ಶ್ರೀ ಕ್ಷೇತ್ರ ಶ್ರವಣ ಬೆಳಗೊಳ ಪರಮ ಪೂಜ್ಯ ಸ್ವಸ್ತಶ್ರೀ ಚಾರುಕೀರ್ತಿ ಭಟ್ಟಾರಕರವರ ಪಾದ ಸ್ಪರ್ಶದಿಂದ ಸರ್ವತೋಮುಖ ಅಭಿವೃಧ್ದಿಪಥದಲ್ಲಿ ಬೆಳಗಿದೆ. ಮೂರ್ತಿ ರೂಪದಲ್ಲಿ ಬಾಹುಬಲಿ ಶಾಂತಿ, ಅಹಿಂಸೆ, ತ್ಯಾಗಗಳ ಅಮರ ಸಂದೇಶ ಸಾರಿದರೆ ಕ್ಷೇತ್ರವು ಎಷ್ಟು ಜಗತ್ ವಿಖ್ಯಾತಗೊಂಡಿದೆಯೋ ಅಷ್ಟೆ ಎತ್ತರದ ಕೀರ್ತಿ ಶಿಖರವನ್ನೇರಿದ ಮೇರು ಮೂರ್ತಿ ಚಾರು ಶ್ರೀಗಳು ಎಷ್ಟು ಬಣ್ಣಿಸಿದರೂ ಕಡಿಮೆ ಎಂದೆನಿಸುವ ಅವರ ಜೀವಮಾನ ಸಾಧನೆಯ ಒಂದು ಸಂಕ್ಷಿಪ್ತ ನೋಟ.
ವೀಕ್ಷಕರೆ ನೀವು ನೋಡುತ್ತಿದ್ದಿರಿ ವರಾಂಗ ಕ್ಷೇತ್ರದ ಮನೋಹರ ನೋಟ, ಇಂತಹ ಒಂದು ಸುಂದರ ವಾತಾವರಣದಲ್ಲಿ ಶ್ರೀಗಳವರ ಬಾಲ್ಯ ಜೀವನ ಆರಂಭವಾಗುತ್ತದೆ. ಇಂತಹ ಒಂದು ಸುಂದರ ಪ್ರಕೃತಿಯ ಮಡಿಲಲ್ಲಿ ಶ್ರೀಗಳವರ ಪ್ರಾಥಮಿಕ ಶಿಕ್ಷಣ ಸಾಗುತ್ತದೆ.
ಶ್ರೀ ಕ್ಷೇತ್ರ ಹೊಂಬುಜ ಮಠಕ್ಕೆ ಸೇರಿದ ವರಾಂಗ ಪುರಾತನ ಜೈನ ಕೇಂದ್ರ ಅದು ವರಾಂಗ ದೊರೆಯ ಬಳುವಳಿ. ಭಗವಾನ್ ಶ್ರೀ ನೇಮಿನಾಥ ತೀರ್ಥಂಕರರು ಸ್ಥಳಿಯ ಬಸದಿಯ ಮೂಲ ಆರಾಧ್ಯ ದೈವ ಅಲ್ಲಿನ ಕೆರೆ ಬಸದಿ ಎಂಬ ಖ್ಯಾತ ಸುತ್ತಲಿನ ಗಗನ ಚುಂಬಿ ಹಸಿರಿನ ಮಧ್ಯೆ, ಸುಂದರ ಸರೋವರದ ಮಧ್ಯೆ ಇರುವಂತಹ ಚತುರ್ಮುಖ ಬಸದಿ. ಇಂತಹ ಒಂದು ಮನೋಜ್ಞಾ ವಾತಾವರಣದಲ್ಲಿ ಪರಂಪರೆಯಿಂದ ಪೌರೋಹಿತ್ಯ ಮಾಡುತ್ತ ಶಾಲಾ ಮಾಸ್ತರರು ಕೂಡ ಹಾಗಿದ ಚಂದ್ರರಾಜ ಇಂದ್ರರು ಹಾಗೂ ಅವರ ಮಡದಿ ಶ್ರೀ ಕಾಂತಮ್ಮ ದಂಪತಿಗಳಿಗೆ ಹುಟ್ಟಿದ್ದು 1949ರಲ್ಲಿ ಹುಟ್ಟಿದ್ದು ಮನೆತನಕ್ಕೆ ಬೆಳಕಾದ ಕೂಸು ರತ್ನಾಕರ.
