ಎಲ್ಲರಿಗೂ ಜೈ ಜಿನೇಂದ್ರ ದಿನಾಂಕ 9-12-2017 ಅಂದು ಶ್ರೀ ಕ್ಷೇತ್ರ ಶ್ರವಣ ಬೆಳಗುಳದಲ್ಲಿ ಗೊಮ್ಮಟ ಜಿನ ಭಕ್ತಿ ಗೀತಾಂಜಲಿಯ ಅಂತಿಮ ಸುತ್ತುಗಳ ಸ್ಪರ್ಧಾ ಕಾರ್ಯಕ್ರಮ, ಇಡಿ ರಾಜ್ಯದ ಜೈನ ಬಾಂಧವರನ್ನು ತನ್ನತ್ತ ಸೇಳೆದ ಒಂದು ಅದ್ಬುತ್ತ ಕಾರ್ಯಕ್ರಮ ಸುಂದರ ವೇದಿಕೆ ಬಹಳ ಅಚ್ಚುಕಟ್ಟಾದ ಕಾರ್ಯಕ್ರಮಗಳ ಸಂಯೋಜನೆ. ಪರಮ ಪೂಜ್ಯ ಸ್ವಾಮೀಜಿಯವರಿಂದಲೆ ಈ ಸಾಲಿನ ಮಸ್ತಕಾಭಿಷೇಕ ಕಾರ್ಯಕ್ರಮಗಳಲ್ಲಿ ಸುಂದರವಾದ್ದದೇಂಬ ಹಿರಿಮೆಗಳಿಸಿದ ಅಭೂತ ಪೂರ್ವ ಯಶಸ್ಸನ್ನು ಗಳಿಸಿದ ಒಂದು ಕಾರ್ಯ ಕ್ರಮ ಇದು.
ಅಂದಿನ ಕಾರ್ಯ ಕ್ರಮ ಪ್ರಾರಂಭವಾಗಿದ್ದು ಭಂಡಾರ ಬಸದಿಯಲ್ಲಿನ ಜಿನ ಅಭಿಷೇಕದಿಂದ. ಸಮಾರಂಭದ ಯಶಸ್ವಿಗಾಗಿ ಮಂಗಳ ಕಳಶ ಸ್ಥಾಪನೆ.
ಪರಮ ಪೂಜ್ಯ ಜಗತ್ಗುರು ಕರ್ಮ ಯೋಗಿ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ಆರಂಭವಾದ ಅಂದಿನ ಸಭಾ ಕಾರ್ಯಕ್ರಮದ ಉದ್ಗಾಟನೆಯನ್ನು ಅದೆನ್ಮ ಚೇತನ ಟ್ರಸ್ಟ್ ನ ಡಾ|| ತೇಜಸ್ವಿನಿ ಅನಂತ್ ಕುಮಾರ್ ರವರು ನಡೆಸಿ ಕೊಟ್ಟು ಮಾತನಾಡಿ (ಕಾರ್ಯಕ್ರಮದಲ್ಲಿ ಬಾಗವಹಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು).
ಕಾರ್ಯ ಕ್ರಮದ ಪರಿಕಲ್ಪನ ಕಾರರಾದ ಅನಿತಾ ಸುರೇಂದ್ರ ಕುಮಾರ್ ರವರು ಸಭೆಯನ್ನು ಉದ್ದೆಶೀಸಿ ಮಾತನಾಡಿ (ಮಹಾವೀರ ಶಾಂತಿ ರಾಷ್ಟೀಯ ಪ್ರಶಸ್ತಿ ಶ್ರೀ ಗಳಿಗೆ ದೊರಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು).
ಸೆಮಿಪೈನಲ್ ಸುತ್ತಿನ ಕೆಲವು ಗೀತೆಗಳು ನಿಮಗಾಗಿ
ಬೆಂಗಳೂರಿನ ಅಧ್ಯಾತ್ಮ ಕಲಾಸಂಘದಿಂದ ನಾಟಕ ಪ್ರದರ್ಶನ.
ಕಾರ್ಯಕ್ರಮದ ಪ್ರತಿ ಘಟ್ಟದಂತೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಯಶಸ್ವಿ, ಎಸ್.ಡಿ.ಎಂ ಕಲಾ ವೈಭವದಿಂದ ಅದ್ಬುತ್ತ ಪ್ರದರ್ಶನ.
ಮಾರನೆ ದಿನವಾದ 10-12-2017ರಂದು ಸಂಭ್ರಮಯುತ ತಯಾರಿಯೊಂದಿಗೆ ದಿನ ಪ್ರಾರಂಭವಾಗಿ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ದ್ಯೆಯ ಗೀತೆಯೊಂದಿಗೆ ಅರಂಭಗೊಂಡಿತು.
ಭಜನಾ ಕಮ್ಮಟದಲ್ಲಿ ಕುಮಾರಿ ಪೂಜಾ ಮೋಹನ್ ರವರಿಂದ ಭಜನಾ ಪಾಠವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಪರಿಚಯ ಮತ್ತು ಆರು ವಿಭಾಗಗಳಲ್ಲಿ ನಡೆದ ಜಿನ ಭಕ್ತಿ ಗೀತಾಂಜಲಿ ಸ್ಪರ್ದೆ ತಯಾರಿಯ ಒಂದು ವೀಡಿಯೊ ಪ್ರಸ್ತುತಿಯನ್ನು ಅಲ್ಲಿ ನೀಡಲಾಯಿತು.
(ಈಗಿನ ನಮ್ಮ ಸಮಾಜಕ್ಕೆ ಜಿನ ಭಜನೆಯ ಅತ್ಯವಶ್ಯಕತೆ ಮರೆತು ಅದಕ್ಕೆ ಇನ್ನೂ ಹೆಚ್ಚಿನ ಮೇರಗನ್ನು ತುಂಬಿ ಯೋಜನೆಯನ್ನು ರುಪಿಸಿದ್ದು ಅನಿತಾ ಸುರೇಂದ್ರಕುಮಾರ್ ರವರು ಅದು ಗೊಮ್ಮಟ ಜಿನ ಭಕ್ತಿ ಗೀತಾಂಜಲಿ. ಇಂತಹ ಒಂದು ಸುಂದರ ಯಶಸ್ವಿ ಕಾರ್ಯಕ್ರಮದಲ್ಲಿ ನಾವೆಲ್ಲಾ ಬಾಗಿಯಾಗಲು ಕಾರಣ ಕರ್ತೃಗಳಾಗಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಭಜನೆಯ ಸಂಸ್ಕೃತಿಯನ್ನು ಮನೆ ಮನೆಗೆ ತಲುಪಿಸಿದ ಕೀರ್ತಿ ಶೇಷ ಮಾರ್ನಾಡು ವರ್ಧಮಾನ ಹೆಗ್ಡೆ. ಇದರ ಸ್ಮರಣಾರ್ಥವೆ ಇಂದು ನೀಡುತ್ತಿರುವ ಪಾರಿತೋಷಕ ಹಾಗೂ ತಮ್ಮ ಹಲವು ಜವಬ್ದಾರಿಗಳ ನಡುವೆಯು ಭಜನಾ ಸಂಸ್ಕೃತಿಗೆ ಕಾರ್ಯಕಲ್ಪ ನೀಡಿದ ಧರ್ಮಸ್ಥಳದ ಧರ್ಮಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಅವರ ಶ್ರೀಮತಿ ಹೇಮಾವತಿ ಹೆಗ್ಗಡೆಯವರು. ಇವರುಗಳ ಸ್ಪೂರ್ತಿ ಪಡೆದು ಉನ್ನತ ಧ್ಯೆಯೋದೇಶವಿಟ್ಟು ಇದನ್ನು ತಾವು ತಮ್ಮದೆ ಶೈಲಿಯಲ್ಲಿ ಮುಂದುವರೆಸಿಕೊಂಡು ಬಂದಿರುವ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು.
ಇಂತಹ ಒಂದು ಕಾರ್ಯಕ್ರವನ್ನು ಗುರುತಿಸಿ ಮಹಾಮಸ್ತಕಾಭಿಷೇಕದ ಅಂಗವಾಗಿ ನಡೆಯುವ ಬೃಹತ್ ವೇದಿಕೆಯನ್ನು ಇದಕ್ಕಾಗಿ ಕಲ್ಪಿಸಿಕೊಟ್ಟು ಆಶಿರ್ವದಿಸಿದ ಪರಮ ಪೂಜ್ಯ ಜಗತ್ಗುರು ಕರ್ಮ ಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಗೆ ನಮ್ಮ ತಂಡ ಹೊಂದಿಸುತ್ತ ಇವರೆಗು ಆರು ವಿಭಾಗಗಳು ಜೊತೆಗೂಡಿ ನಡೆಸಿಕೊಟ್ಟ ಸ್ಪರ್ಧಕಾರ್ಯಕ್ರಮ).
ಇಂದಿನ ದಿನ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ ತಂಡಗಳು ತಮ್ಮ ಗೀತೆಯೊಂದಿಗೆ ಮೂಕವಿಸ್ಮಿರನ್ನಾಗಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಮುಖ್ಯ ಅಕರ್ಷಣೆಯಾಗಿ ಖ್ಯಾತ ರಂಗ ಭೂಮಿ ಕಲಾವಿದರಾದ ಶ್ರೀಮತಿ ಬಿ. ಜಯಶ್ರೀ, ಖ್ಯಾತ ಕನ್ನಡ ಚಲನಚಿತ್ರ ನಟ ಡಾ|| ಶ್ರೀಧರ್, ಖ್ಯಾತ ಹಿನ್ನೆಲೆ ಗಾಯಕರಾದ ಶ್ರೀಮತಿ ಮಂಜುಳ ಗುರುರಾಜ್, ಸಭೆಯನ್ನು ರಂಜಿಸಿದರು.
ಪರಮ ಪೂಜ್ಯ ಶ್ರೀಗಳಿಂದ ಆಶಿರ್ವಚನ.
ಕಾರ್ಯಕ್ರಮದ ಕಾತರ ಕ್ಷಣ ಫಲಿತಾಂಶ ಪ್ರಕಟಣೆ ಹಾಗೂ ಬಹುಮಾನ ವಿತರಣೆ. ವೇದಿಕೆಯಲ್ಲಿ ಶ್ರೀಮತಿ ಹೇಮಾವತಿ ಹೆಗ್ಗಡೆಯವರು, ಶ್ರೀ ಡಿ ಸುರೇಂದ್ರ ಕುಮಾರ್ ರವರು, ಶ್ರೀ ಎಸ್. ಜಿತೇಂದ್ರ ಕುಮಾರ್ ರವರು, ಶ್ರೀಮತಿ ಡಾ|| ನೀರಜಾ ನಾಗೇಂದ್ರ ಕುಮಾರ್, ಶ್ರೀ ಎಸ್.ಎನ್ ಅಶೋಕ್ ಕುಮಾರ್ ರವರು ಹಾಗೂ ಶ್ರೀಮತಿ ಸುಪ್ರಿಯ ಹರ್ಷೇಂದ್ರ ಕುಮಾರ್ ರವರು ಉಪಸ್ಥಿತರಿದ್ದರು













