ಜೈ ಜಿನೇಂದ್ರ ರೀ ಬರ್ರೀ ಈಗಷ್ಟೇ ನಮ್ಮ ಧಾರವಾಡದಲ್ಲಿ ನಡೆದ ಜಿನಭಜನಾ ಸ್ಪರ್ಧೆ ಕಡೆಗ ನಮ್ಮದೊಂದು ಗಮನ ಹರಿಸೋಣ. ನಮ್ಮಂದಿ ಸತ್ಕಾರ ನಮ್ ಧಾರವಾಡ್ ಪೇಡದಷ್ಟೇ ಸಿಹಿ ಯಾಗಿರ್ ತೈತಿ ನಮ್ ಧಾರವಾಡ್ ಮಂದಿ ಪೇಟ ಕಟ್ಟುವುದಷ್ಡೇ ಅಷ್ಡೇ ಚಂದ್ ಇರತೈತಿ .
ಭಾರತೀಯ ಜೈನ್ ಮಿಲನ್ ವಲಯ 8ರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಫಬ್ರವರಿ 2019 ರಲ್ಲಿ ಜರುಗಲಿರುವ ಭಗವಾನ್ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರ ಪರಿಕಲ್ಪನೆಯ ರಾಜ್ಯ ಮಟ್ಟದ ಜಿನಭಜನಾ ಸ್ಪರ್ಧೆಯ ಪೂರ್ವಭಾವಿಯಾಗಿ ನಡೆದ ಧಾರವಾಡ ವಿಭಾಗ ಮಟ್ಟದ ಭಜನಾ ಸ್ಪರ್ಧೆ ದಿನಾಂಕ 18/11/2018ರಂದು ಧಾರವಾಡದ ಈಶಾವಾಸ್ಯಂ ಸಭಾಂಗಣದಲ್ಲಿ ಬಹಳ ಅಚ್ಚುಕಟ್ಟಾದ ಕೈಯೋಜನೆಯ ಮೂಲಕ ನಡೆಯಿತು.
ಪ್ರಾರ್ಥನೆ ಅತಿಥಿಗಳಿಂದ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ|| ನಿರಂಜನ್ ಕುಮಾರ್ ರವರು ಮತ್ತು ಶ್ರೀಮತಿ ಪದ್ಮಲತಾ ನಿರಂಜನ್ ಕುಮಾರ್ ರವರು , ಮುಖ್ಯ ಅತಿಥಿಗಳಾಗಿ ಅಜ್ಜಪ್ಪಾಜಿರವರು , ಸುಮಂತ್ ಕುಮಾರ್ ರವರು , ದತ್ತಾ ಢೋರಲೆರವರು ಹಾಗೂ ಜೀವನ್ ದತ್ತ್ ಕುಮಾರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಪದ್ಮಲತಾ ನಿರಂಜನ್ ರವರು ಮಾತನಾಡಿ ಕಾರ್ಯಕ್ರಮದ ಹಿಂದೆ ಶ್ರಮಿಸಿದ ವ್ಯಕ್ತಿಗಳಿಗೆ ಕೃತಙ್ನತೆ ಸಲ್ಲಿಸಿದರು. ಡಾ|| ನಿರಂಜನ್ ಕುಮಾರ್ ರವರು ಮಾತನಾಡಿ ಸತ್ಯ ಹಾಗೂ ದೇವರನ್ನು ಹುಡುಕುವ ಸುಲಭವಾದ ಮಾರ್ಗ ಭಜನೆ ಎಂದು ಅಭಿಪ್ರಾಯಪಟ್ಟರು. ನಂತರ ಆಯ್ದ ತಂಡಗಳಿಂದ ವಿವಿಧ ರೀತಿಯ ಶೈಲಿಗಳಲ್ಲಿ ಭಜನೆಗಳನ್ನು ಪ್ರಸ್ತುತಪಡಿಸಿದರು. ತೀರ್ಪುಗಾರರಾಗಿ ಡಾ|| ಶಾಂತರಾಮ್ ಹೆಗ್ಗಡೆ , ಡಾ|| ಪವಿತ್ರ ಜೈನ್ ಹಾಗೂ ಗಾಯತ್ರಿ ದೇಶಪಾಂಡೆಯವರು ಭಾಗವಹಿಸಿದ್ದರು. ವಿಜೇತ ಸ್ಪರ್ಧಾಳುಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಇಂತಹ ವಿಶೇಷ ಸುದ್ದಿಗಳೊಂದಿಗೆ ಮತ್ತೆ ಭೇಟಿಯಾಗೋಣ ವಂದನೆಗಳೊಂದಿಗೆ ಜ್ವಾಲಾಮಾಲಾ ಡಾಟ್ ನ್ಯೂಸ್.