ಅವರ ಸಹೋದರರು ಶ್ರೀಗಳ ಬಾಲ್ಯವನ್ನು ನೆನಪಿಸಿಕೊಂಡದ್ದು ಹೀಗೆ. (ಶ್ರೀಗಳ ಬಾಲ್ಯ ಅವರ ವಿಧ್ಯಾಭ್ಯಾಸ ಮತ್ತು ಅವರು ಅವರ 19ನೇ ವಯಸ್ಸಿನಲ್ಲಿ ತೆಗೆದು ಕೊಂಡ ದೀಕ್ಷೆಯ ಬಗ್ಗೆ ವಿವರಿಸಿದರು).
ಬಾಲಕ ರತ್ನಾಕರನ ಪ್ರಾಥಮಿಕ ವಿದ್ಯಾಭ್ಯಾಸ ಶ್ರೀ ಪದ್ಮಾಂಬ ಹಿರಿಯ ಪ್ರಾಥಮಿಕ ಶಾಲೆ ವರಂಗ ಇಲ್ಲಿಂದ ಪ್ರಾರಂಭವಾಗಿ ನಂತರದ ಪ್ರೌಡ ಶಿಕ್ಷಣ ಕಾರ್ಕಳದ ಅಶ್ರಮದಲ್ಲಿ ನಡೆಯುತ್ತದೆ.
ಮುಂದೆ ಧಾರ್ಮಿಕ ವಿದ್ಯಾಭ್ಯಾಸಕ್ಕಾಗಿ ಹೊಂಬುಜದ ಕುಂದ ಕುಂದ ಬ್ರಹ್ಮಚರ್ಯ ಆಶ್ರಮಕ್ಕೆ ಸೇರುತ್ತಾರೆ. ಅವರ ಗುರುಗಳಾದ ಹರಹದ್ದಾಸರು ಪರಮ ಪೂಜ್ಯ ದೇವೇಂದ್ರ ಕೀರ್ತಿಯವರ ಬಳಿಯಲ್ಲಿ ಅಲ್ಲಿನ ಧಾರ್ಮಿಕ ವಾತಾವರಣದಲ್ಲಿ ಸಂಸ್ಕೃತ ಪ್ರಾಕೃತ ಭಾಷೆಯಲ್ಲಿ ಪಾಂಡಿತ್ಯವನ್ನು ಪಡೆದು ತಮ್ಮ ಜ್ಞಾನ ಭಂಡಾರವನ್ನು ವೃಧಿಸಿಕೊಂಡ ತರುಣ ರತ್ನಾಕರರು ಉತ್ತಮ ವಾಗ್ಮಿಗಳಾಗಿದರು. ಇದಕ್ಕಿದಂತೆ ಅವರ ಬದುಕಿನಲ್ಲಿ ಮಹತ್ವದ ತಿರುವು ಪಡೆದುಕೊಂಡು ಗುರುಗಳಾದ ಹರಹದ್ದಾಸರ ಅಣತೆಯಂತೆ 1969ರ ಡಿಸೆಂಬರ್ 12ರಂದು ತಮ್ಮ 20ನೇ ವಯಸ್ಸಿನಲ್ಲಿ ಸನ್ಯಾಸದ ದಿಕ್ಷೇ ಪಡೆದುಕೊಂಡು 1970 ಏಪ್ರಿಲ್ 19ರಂದು ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯರಾಗಿ ಪಟ್ಟಾಭಿಷಿಕ್ತರಾದರು. ಅಂದಿನಿಂದ ಆರಂಭವಾಯಿತು ಮಠ ಹಾಗೂ ಕ್ಷೇತ್ರದ ಶ್ರೇಯೋಭಿವೃಧಿಗಾಗಿ ಉನ್ನತ ಧ್ಯೆಯುತ ಧಾರ್ಮಿಕ ನೇತೃತ್ವ ಈ ಐತಿಹಾಸಿಕ ಪುರಾತನ ಬೆಳಗೊಳವನ್ನು ಆಧುನಿಕ ಶ್ರವಣ ಬೆಳಗೊಳವನ್ನಾಗಿಸಿ ದೇಶ ವಿದೇಶಗಳೆಲ್ಲೆಡೆಯಿಂದ ಬರುವ ಯಾತ್ರಾರ್ತಿಗಳ ನೆಚ್ಚಿನ ತಾಣವನ್ನಾಗಿಸಿದರು. ಅತಿ ಕಿರಿಯ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ ಹೊತ್ತು ಆ ಸ್ಥಾನಕ್ಕೆ ಲೋಪಬಾರದಂತೆ ಪ್ರತಿಯೊಬ್ಬರಲೂ ಅತ್ಮಿಯತೆ ಸಹಾನುಭೂತಿ ಮೇರೆದ ಸಹೃದಯಿ.
