ಜಿನಸಮ್ಮಿಲನ ಭಾಗ ೨

ಎಸ್. ಎಸ. ಎಂ. ಆರ್ ವಿ ಡಿಗ್ರಿ ಕಾಲೇಜಿನ ಸಹಯೋಗದೊಂದಿಗೆ  ನಡೆದ  ಈ ಕಾರ್ಯಕ್ರಮದಲ್ಲಿ  ವಿಭಾಗ ಮಟ್ಟದ ತ್ರೋಬಾಲ್  ಹಾಗೂ ರಂಗೋಲಿ ಸ್ಪರ್ಧೆಗಳು  ಅಚ್ಚುಕಟ್ಟಾದ  ಆಯೋಜನೆ ಮೂಲಕ  ನಡೆಯಿತು. ಕಾರ್ಯಕ್ರಮದ ವಿಶೇಷತೆಯಾಗಿ  ಧಾರ್ಮಿಕ ಚರ್ಚೆ ಮತ್ತು ಹರಟೆ ಕಾರ್ಯಕ್ರಮ ಖ್ಯಾತ ವಾಗ್ಮಿಗಳಾದ  ಮಿನಿರಾಜು  ರಂಜಾಳರವರ ನೇತೃತ್ವದಲ್ಲಿ ಆಧ್ಯಾತ್ಮ ಮತ್ತು ಆಧುನಿಕತೆ  ವಿಚಾರವಾಗಿ ನಡೆಯಿತು.  ಗೋಷ್ಠಿಯಲ್ಲಿ ಡಾ|| ನೀರಜಾ  ನಾಗೇಂದ್ರ ಕುಮಾರ್ ರವರು , ಎನ್ . ನಿಹಾಲ್ ರಾಜ್ , ಸುಧಾ ಪಿ. ಜೈನ್ , ಅಭಿನಂದನ್ , ಜಿನೇಂದ್ರ  ಹಾಗೂ ಸಂತೋಷ್ ರವರು  ಪಾಲ್ಗೊಂಡಿದ್ದರು.

 

ಸಮಾರೋಪ ಸಮಾರಂಭದಲ್ಲಿ  ಶ್ರೀ ಸುರಂದ್ರ ಕುಮಾರ್ ರವರು ಮತ್ತು ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು , ಇ.ಜೆ .  ಡೆವಲಪರ್ಸ್ ನ  ನಿರಂಜನ್ ಜೈನ್ , ಯುವ ಅಜಿತ್ ರವರು, ಶ್ರೀಮತಿ ಶ್ರದ್ಧಾ ಅಮಿತ್, ಶ್ರೀ ಮೃತ್ಯುಂಜಯ್ ರವರು, ಆರ್ . ಅಶೋಕ್, ಎಸ್. ಅನಿಲ್ ಕುಮಾರ್ ರವರು , ನಿರ್ಮಲ್ ಕುಮಾರ್ ರವರು ಭಾಗವಹಿಸಿದ್ದು ವಿಜೇತರುಗಳಿಗೆ ಪ್ರಶಸ್ತಿ ನೀಡಿದರು. ಇಂತಹ  ಅತ್ಯುನ್ನತ ಕಾರ್ಯಕ್ರಮ ಸಮಾಜಕ್ಕೆ  ಅತ್ಯವಶ್ಯಕವಾಗಿದ್ದು ನಿರಂತರ ಇಂತಹ ಕಾರ್ಯಕ್ರಮಗಳು  ಜರುಗಿತ್ತಿರಲಿ ಎಂಬುದು ನಮ್ಮ ಆಶಯ. ಮತ್ತೆ ಭೇಟಿಯಾಗೋಣ ವಂದನೆಗಳೊಂದಿಗೆ ಜ್ವಾಲಾಮಾಲಾ ಡಾಟ್ ನ್ಯೂಸ್.