ಪರಮ ಪೂಜ್ಯ ಶ್ರೀಗಳವರು ಆಶೀರ್ವಚನದಲ್ಲಿ ಜೈನ ಸಮುದಾಯದಲ್ಲಿ ವಿಶೇಷ ಸೇವಾ ಕಾರ್ಯದಲ್ಲಿ ಸಂಘಟಿತಗೊಂಡಿರುವ ಜೈನ್ ಮಿಲನ್ ಗೂ ಹಾಗೂ ಜೈನ ಮಠಕ್ಕೂ ಅವಿನಾಭಾವ ಸಂಬಂಧವಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕಲ್ಪದ್ರುಮ ಎಂಬ ಹೆಸರಿನ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ನಂತರ ಒಂದು ಪುಟ್ಟ ಹುಡುಗಿಯು ಮಾತನಾಡಿ ಜೈನ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಗಳು ಹಲವು ವವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ನಮ್ಮ ಸಮುದಾಯವನ್ನು ಒಂದು ಉನ್ನತ ಕ್ಷೇತ್ರದಲ್ಲಿದ್ದು ಇಡೀ ವಿಶ್ವವೇ ನೋಡುವಂತೆ ಆಗಿದೆ ಹಾಗು ನಾವು ಇದೇ ಒಗ್ಗಟ್ಟನ್ನು ನಾವುಗಳೆಲ್ಲರೂ ಮುಂದುವರೆಸಿಕೊಂಡು ಹೋಗೋಣವೆಂದು ತುಂಬಾ ಉತ್ಸಾಹದಿಂದ ಆಡಿದ ಮಾತುಗಳು ಅಲ್ಲಿ ನೆರೆದಿದ್ದ ಎಲ್ಲರ ಮನಮುಟ್ಟುವಂತಿತ್ತು.
ನಂತರ ವಲಯ ಅಧ್ಯಕ್ಷರಾದ ಶ್ರೀ ಇ. ವಿ. ಅಜ್ಜಪ್ಪರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ಎಲ್ಲಾ ಕೆಲಸಗಳಿಗೂ ಸಹಕಾರ ವನ್ನು ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದರು. ನಂತರ ಹೆಚ್ . ಪಿ ಸುಮತಿಕುಮಾರ್ ರವರು ಮಾತನಾಡಿ ಎಲ್ಲರಿಗೂ ಧನ್ನವಾದಗಳನ್ನು ತಿಳಿಸಿದರು. ಕುಮುದಾ ನಾಗಭೂಷಣ್ ರವರ ನಿರೂಪಣೆಯಲ್ಲಿ ಮೂಡಿಬಂತು.













