ಜೈ ಜಿನೇಂದ್ರ ವೀಕ್ಷಕರೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮೈಸೂರಿನ ಹಾಗೂ ಚಾಮರಾಜನಗರದ ಸಮಾಜದ ವತಿಯಿಂದ ಸ್ವಸ್ತಿಶ್ರೀ ಭುವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ನೇತೃತ್ವದಲ್ಲಿ ದಿನಾಂಕ 09-03-2019ರಂದು ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಅದ್ದೂರಿಯಾಗಿ ನಡೆದ ದೃಶ್ಯಾವಳಿಗಳು ನಿಮ್ಮಗಾಗಿ.
(ಸ್ವಸ್ತಿಶ್ರೀ ಭುವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಮಾತನಾಡಿ ಇಂದು ನಾವು ಭಕ್ತಿ ಕಾಣಿಕೆ ಸೇವೆ ಅಭಿಷೇಕವನ್ನು ಸಲ್ಲಿಸುತ್ತಿದ್ದಿವಿ, ಮಹಾಸ್ವಾಮಿಯ ತ್ಯಾಗದ ಸಂಕೇತವಾಗಿರುವಂತಹದ್ದು, ನಾನವೇಲ್ಲರೂ ಕೂಡ ಎಲ್ಲರ ಅನುಗ್ರಹಯುಕ್ತವಾಗಿ ಇಂತಹ ಕಾರ್ಯಕ್ರಮಗಳನ್ನು ಮಾಡಬೇಕು ಅಂತ ಹೇಳುತ್ತ, ಇಂದು ಭಾರತ ದೇಶದ ಅಹಿಂಸ ಬಂಧುಗಳಿಗೆ ಸಧಾವಕಾಶವಾಗಿದೆ. ಇಂದು ಮಹಾಸ್ವಾಮಿಗೆ ಅಭಿಷೇಕವನ್ನು ಅರ್ಪಿಸುವುದರ ಮೂಲಕ ಮಸ್ತಕಾಭಿಷೇಕವನ್ನು ಮಾಡಿದ್ದೆವೆ. ಇದೆಲ್ಲದಕ್ಕೂ ಕೂಡ ಮಾರ್ಗ ದರ್ಶನ ಸಹಕಾರ ಮಾಡುತ್ತಿರುವಂತಹ ರಾಜ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ನಮ್ಮ ಸಮಾಜದ ಪರವಾಗಿ ಸಂಸ್ಥೆಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲಾ ಸಮಾಜದವರು ಬಂದು ಗುರುಗಳ ಸಾಕ್ಷಿಯಾಗಿ ಸಮಕ್ಷಮದಲ್ಲಿ ಮಹೋತ್ಸವವನ್ನು ನಡೆಸಿಕೊಟ್ಟಿದೇವೆ. ಎಲ್ಲರಿಗೂ ಕೂಡ ಸಹ ಶಾಂತಿ ಮತ್ತು ಸಹ ಬಾಳ್ವೆಯಾಗಿರುವಂತಹ ಸೂತ್ರ ಜೀವನದಲ್ಲಿ ನಿರ್ಮಾಣವಾಗಲಿ ಎಂದು ಹೇಳಿ ಎಲ್ಲರಿಗೂ ಶುಭವಾಗಲ್ಲಿ ಎಂದು ಹೇಳಿದರು).
ರಾಜ ಶ್ರೀ ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಮೈಸೂರಿನ ಸುತ್ತಮುತ್ತಲ್ಲಿನ ಜೈನ ಶ್ರಾವಕರು ಅನೇಕ ಕ್ಷೇತ್ರಗಳನ್ನು ಬೆಳೆಸಿದ್ದಾರೆ. ಕಾರ್ಯಕ್ರಮವನ್ನು ನಡೆಸಿಕೊಟ್ಟಂತಹ ಶ್ರೀ ಗಳಿಗೆ ಮತ್ತು ಮೈಸೂರಿನ ಹಾಗೂ ಚಾಮರಾಜನಗರದ ಶ್ರಾವಕ ಬಂಧುಗಳಿಗೆ ಧರ್ಮಸ್ಥಳದ ಕ್ಷೇತ್ರದ ಪರವಾಗಿ ಮತ್ತು ಮಹಾಮಸ್ತಕಾಭಿಷೇಕದ ಸಮಿತಿಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು).
ಮಹಾಮಸ್ತಕಾಭಿಷೇಕದ ಅಂತಿಮದಲ್ಲಿ ಶ್ರೀಗಳವರು ಇಂತಹ ಒಂದು ಸುವರ್ಣ ಅವಕಾಶವನ್ನು ಕಲ್ಪಿಸಿ ಕೊಟ್ಟಂತಹ ಪೂಜ್ಯ ಧರ್ಮಾಧಿಕಾರಿಗಳ ಡಾ|| ವೀರೇಂದ್ರ ಹೆಗ್ಗಡೆಯವರಿಗೆ ದನ್ಯವಾದಗಳನ್ನು ಸಲ್ಲಿಸಿದರು. ಹಾಗೂ ಪೂಜ್ಯ ಹೆಗ್ಗಡೆಯವರು ಶ್ರೀಗಳವರಿಗೆ ಗೌರವಿಸಿ ಸನ್ಮಾನಿಸುವುದರ ಮೂಲಕ ಮಹಾಮಸ್ತಕಾಭಿಷೇಕದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದರು













