ಕುದೇರು ವರ್ಷಿಕಾ ಪೂಜೆ

ಚಾಮನಗರಜಿಲ್ಲೆಯ  ಕುಬೇರ ಕ್ಷೇತ್ರದಲ್ಲಿನ  1008 ಭಗವಾನ್ ಶ್ರೀ ಆದಿನಾಥ ತೀರ್ಥಂಕರರ  ದಿಗಂಬರ ಜೈನ ಬಸದಿಯ  ವಾರ್ಷಿಕ  ಪೂಜಾ ಮಹೋತ್ಸವ 

ಮತ್ತು 108  ಕಳಸಾಭೀಷೇಕ ಪೂಜೆ  ಪರಮಪೂಜ್ಯ ಸ್ವಸ್ಥಿಶ್ರೀ  ಭುವನ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಗಳವರ ಪಾವನ ಸಾನಿಧ್ಯದಲ್ಲಿ 18/11/2018 ರಂದು ನಡೆಯಿತು.  ಪೂಜಾ ಕಾರ್ಯಕ್ರಮವನ್ನು ನಿಮಗಾಗಿ ಪ್ರಸ್ತುತ ಪಡಿಸುತ್ತದ್ದೇವೆ ವೀಕ್ಷಿಸಿ ಪುಣ್ಯ ಪಾವನರಾಗಿ.

 

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ  ಪೂಜ್ಯ ಶ್ರೀಗಳವರ  ಪಾವನ ಸಾನಿಧ್ಯದಲ್ಲಿ  ಸಭೆಯ ಅಧ್ಯಕ್ಷರಾಗಿ ಶ್ರೀ ಆರ್. ಎಸ್ ವರ್ಧಮಾನ್ ರವರು ಮುಖ್ಯ ಅತಿಥಿಗಳಾಗಿ , ಶ್ರೀ ಸಿ. ಎನ್ ನಾಗರತ್ನರಾಜು  ಹಾಗೂ ಪ್ರವಚನಕಾರರಾಗಿ ಡಾ|| ಅಭಿಜಿತ್ ಗೌಡರವರು ಭಾಗವಹಿಸಿದ್ದರು. ಅರುಣ್ ಪಂಡಿತ್ ರವರ  ಸ್ವಾಗತದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಡಾ|| ಅಭಿಜಿತ್ ರವರು  ಅವರ ಅನಿಸಿಕೆಗಳನ್ನು ಹಂಚಿಕೊಂಡರು. ನಂತರ ಶ್ರೀಗಳವರು  ತಮ್ಮ ಆಶೀರ್ವಚನದಲ್ಲಿ ಸಪ್ತ ತತ್ವಗಳ ವಿಚಾರವಾಗಿ ಅರಿವು ಮೂಡಿಸಿದರು.  ವಿಜಯ್ ಕುಮಾರ್ ಪಂಡಿತ್ ರವರು ನಿರೂಪಿಸಿದ ಕಾರ್ಯಕ್ರಮದಲ್ಲಿ  1008 ಭಗವಾನ್  ಶ್ರೀ ಆದಿನಾಥ ತೀರ್ಥಂಕರರ  ದಿಗಂಬರ ಜೈನ ಬಸದಿ ಟ್ರಸ್ಟ್ ನ ಪದಾದಿಕಾರಿಗಳು  ಹಾಗೂ ಸದಸ್ಐರುಗಳು ಉಪಸ್ಥಿತರಿದ್ದು ವಾರ್ಷಿಕ ಪೂಜಾ ಕಾರ್ಯಕ್ರಮ  ಅತ್ಯಂತ ಯಶಸ್ವಿಯಾಗಿ ಜರುಗಿತು. ಇಂತಹ ವಿಶೇಷ ಸುದ್ದಿಗಳೊಂದಿಗೆ ಮತ್ತೆ ಭೇಟಿಯಾಗೋಣ ವಂದನೆಗಳೊಂದಿಗೆ ಜ್ವಾಲಾಮಾಲಾ ಡಾಟ್ ನ್ಯೂಸ್.