ಸೋಂದಾ ಸಿದ್ಧಚಕ್ರ ಆರಾಧನೆ

ಪ್ರಕೃತಿ ನಿತ್ಯ ಜೀವಂತಿಕೆಯ ಸಂಕೇತ, ವೀಕ್ಷಕರೆ ಈ ಬಾರಿ ಸ್ವಾತಿ ಸುತ್ತಲಿನ ಮೈದುಂಬಿ ಹಸಿರಿನಿಂದ ಕಂಗೊಳಿಸುತ್ತಿದ ಸುಂದರ ಪ್ರಕೃತಿಯ ನೋಟದೊಂದಿಗೆ ಇಂದಿನ ಮಾಲಿಕೆಯಲ್ಲಿ ಹೇಳಿದಂತೆ. ನಿಮ್ಮಗಳ ಧರ್ಮೊಪಾಸನೆಗಾಗಿ ಮುದ್ದಾದ ತೀರ್ಥಂಕರ ಪ್ರತಿಮೆಗಳ ಅಭಿಷೇಕದ ಮನೋಹರ ನೋಟವನ್ನು ಪೂರ್ಣಿಸಿ ನಿಮಗಾಗಿ ಸಿದ್ಧಪಡಿಸಿದೇವೆ.

ನಮ್ಮ ತಂಡ ಅಂದು ಸುಧಾಪುರಕ್ಕೆ ತೆರಳಿದಾಗ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿಗಳವರ ನೇತೃತ್ವದಲ್ಲಿ ಬೃಹತ್ ಸಿದ್ಧ ಚಕ್ರ ಆರಾಧನೆ ಮುಕ್ತಾಯದ ದಿನದ ಅಂಗವಾಗಿ ಶ್ರೀ ಜಿನಾಭಿಷೇಕ ಚತುರ್ ವಂಶ ತೀರ್ಥಂಕರರಿಗೆ ಏಕ ಕಾಲದಲ್ಲಿ ಪಂಚಾಮೃತ ಅಭಿಷೇಕ ಹಾಗೂ ಕಲ್ಪದೃಮ ಪೂಜೆ ಏರ್ಪಡಿಸಲಾಗಿತ್ತು. ಶ್ರೀ ಕ್ಷೇತ್ರ ಅರತಿ ಪುರದ ಶ್ರೀಗಳಾದ ಸ್ವಸ್ತಿಶ್ರೀ ಸಿದ್ಧಾಂತ ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ಮಹೋತ್ಸವ ಜರುಗಿತು.

(ವೀಕ್ಷಕರೆ ಸುಧಾಪುರ ಸೊಂದ ಎಂದೆಲ್ಲ ಕರೆಯಲ್ಪಡುವ ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠದಲ್ಲಿ ನಡೆಯುತ್ತಿರುವ ಶ್ರೀ ಬೃಹತ್ ಸಿದ್ಧ ಚಕ್ರ ಆರಾಧನಾ ಮಹೋತ್ಸವದಲ್ಲಿಂದು ನಾವಿದ್ದೇವೆ).

ಈ ಕಾರ್ಯಕ್ರಮದ ಪಾಯೋಜಕರು ಶ್ರೀ ಬಿ ಪ್ರಸನಯ್ಯ, ಶ್ರೀಮತಿ ಪದ್ಮಲತಾ ಪ್ರಸನಯ್ಯ, ಶ್ರೀ ಪ್ರಮೋದ್, ಶ್ರೀಮತಿ ರೂಪಾಲಿ ಪ್ರಮೋದ್, ಪ್ರತಿಕ್ ಜೈನ್, ಹಾಗೂ ಪೀಶಾ ಜೈನ್.

(ಇಂದು ಇಲ್ಲಿ ಚತುರ್ ವಂಶ ತೀರ್ಥಂಕರರಿಗೆ ಪಂಚಾಮೃತ ಅಭಿಷೇಕದ ಸಹಿತ ಕಲ್ಪದೃಮ ಆರಾಧನೆ ನಡೆಯಲಿದೆ. ಅದರ ಪೂರ್ವ ತಯಾರಿ ಇಲ್ಲಿ ನಡೆಯುತ್ತಿದೆ).

ಅಂದಿನ ಬಹು ಮುಖ್ಯ ಅಂಗ ನೋಡಲೆ ಬೇಕಾದ ಅತ್ಯಂತ ಅಕರ್ಷಣಿಯ ದೃಶ್ಯಾವಳಿ ಮುತ್ತಿನ ಕೆರೆಯಲ್ಲಿ ತೆಪ್ಪೊತ್ಸವ.

 

ಇಂತಹ ಭಕ್ತಿಪ್ರಧಾನ ಕಾರ್ಯಕ್ರಮಗಳಿಗಾಗಿ ವೀಕ್ಷಿಸಿಸುತ್ತೀರಿ.

ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್