ದರ್ಮಸ್ಥಳ ಮಹಾಮಸ್ತಕಾಭಿಷೇಕ, ಹೆಗ್ಗಡೆ ಸನ್ಮಾನ

ಜೈ ಜಿನೇಂದ್ರ ವೀಕ್ಷಕರೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಕೀರ್ತಿಶೇಷ ಶ್ರೀ ರತ್ನವರ್ಮ ಹೆಗ್ಗಡೆಯವರು ಮತ್ತು ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರ ಕನಸನ್ನು ಸಾಕರಗೋಳ್ಳಿಸಿ ರತ್ನಗಿರಿಯಲ್ಲಿ ಶ್ರೀ ಬಾಹುಬಲಿ ಮೂರ್ತಿಯನ್ನು ಪ್ರತಿಷ್ಟಾಪಿಸಿದ ಅಭಿನವ ಚಾವುಂಡರಾಯ ಎಂದೆ ಕರೆಯಲ್ಪಡುವ ಕ್ಷೇತ್ರದ ಧರ್ಮಾಧಿಕಾರಿಗಳಾದ ರಾಜಶ್ರೀ ಡಾ|| ವೀರೇಂದ್ರ ಹೆಗ್ಗಡೆಯವರಿಗೆ ಸಮಸ್ತ ಅಚಾರ್ಯ ಮುನಿಗಳ ಸಂಮುಖದಲ್ಲಿ, ನಾಡಿನ ಸಮಸ್ತ ಭಟ್ಟಾರಕರುಗಳ ಸಂಮುಖದಲ್ಲಿ ವೈಭವಯುತ ನಾಲ್ಕನೇ ಮಹಾಮಸ್ತಕಾಭಿಷೇಕದ ಯಶಸ್ವಿ ನೇತೃತ್ವಕ್ಕಾಗಿ ಶ್ರವಣ ಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಚಾರ್ಯ ವರ್ಯ ಮಹಾಸ್ವಾಮೀಜಿಯವರಿಂದ ಹಾಗೂ ಸಮಸ್ತ ಭಟ್ಟಾರಕರುಗಳಿಂದ ಅನುಗ್ರಹ ಪತ್ರವನ್ನು ಸಮರ್ಪಿಸಲಾಗಿ ಸದ್ಧರ್ಮ ಪರಿಪಾಲಕ ಎಂದು ಬೀರುದನ್ನು ನೀಡಿ ಸನ್ಮಾನಿಸಿದ ಪಾವನ ಕ್ಷಣಗಳನ್ನು ನಿಮಗೊಸ್ಕರ ಪ್ರಸ್ತುತ ಪಡಿಸುತ್ತಿದ್ದೆವೆ.

(ಭಟ್ಟಾರಕರುಗಳಿಂದ ಸದ್ಧರ್ಮ ಪರಿಪಾಲಕ ಎಂದು ಬೀರುದನ್ನು ನೀಡಿ ಸನ್ಮಾನಿಸಲಾಯಿತ್ತು).

ಹಾಗೂ ದಿನಾಂಕ 20-02-2019ರಂದು ವಾತ್ಸಲ್ಯವಾರಿಧಿ ಅಚಾರ್ಯ ಶ್ರೀ ಪುಷ್ಪದಂತ ಸಾಗರರು ಹೆಗ್ಗಡೆಯವರಿಗೆ ದಯಾವಾರಿದಿ ಎಂಬ ಬೀರುದನ್ನು ನೀಡಿ ಸನ್ಮಾನಿಸಿದರು. ಆ ಒಂದು ಅದ್ಭುತ ದೃಷ್ಯಾವಳಿಗಳು ಕೊಡ ನಿಮಗಾಗಿ ಪ್ರಸ್ತುತ ಪಡಿಸುತ್ತಿದ್ದೆವೆ.

ಮುಂದಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.

ವಂದನೆಗಳೊಂದಿಗೆ ಜ್ವಾಲಮಾಲ  ಡಾಟ್ ನ್ಯೂಸ್.