ಭಟ್ಟಾರಕರಾದ ನಂತರವೂ ಕೂಡ ಅವರ ಗುರುತರ ಜವಾಬ್ದಾರಿಗಳ ನಡುವೆಯೂ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ ಬೆಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಎಂ.ಎ. ಮತ್ತು ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಫಿಲಾಸಫಿಯಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಅವರ ಅಗಾಧ ಜ್ಞಾನ ಭಂಡಾರದಲ್ಲಿ ಧಾರ್ಮಿಕ ತತ್ವಶಾಸ್ರಗಳಲ್ಲದೆ ಬಹು ಭಾಷಾ ಜ್ಞಾನಿಗಳು ಕೂಡ ಆಗಿದ್ದರು. ಭಟ್ಟಾರಕ ಪರಂಪರೆಯನ್ನು ಬೆಳಗಿಸಿ ಕೊಲ್ಲಾಪುರ, ಕಾರ್ಕಳ, ಕನಕಗಿರಿ, ಅರಹಂತಗಿರಿ, ಕಂಬದಹಳ್ಳಿ, ಮೂಡುಬಿದ್ರೆ, ಹೊಂಬುಜ, ಹೀಗೆ ಇನ್ನೂ ಅನೇಕ ಜೈನ ಮಠಗಳಿಗೆ ಭಟ್ಟಾರಕರುಗಳನ್ನು ನೀಡಿ ಅನೇಕ ಜೈನ ಕ್ಷೇತ್ರಗಳ ಅಭಿವೃದ್ದಿಯಲ್ಲಿ ಭಾಗಿಯಾದ ಆದರ್ಶ ಗುರು ಪೀಠ ಇವರದು.
ಬಾಹುಬಲಿ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆ, ಬ್ರಹ್ಮಚಾರಿಗಳ ಆಶ್ರಮ,ಪ್ರಾಕೃತ ವಿದ್ಯಾಲಯ, ಅತಿಥಿ ಗೃಹಗಳು, ಮಕ್ಕಳ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ, ಸಂಚಾರಿ ಆಸ್ಪತ್ರೆ, ನೇತ್ರ ಚಿಕಿತ್ಸಾಲಯ ಇನ್ನೂ ಹೀಗೆ ಅನೇಕ ಕೊಡುಗೆಗಳು 1981, 1993, 2006, 2018 ಹೀಗೆ ನಾಲ್ಕು ಮಸ್ತಕಾಭಿಷೇಕಗಳ ಯಶಸ್ವಿ ನೇತೃತ್ವ. ದೇಶಾದ್ಯಂತ ಶ್ರೀ ಧರ್ಮ ಚಕ್ರ ವಿಹಾರವನ್ನು ನಿರ್ವಿಜ್ಞಾವಾಗಿ ನೆರವೇರಿಸಿದ ಕೀರ್ತಿ, ಕನ್ನಡ ಹಾಗೂ ಹಳೆಗನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಿ ವಿದ್ವಾಂಸರುಗಳಿಗೆ ಪುರಸ್ಕಾರ, ವಿದೇಶಗಳಲ್ಲೂ ವಿಹರಿಸಿ ಧರ್ಮ ಪ್ರಚಾರಗೈದ ಮಹಾನ್ ವಾಗ್ಮಿ, ತಮ್ಮ ಅಗಾಧ ವಿದ್ವತ್ತಿನಿಂದ ಧವಲ, ಜಯಧವಲ, ಮಹಾಧವಲ ಎಂಬ ತ್ರಿಧವಲ ಗ್ರಂಥವನ್ನು ಕನ್ನಡಕ್ಕೆ ತಂದು ಆಗಮ ಭಗೀರಥ ಎಂಬ ಬಿರುದು. ಮಹಾಮಸ್ತಕಾಭಿಷೇಕದ ಅಂಗವಾಗಿ ಪ್ರತಿ ಬಾರಿಯು ಅನೇಕ ಬೃಹತ್ ಸಮ್ಮೇಳನಗಳನ್ನು ಮಾಡುವುದರ ಮೂಲಕ ಸಾಹಿತ್ಯ ಕ್ಷೇತ್ರದ ದಿಗ್ಗಜರನ್ನು ಗೌರವಿಸಿ ಸತ್ಕರಿಸಿದ ವಿಶಾಲ ಸಹೃದಯಿ . ಜನ ಕಲ್ಯಾಣ ಯೋಜನೆ ಅಡಿಯಲ್ಲಿ ಅನೇಕ ವೈದ್ಯಕೀಯ ಶಿಬಿರಗಳನ್ನು ಸುತ್ತಲಿನ ಜನರಿಗಾಗಿ ಸಮರ್ಪಿಸಿದ ಚತುರ್ವಿಧ ಧಾನಗಳಲ್ಲಿ ಹೆಸರಾದ ದಾನಿ. ಯಾವ ಆಧುನಿಕ ತಂತ್ರಜ್ಞಾನಗಳ ಬಳಕೆಯನ್ನು ಕೂಡ ಮಾಡದೆ ನೆಹರು ಇಂದಿರಾ ಗಾಂಧಿಯಿಂದ ಹಿಡಿದು ಇಂದಿನ ರಾಷ್ಟ್ರಪತಿಗಳು ಪ್ರಧಾನಿ ಮೋದಿಯಂತಹ ರಾಜಕೀಯ ದಿಗ್ಗಜರನ್ನು ಕ್ಷೇತ್ರಕ್ಕೆ ಬರಮಾಡಿಕೊಂಡು ಸತ್ಕರಿಸಿದ ಹಿರಿಮೆ. ಎಂಥವರು ಕೂಡ ಅವರ ಆಧರಾತಿತ್ಯಕ್ಕೆ ಗೌರವ ಕೊಡುವಂತಹ ಉನ್ನತ ವ್ಯಕ್ತಿತ್ವ.
ಪ್ರಾಕೃತ ಭಾಷಾ ಸಾಹಿತ್ಯದ ಸಂವರ್ಧನೆಗೆ ಶ್ರಮಿಸಿ ಪುನರ್ ಉತ್ಥಾನಗೊಳಿಸಿದ ಹರಿಕಾರ, ಸರ್ವಧರ್ಮ ಸಮನ್ವಯದ ಸಂತ, ಇಂದಿರಾ ಗಾಂಧಿಯವರಿಂದ ಕರ್ಮಯೋಗಿ, ಸಮಸ್ತ ಜೈನ ಸಮಾಜದವರಿಂದ ವಾಧ್ಯಾಯ ಸಿದ್ಧಾಂತ ಚಕ್ರವರ್ತಿ, ಆಧ್ಯಾತ್ಮ ಸೇವೆಗಾಗಿ ಜಿನ ಚರಣ ಬೃಂಗ, ಇತ್ತೀಚಿನ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ ಹೀಗೆ ಇನ್ನೂ ಹಲವಾರು ಅವರನ್ನು ನೋಡಿದ ಕ್ಷಣ ಏಕಕಾಲದಲ್ಲಿ ಅಲ್ಪಭಯ ಮನತುಂಬಿ ಭಕ್ತಿ ಗೌರವ ಪ್ರೀತಿ ಆದರಗಳಿಂದ ತನ್ನಿತಾನೆ ಶಿರವು ಬಾಗಿ ಅವರ ಪಾದ ಸ್ಪರ್ಶಿಸಲು ಅವಣಿಸುವಂತಹ ಕರುಣಾ ಮೂರ್ತಿಯ ಬಗ್ಗೆ ಎಷ್ಟು ತಿಳಿಸಿದರು ಸಮಯದ ಅಭಾವದಿಂದ ಕಡಿಮೆ ಎನಿಸುತ್ತಿದೆ. ಒಂದು ಮಾತ್ರ ಹೇಳಬಲ್ಲೆ ಅಪರೂಪದ ವ್ಯಕ್ತಿತ್ವ ಹೊಂದಿರುವ ಶ್ರೀಗಳು ನೂರಾರು ಕಾಲ ನಮ್ಮೊಂದಿಗಿರಲಿ ಎಂದು ಪ್ರಾರ್ಥಿಸುತ್ತಾ ಪೂಜ್ಯರಿಗೆ ನಮ್ಮ ತಂಡದಿಂದ ಪ್ರೀತಿ ಪೂರ್ವಕ ನಮೋಸ್ತು ನಮೋಸ್ತು ನಮೋಸ್ತು.
