂಜನ್ ಕುಮಾರ್ ಹಾಗೂ ಶ್ರೀಮತಿ ಪದ್ಮಲತಾ ದಂಪತಿಗಳ ಆತಿಧ್ಯದಲ್ಲಿ ಕಾರ್ಯಕ್ರಮ ಸಂಯೋಜನೆಯಲ್ಲಿ ದಿನ ಕಳೆದದ್ದೇ ತಿಳಿಯದಾಗಿ ಮರುದಿನ ಮತ್ತೊಂದು ಸುಂದರ ಪ್ರಸ್ತುತಿ ಸಮೂಹ ಗಾಯನದೊಂದಿಗೆ ಪ್ರಾರಂಭಗೊಂಡಿತು.
ಮೊದಲಿಗೆ ಇಂತಹ ಒಂದು ಸುಂದರ ಕಾರ್ಯಕ್ರಮದ ರೂವಾರಿಗಳು ಒಳ್ಳೆ ಕಾರ್ಯದ ಸಕಲ ಶ್ರೇಯವು ಸೇರುವ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ತಮ್ಮ ಅದ್ಭುತವಾದ ಪರಿಪೂರ್ಣವಾದ ನುಡಿಗಳಿಂದ ಎಲ್ಲರ ಮನದಾಳದಲ್ಲಿ ನಿಲ್ಲುವಂತೇ ಮಾತನಾಡಿದರು. ತೀರ್ಪುಗಾರರಾಗಿ ಆಗಮಿಸಿದ ಸುಶ್ಮಾ ಯಶ್ವಂತ್, ಶಂಕರ್ ಶಾನಭೋಗ್, ಶ್ರೀಮತಿ ಮಾಯಾ ಚಿನ್ಮಯ್ ಅವರನ್ನು ಗೌರವಿಸಲಾಯಿತು.
ರಾಜ್ಯ ಮಟ್ಟದ ಸ್ವರ್ಧೆಯಲ್ಲಿ ಆರು ವಿಭಾಗಗಳಿಂದ ಆಯ್ಕೆಗೊಂಡು ಹಾಗೂ ಸೆಮಿಫೈನಲ್ ನಲ್ಲೂ ಆರಿಸಲ್ಪಂತಹ ಸ್ಪರ್ಧಿಗಳು ತಮ್ಮ ಅಂತಿಮ ಸುತ್ತಿನಲ್ಲಿ ಗೆದ್ದು ಪಾರಿತೋಷಕ ಪಡೆಯುವ ಸಲುವಾಗಿ ತಯಾರಾಗಿ ಬಂದಿದ್ದರು. ಇಲ್ಲಿ ಗಮನಿಸಿದ ಮತ್ತೊಂದು ಸಂಗತಿಯೆಂದರೆ ಸೆಮಿಫೈನಲ್ ಹಾಗೂ ಫೈನಲ್ ಗಾಗಿ ಹಾಡಿದ ಪ್ರತಿ ಗೀತೆಗಳು ಒಂದಕ್ಕಿಂತ ಒಂದು ಸುಂದರವಾಗಿ ಮೂಡಿ ಬಂದಿದ್ದವು.
ಈ ನಡುವೆ ನಮ್ಮ ಸಂಘಟನಾ ಸಾರ್ವಭೌಮರಾದ ಶ್ರೀ ಡಿ. ಸುರೇಂದ್ರ ಕುಮಾರ್ ರವರು ಎಂದಿನಂತೆ ತಮ್ಮ ಗೀತೆಯಿಂದ ವೇದಿಕೆಯಲ್ಲಿದ್ದವರನ್ನು ಮಾತ್ರವಲ್ಲದೇ ನೆರೆದಿದ್ದ ಸಭಿಕರನ್ನು ಸಹ ನರ್ತಿಸುವಂತೆ ಮಾಡಿದರು. ಈ ಬಾರಿಯ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದಂತಹ ಶ್ರೀಮತಿ ನಾಗರತ್ನ ಇಂದುಕುಮಾರ್ ರವರನ್ನು ಸನ್ಮಾನ ಮಾಡಲಾಯಿತು. ಈಗ ಕಾರ್ಯಕ್ರಮದ ಪ್ರಮುಖ ಘಟ್ಟ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆಯ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಆಕರ್ಷಣೆಯಾಗಿ ಖ್ಯಾತ ಚಲನಚಿತ್ರ ನಟರಾದ ಶ್ರೀ ರಮೇಶ್ ಭಟ್ ಹಾಗೂ ಖ್ಯಾತ ಹಿನ್ನೆಲ್ ಗಾಯಕಿ ಶ್ರೀಮತಿ ಅರ್ಚನಾ ಉಡುಪಾ ರವರು ಹಾಗೂ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು , ಶ್ರೀ ನಿರಂಜನ್ ಕುಮಾರ್ ದಂಪತಿಗಳು , ಸುಪ್ರಿಯಾ ಹರ್ಷೇಂದ್ರ ಕುಮಾರ್ ಶ್ರೀ ಡಿ ಸುರೇಂದ್ರ ಕುಮಾರ್ ದಂಪತಿಗಳು, ಶ್ರೀ ಪುಷ್ಪರಾಜ್ ಜೈನ್ ರವರು ವೇದಿಕೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ನೆರೆದಿದ್ದ ಗಣ್ಯರುಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನಂತರ ಬಹುಮಾನ ವಿತರಣೆಯ ಸಮಯ ಜಿನಭಜನಾ ಸೀಸನ್ 4 ನಲ್ಲಿ ಜೈನಿಯರ್ ವಿಭಾಗದಲ್ಲಿ ಪ್ರೋತ್ಸಾಹಕ ಬಹುಮಾನವನ್ನು ಜ್ನಾನಸುಧಾ ತಂಡ ಹೊರನಾಡು, ತೃತೀಯ ಬಹುಮಾನವನ್ನು ಜಯದವಳ ತಂಡ ಮೂಡುಬಿದಿರೆ, ದ್ವಿತೀಯ ಬಹುಮಾನವನ್ನು ಪಾರ್ಶ್ವನಾಥ ತಂಡ ಜಮಖಂಡಿ ಹಾಗೂ ಪ್ರಥಮ ಬಹುಮಾನವನ್ನು ನಾದತಂಡ ಬೆಂಗಳೂರು ಪಡೆಯಿತು. ಹಾಗೂ ಹಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಶುಕ್ಲ ತಂಡ ಉಜಿರೆ, ದ್ವಿತೀಯ ಬಹುಮಾನವನ್ನು ಕುಂಥನಾಥ ಜಮಖಂಡಿ, ಹಾಗೂ ತೃತೀಯ ಬಹುಮಾನವನ್ನು ಶಾಂತಿನಾಥ ತಂಡ ಜಮಖಂಡಿ ಹಾಗೂ ಸಮಾಧಾನಕರ ಬಹುಮಾನವನ್ನು ಸಂಯೇಕ್ ತಂಡ ಧಾರವಾಡ, ಹಾಗೂ ಗೊಮ್ಮಟೇಶ ತಂಡ ಮಂಗಳೂರು ಇವರಿಗೆ ಲಭಿಸಿತು.













