ನೀವೀಗ ನೋಡುತ್ತಿರುವುದು ಅಯೋಧ್ಯ ನಗರಿಯ ಶ್ರೀ ಆದಿನಾಥ ಮಹಾರಾಜರ ವೈಭವಯುತ ಆಸ್ಥಾನ ಮಂಟಪ . ಗತಕಾಲದ ವೈಭವವನ್ನು ನಿಮ್ಮ ಮುಂದೆ ತರುತ್ತಿರುವ ಪಂಚಮಹಾ ವೈಭವ ನಿಮಗಾಗಿ. ಬಂಧುಗಳೇ ಈ ದಿನದಲ್ಲಿ ಭಗವಾನ್ ಬಾಹುಬಲಿಯ ದೃಶ್ಯಾವಳಿಗಳಲ್ಲಿ ಅಯೋಧ್ಯೆಯಲ್ಲಿ ವೃಷಭನಾಥ ಆಸ್ಥಾನದ ವೈಭವವನ್ನು ಸವಿದಿದ್ದೇವೆ. ಸಂತೋಷದಿಂದ ಆಡಳಿತ ಮಾಡಿಕೊಂಡಿದ್ದ ವೃಷಭನಾಥರ ಆಸ್ಥಾನಕ್ಕೆ ಆಗಮಿಸಿದ ಪ್ರಜೆಗಳು ಕಾಮಧೇನು, ಕಲ್ಪವೃಕ್ಷಗಳು ಕಣ್ಮರೆಯಾಗಿ ಸಹಜವಾದ ಜೀವನ ಕ್ರಮದಲ್ಲಿ ಅಲ್ಲೋಲ ಕಲ್ಲೋಲವಾಗಿದ್ದನ್ನು ನಿವೇದಿಸಿಕೊಳ್ಳುತ್ತಾರೆ. ಆಗ ವೃಷಭನಾಥರು ಪ್ರಜೆಗಳಿಗೆ ಅಭಯವನ್ನಿತ್ತು ಅವರಿಗೆ ಹಸಿ, ಮಸಿ, ಕೃಷಿ, ವಾಣಿಜ್ಯ , ವಿದ್ಯೆ ,ಶಿಲ್ಪಗಳ ಬೋದನೆ ಮಾಡಿ ಜೀವನೋಪಾಯದ ಮಾರ್ಗವನ್ನು ಬೋದಿಸಿದ ದೃಶ್ಯಾವಳಿಗಳನ್ನು ನೋಡಿದ್ದೇವೆ.
ಈ ಕಾರಣದಿಂದ ನಮ್ಮ ಮಹಾರಾಜರು ಆದಿಬ್ರಹ್ಮರಾಗಿಯೂ ಯುಗಪ್ರವರ್ತಕರಾಗಿಯೂ ಗುರುತಿಸಿಕೋಂಡಿದ್ದನ್ನು ನಾವು ಹೆಮ್ಮೆಪಟ್ಟಿದ್ದೇವೆ .ಇದಾದ ಬಳಿಕ ನಮ್ಮ ಮಹಾಪ್ರಭುಗಳ ಆಸ್ಥಾನಕ್ಕೆ ಯಶಸ್ವತಿದೇವಿ , ಸುನಂದಮಹಾದೇವಿಯರು ಆಗಮಿಸಿ ತಾವು ಕಂಡ ಕನಸುಗಳನ್ನು ತಮಗಾದ ಬಯಕೆಗಳನ್ನು ತಮ್ಮ ಪತಿಯಲ್ಲಿ ನಿವೇದಿಸಿಕೊಂಡು ಅವುಗಳ ಅರ್ಥವನ್ನು ಕೇಳಿಕೊಂಡಿದ್ದನ್ನು ತಾವು ನೋಡಿದ್ದೀರಿ. ಕುತೂಹಲಿಗಳಾಗಿದ್ದ ಮಹಾರಾಣಿಯವರಿಗೆ ಮಹಾ ಜ್ನಾನಿಗಳಾಗಿರುವ ತಮ್ಮ ಮಹಾಪ್ರಭುಗಳು ಮಹಾರಾಣಿಯವರಿಗೆ ಪುತ್ರ ರತ್ನರನ್ನು ಪಡೆಯುವ ಭಾಗ್ಯದ ಫಲವನ್ನು ವಿವರಿಸುತ್ತಾರೆ. ಇದಾದ ಸ್ವಲ್ಪ ಕಾಲದ ಬಳಿಕ ಮಹಾರಾಣಿಯವರಿಗೆ ಭರತ, ಬಾಹುಬಲಿ ಬ್ರಾಹ್ಮಿ ಸುಂದರಿಯರೇ ಮೊದಲಾದ ತೇಜಸ್ವಿಗಳಾದ ಮಕ್ಕಳು ಜನಿಸುವುದು ಆಗ ವೃಷಭನಾಥನು ಪುತ್ರೋತ್ಸವವನ್ನು ನಾಮಕರಣ ಮಹೋತ್ಸವವನ್ನು ಹಾಗೂ ಬಾಲಲೀಲೋತ್ಸವಗಳನ್ನು ನೆರವೇರಿಸಿ ಸಂತೋಷಪಟ್ಟಿದನ್ನು ನೋಡಿ ಕಂಡು ಧನ್ಯರಾಗಿದ್ದೆವು. ಈ ದಿನದಲ್ಲಿ ಭಗವಾನ್ ಬಾಹುಬಲಿಯ ದೃಶ್ಯಾವಳಿಗಳಲ್ಲಿ ಸ್ರೀಶಿಕ್ಷಣ ಕಲೆ ಸಂಸ್ಕೃತಿ ಎಂಬ ದೃಶ್ಯದ ಮಂಗಳ ಮಹೋತ್ಸವದಲ್ಲಿ ಭಾಗವಹಿಸಿದ್ದೇವೆ. ಮಹಾರಾಜ ಆದಿನಾಥರು ತಮ್ಮ ಮಕ್ಕಳಿಗೆ ನಾನಾ ವಿದ್ಯೆಗಳನ್ನು ಬೋದಿಸಿ ಸಂಸ್ಕಾರ ವಿದಿಗಳನ್ನು ನೆರವೇರಿಸಿಕೊಟ್ಟ ದೃಶ್ಯಗಳನ್ನು ನಾವು ಕಣ್ಣಾರೆ ಕಂಡ ಧನ್ಯರಾಗಿದ್ದೇವೆ.
360 ಡಿಗ್ರಿ ಅಭಿನಯ ಪ್ರಸ್ಥುತಿಯಿಂದ ಆಸ್ಥಾನ ಸಭೆಯಲ್ಲಿರುವಷ್ಟು ಹೊತ್ತು ಬಾಹ್ಯ ಪ್ರಪಂಚದ ಅರಿವೇ ಇಲ್ಲದಂತೆ ಗತಕಾಲದ ವೈಭವವನ್ನು ನೆನಪಿಸಿದ ದೃಶ್ಯಾವಳಿಗಳನ್ನು ಮುಂದಿನ ಸಂಚಿಕೆಯಲ್ಲೂ ವೀಕ್ಷಿಸಲಿದ್ದೀರಿ. ಇಂತಹ ಪುಣ್ಯ ಪ್ರಧಾನವಾದ ಕಾರ್ಯಕ್ರಮಗಳೊಂದಿಗೆ ಮತ್ತೆ ಬರುಲಿದ್ದೇವೆ ವೀಕ್ಸಿಸಿ ವಂದನೆಗಳೊಂದಿಗೆ ಜ್ವಾಲಾಮಾಲಾ ಡಾಟ್ ನ್ಯೂಸ್.