ಇಂತಹ ಪುಣ್ಯಾತ್ಮರ 50ನೇ ವರ್ಷಗಳ ದೀಕ್ಷಾ ಸುವರ್ಣ ಮಹೋತ್ಸವ ಸಮಸ್ತ ಭಟ್ಟಾರಕರುಗಳಿಂದ ನಡೆದ ಸುಸಂಧರ್ಭದಲ್ಲಿ ಈ ಪ್ರಸ್ತುತಿ. ಸುವರ್ಣ ಮಹೋತ್ಸವದ ಪ್ರಯುಕ್ತ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಳಲಾಗಿತ್ತು.
ಅಂದು ಅಕ್ಷರಶಃ ಶ್ರವಣ ಬೆಳಗೊಳದಿಂದ ಸಂಭ್ರಮ ಸಡಗರದಿಂದ ತುಂಬಿ ತುಳುಕಾಡಿತ್ತು, ಮಹಾ ಸ್ವಾಮೀಜಿಗಳ ಮಹಾ ಸಮಾಗಮವಾಗಿತ್ತು. ಸರ್ವ ಭಟ್ಟಾರಕರುಗಳ ಒಂದೇ ವೇದಿಕೆಯಲ್ಲಿ ಮಿಲನವಾಗಿತ್ತು. ಪರಮ ಪೂಜ್ಯ ಜಗದ್ಗುರು ಕರ್ಮಯೋಗಿಗಳ ಪಾದಾರಾವಿಂದದಿ ಶಿಷ್ಯ ವೃಂದ ಗುರುವಂದನೆ ಸಮರ್ಪಿಸಿದ ಅಪೂರ್ವ ದೃಶ್ಯಾವಳಿಗಳು ಕಣ್ಣಿಗೆ ಹಬ್ಬವನ್ನುಂಟು ಮಾಡಿತು. ದಿನಾಂಕ 08-12-2019 ಈ ದಿನ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿ ಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಗಳ 50 ವರ್ಷಗಳ ಪರಿಪೂರ್ಣತೆಯ ದೀಕ್ಷಾ ಸುವರ್ಣ ಮಹೋತ್ಸವ ಸಮಾರಂಭ ನಾಡಿನ ಪ್ರತಿಯೊಬ್ಬ ಗಣ್ಯರಿಂದ ಹಿಡಿದು ಜನ ಸಮಾನ್ಯರುಗಳ ಸಹಿತ ಈ ಒಂದು ಸಂತಸದ ಕ್ಷಣಗಳನ್ನು ಸವಿಯಲು ಸಾಗರೋಪಾದಿಯಲ್ಲಿ ಸೇರಿದ್ದರು. ವೇದಿಕೆಯಲ್ಲಿ ನಾಡಿನ ಹಾಗೂ ಪಕ್ಕದ ನಾಡಿನ ಸರ್ವ ಜೈನ ಮಠಗಳ ಮಠಾದಿಶರುಗಳು ಉಪಸ್ಥಿತರಿದ್ದು ಈ ಗುರುವಂದನಾ ಕಾರ್ಯ ಕ್ರಮದ ನೇತೃತ್ವ ವಹಿಸಿದರು. ಸ್ವತಹ ಭಟ್ಟಾರಕರುಗಳೆ ನಿಂತು ನಡೆಸಿಕೊಟ್ಟ ಇಂತಹ ಒಂದು ಕಾರ್ಯಕ್ರಮ ಇದೆ ಪ್ರಪ್ರಥಮವಾಗಿ ನಡೆದಿತ್ತು.
ಅದರೆ ಜಗದ್ಗುರುಗಳಿಗೆ ಇದ್ಯಾವುದು ಒಗ್ಗದು ಅವರು ವೇದಿಕೆಗೆ ಬಂದವರೇ ಅವರಿಗಾಗಿ ಸಿದ್ಧಪಡಿಸಿದ್ದ ಅಲಂಕಾರಿಕ ಆಸನವನ್ನು ತೆರವುಗೊಳಿಸಿ ಉಳಿದ ಭಟ್ಟಾರಕರುಗಳ ಆಸನದಂತೆ ತಮ್ಮ ಆಸನವನ್ನು ಸ್ವಿಕರಿಸಿದರು. ಸರಳತೆಯ ಸಕಾರ ಮೂರ್ತಿ ನಮ್ಮ ಚಾರು ಶ್ರೀಗಳು. ನಾ-ಮುಂದು ತಾ-ಮುಂದು ಎಂದು ಗುರುಗಳನ್ನು ಕಂಡು ತಮ್ಮ ಭಕ್ತಿಯನ್ನು ಸಮರ್ಪಿಸಲು ಭಕ್ತವೃಂದದಿಂದ ನೂಕುನುಗ್ಗಲು ನಿರ್ಮಾಣವಾಗಿತ್ತು.
