ದಿನಾಂಕ 19/4/2019ರಂದು ಶ್ರೀ ಕ್ಷೇತ್ರ ಆರತಿಪುರ ದಿಗಂಬರ ಜೈನ ಮಠದ ನೂತನ ಪಟ್ಟಾದೀಶರಾದ ಪರಮಪೂಜ್ಯ ಸ್ವಸ್ತಿ ಶ್ರೀ ಸಿದ್ದಾಂತ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಗಳು ಪಟ್ಟಾಭಿಷಿಕ್ತರಾದ ನಂತರ ಇದೇ ಮೊದಲ ಬಾರಿಗೆ ರಾಜಧಾನಿ ಬೆಂಗಳೂರು ಮಹಾ ನಗರಕ್ಕೆ ಪುರಪ್ರವೇಶ ಮಾಡಿದ್ದು ,ಶ್ರೀಗಳಿಗೆ ಗುರುವಂದನಾ ಕಾರ್ಯಕ್ರಮ ಹಾಗೂ 2018 ನೇ ಮಹಾವೀರ ಜಯಂತ್ಯೋತ್ಸವವನ್ನು ಕರ್ನಾಟಕ ಜೈನ್ ಅಸೋಸಿಯೇಷನ್ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾದ ಆಯ್ದ ಕ್ಷಣಗಳು ನಿಮ್ಮ ಮುಂದೆ. ಶ್ರೀಗಳವರನ್ನು ಮೆರವಣಿಗೆ ಮೂಲಕ ಕೆ.ಜಿ.ಎ ಜಿನ ಮಂದಿರದ ಬಳಿ ಭವ್ಯ ಸ್ವಾಗತ ಹಾಗೂ ಪಾದ ಪೂಜೆ ನೆರವೇರಿಸಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಡಾ|| ಹಂಪಾ ನಾಗರಾಜಯ್ಯನವರು ಆಗಮಿಸಿದ್ದು ಅಧ್ಯಕ್ಷತೆಯನ್ನು ಶ್ರೀ ಎಸ್. ಜಿತೇಂದ್ರ ಕುಮಾರ್ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಸ್ಟಿಸ್ ಶ್ರೀ ಅಜಿತ್ ಜಿ ಗುಂಜಾರ್, ಶ್ರೀ ಟಿ. ಜಿ ದೊಡ್ಡಮನಿ , ಶ್ರೀ ಪ್ರಸನ್ನಯ್ಯ , ಶ್ರೀ ಎಮ್. ಜೆ ಬ್ರಹ್ಮಯ್ಯ , ಡಾ|| ಎಸ್. ಡಿ ಪ್ರೇಮಕುಮಾರಿ , ಶ್ರೀ ಎಮ್. ಎ ಬ್ರಹ್ಮದೇವ್ ಮುಂತಾದವರು ಭಾಗವಹಿಸಿದ್ದರು.
ಶ್ರೀ ರಾಜೇಂದ್ರ ಕುಮಾರ್ ರವರು ಪ್ರಾಸ್ಥಾವಿಕ ನುಡಿಗಳಾಡಿದರು. ಡಾ|| ಹಂಪಾ ನಾಗರಾಜಯ್ಯನವರು ಸಭಿಕರನ್ನುದ್ದೇಶಿ ಮಹಾವೀರರ ಜೀವನದ ಸ್ವಾರಸ್ಯಕರವಾದ ಸಂಗತಿಗಳನ್ನು ತಿಳಿಸಿದರು. ಎಸ್. ಜಿತೇಂದ್ರಕುಮಾರ್ ರವರು ಮಾತನಾಡಿ ಇತ್ತೀಚೆಗಷ್ಟೇ ಮಹಾವೀರ ಜಯಂತಿ ಕಾರ್ಯಕ್ರಮ 17 ನೇ ತಾರೀಖು ಸಂಪನ್ನಗೊಂಡಿತು. ಆದರೆ ಈಗ ಮೂರು ವರ್ಷಗಳ ಹಿಂದೆ ನಮ್ಮ ಕರ್ನಾಟಕ ಸರ್ಕಾರದವರು ಮಹಾವೀರ ಜಯಂತಿಯನ್ನು ನಾವು ರಾಜ್ಯ ಸರ್ಕಾರದ ವತಿಯಿಂದ ರಾಜ್ಯಾದ್ಯಂತ ನಾವೇ ಆಚರಣೆ ಮಾಡುತ್ತೇವೆಂದು ಒಂದು ಸರ್ಕಾರಿ ಆದೇಶ ಹೊರಡಿಸಿ ಅಲ್ಲಿಂದ ಅವರು ನಿರಂತರವಾಗಿ ನಡೆಸಿಕೊಂಡು ಬಂದರು. ಆದರೆ ಈ ಸಾರಿ ನೀತಿ ಸಂಹಿತೆ ಬಂದಿದ್ದರಿಂದ ಚುನಾವಣೆ ಇದ್ದಿದ್ದರಿಂದ 17 ನೇ ತಾರೀಖಿನ ಕಾರ್ಯಕ್ರಮವನ್ನು ಅವರು ನಮ್ಮ ರಾಜ್ಯ ಸರ್ಕಾರದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಒಂದು ಸಾಧಾರಣವಾಗಿ ಸಂಜೆ ಕಾರ್ಯಕ್ರಮವನ್ನುರವೀಂದ್ರ ಕಲಾಕ್ಷೇತ್ರದಲ್ಲಿ ಸಂಪನ್ನಗೊಳಿಸಿದರು. ಹಾಗಾಗಿ ನಾವು ಮಹಾವೀರ ಜಯಂತಿಯನ್ನು ನಾವು ಕರ್ನಾಟಕ ಜೈನ್ ಅಸೋಸಿಯೇಟ್ಸ್ ವತಿಯಿಂದ ಹೇಗೆ ಆಚರಣೆ ಮಾಡಬೇಕು ಎಂದು ಆಲೋಚನೆ ಮಾಡುತ್ತಿದ್ದಾಗ ನಮಗೆ ಪ್ರಪ್ರಥಮ ಗೋಚರವಾದವರು ಅಂದರೆ ನಮ್ಮ ಆರತಿಪುರದ ಭಟ್ಟಾರಕ ಸ್ವಾಮೀಜಿಯವರು ಎಂದು ತಿಳಿಸಿದರು.
ನಂತರ ಶ್ರೀಗಳವರು ಅವರ ಆಶೀರ್ವಚನದಲ್ಲಿ ಮಾತನಾಡಿ, ಮಹಾವೀರ ಸ್ವಾಮಿಯವರು ಇಲ್ಲಿದ್ದಾರೆ ಎಂದು ಕೆಲವು ಜನಗಳು ಕೇಳಿದರು. ಕೆಲವು ಜನ ಕೇಳಿದರು ಜೈನ ಧರ್ಮದವರು ಇದ್ದಾರ ಎಂದು , ಆದರೆ ನಾವು ಏನು ಹೇಳಿದೇನೆಂದರೆ ಎಲ್ಲಿ ಅಹಿಂಸೆ ಇದೆಯೋ
ಎಲ್ಲಿ ಸತ್ತಿದೆಯೋ , ಎಲ್ಲಿ ಅಶೌರ್ಯವಿದೆಯೋ ಎಲ್ಲಿ ಅಪರಿಗ್ರಹ ಇದೆಯೋ ಮತ್ತು ಎಲ್ಲಿ ಬ್ರ ಹ್ಮಚರ್ಯತ್ವ ಇದೆಯೋ ಅಲ್ಲೆಲ್ಲಾ ಕಡೆಯೂ ಮಹಾವೀರ ಸ್ವಾಮಿ ಇದ್ದಾರೆ. ಒಂದೇ ಜಾತಿ, ಒಂದೇ ಧರ್ಮ ಹಾಗೂ ಒಂದೇ ಮತಗಳಲ್ಲಿ ಮಹಾವೀರ ಸ್ವಾಮಿಯವರು ಇಲ್ಲ ಎಂದು ಹೇಳಲು ಮತ್ತು ಅದು ಸಾಧ್ಯವು ಕೂಡ ಆಗುವುದಿಲ್ಲ . ನಂತರ ಅಲ್ಲಿ ನೆರೆದಿದ್ದ ಗಣ್ಯರಿಗೆಲ್ಲರಿಗೂ ಸನ್ಮಾನವನ್ನು ಮಾಡಲಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ ದೇವೇಂದ್ರ ಸ್ವಾಮಿಯವರು ವಂದಿಸಿದರು. ಇದೇ ರೀತಿಯಾದಂತಹ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿರಿ . ವಂದನೆಗಳೊಂದಿಗೆ ಜ್ವಾಲಾಮಾಲಾ ಡಾಟ್ ನ್ಯೂಸ್.