ಭಟ್ಟಾರಕರುಗಳಿಂದ ಎಂದಿಗೂ ಇನ್ನೆಂದಿಗೂ ಯಾರಿಗೂ ಸಲ್ಲಿಸದ ರೀತಿಯಲ್ಲಿ ಬೃಹತ್ ಅಭಿನಂದನೆಯನ್ನು ಸಲ್ಲಿಸಿ ಸಿದ್ಧಾಂತ ಚಿಂತಾಮಣಿ ಎಂಬ ಬಿರುದನ್ನು ನೀಡಿ ಕಾಣಿಕೆಗಳನ್ನು ಒಪ್ಪಿಸಿ ಸಂತಸ ಪಟ್ಟು ಗುರು ಭಕ್ತಿ ಮೆರೆದರು. ಚಾರುಶ್ರೀಗಳ ಅಭಿನಂದನ ಪತ್ರವು ಕೂಡ ಸ್ವತಹ ಭಟ್ಟಾರಕರುಗಳಿಂದಲೇ ವಾಚನವಾಯಿತು. ಚಾರುಶ್ರೀಗಳ ಅಭಿನಂದನ ಪತ್ರವನ್ನು ಕನಕಗಿರಿ ಶ್ರೀಗಳು ವಾಚಿಸಿದರು.
ನಾಡಿನ ಪ್ರತಿ ಸಂಘ ಸಂಸ್ಥೆಯಿಂದಲೂ ಗುರುಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಅಲ್ಲಿ ನಡೆದ ಸಂಭ್ರಮ ಸನ್ಮಾನ ಹಾಗೂ ಅಭಿನಂದನೆ ಇದ್ಯಾವುದು ತನ್ನದಲ್ಲವೇನೊ ಎಂಬಂತೆ ಮುಗ್ದಮಗುವಿನಂತೆ ಕುಳಿತು ಎಲ್ಲವನ್ನು ಸ್ವೀಕರಿಸಿದ ಪರಿ ಮೆರೆದ ಪ್ರಬುದ್ದತೆ, ತಾಳ್ಮೆ, ವಿನಯತೆ, ವರ್ಣಿಸಲಾಗದ ವಿಷಯ . ಬಹುಶಃ ಈ ಪರಿಯ ನಮ್ರತೆ ಇನ್ಯಾರಿಗೂ ಬಾರದು. ಗೊಮ್ಮಟನಿಗೂ ಗೊಮ್ಮಟನ ಎತ್ತರಕ್ಕು ಮಿಗಿಲಾದ ಎತ್ತರದಲ್ಲಿ ಅಂದು ಪೂಜ್ಯರು ಕಂಡರು, ನಿಮ್ಮನ್ನು ಪಡೆದ ನಾವೇ ಧನ್ಯರು. ಸಮಸ್ತ ಭಟ್ಟಾರಕ ಸ್ವಾಮೀಜಿಗಳಿಂದ ಶ್ರೀಗಳಿಗೆ ಪಾದ ಪೂಜೆ ನೇರವೇರಿತ್ತು.
ಶ್ರೀಗಳವರು ಮಾತನಾಡಿ ಇಲ್ಲಿ ಇಂದು ಏನಾಗಿದೆ ಎಂದು ನನ್ನ ಅರಿವಿಗೆ ಬರುತ್ತಿಲ್ಲಾ ಇಲ್ಲಿ ಇಂದು ಅದ್ಬುತ ನಡೆದಿದೆ. ಇಷ್ಟು ಅಭಿಮಾನಿಗಳನ್ನು ನಾನು ನೆನೆಸಿರಲಿಲ್ಲಾ ಎಂದು ಸಕಲ ಭಕ್ತಾಧಿಗಳ ಅಭಿನಂದನೆಗೆ ಪ್ರತಿಯಾಗಿ ಆಶೀರ್ವದಿಸಿದರು.
ಇಂತಹ ಅಪೂರ್ವ ಕಾರ್ಯಕ್ರಮಗಳಿಗೆ ವೀಕ್ಷಿಸುತ್ತಿರಿ ವಂದನೆಗಳೊಂದಿಗೆ
ಜಿನ ದರ್ಶನ













