ಜೈ ಜಿನೇಂದ್ರ ವೀಕ್ಷಕರೆ ಮಲೆನಾಡಿನ ಶಿವಮೊಗ್ಗದಲ್ಲಿ ಭಾರತೀಯ ಜೈನ್ ಮಿಲನ್ ವಲಯ 8ರ ವತಿಯಿಂದ ನಡೆದ ಜಿನ ಭಜನಾ ಸ್ಪರ್ಧೆಯ ತುಣುಕುಗಳನ್ನು ನೀವು ನೋಡುತಿದ್ದಿರಿ. ಪರಮ ಪೂಜ್ಯ ಜಗತ್ ಗುರು ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಪಾವನ ಸಾನಿದ್ಯದಲ್ಲಿ ನಡೆದ ಕಾರ್ಯಕ್ರಮ ದೀಪ ಪ್ರಜ್ವಲನೆಯ ಮೂಲಕ ಆರಂಭಗೊಂಡಿತು.
ಅಂದು ಅಲ್ಲಿ ಸಂಭ್ರಮದ ವಾತಾವರಣದೊಂದಿಗೆ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಸಡಗರದಿಂದ ಕಾರ್ಯಕ್ರಮದಲ್ಲಿ ತಾವು ಬಹುದಿನದಿಂದ ತಯಾರಾಗಿ ತಂದ ಹಾಡನ್ನು ಪ್ರಸ್ತುತ ಪಡಿಸುವಲ್ಲಿ ಉತ್ಸುಕರಾಗಿದ್ದರು.
ಶ್ರೀಗಳವರು ಪಾವನ ಸಾನಿದ್ಯವಹಿಸಿದ್ದ ಸಮಾರೋಪ ಸಮಾರಂಭದಲ್ಲಿ ಶ್ರೀ ಅಜ್ಜಪ್ಪನವರು ಸುಮತಿ ಕುಮಾರ್, ಪುಷ್ಪರಾಜ್, ಪ್ರಸನ್ನ ಕುಮಾರ್, ಡಿ ಸುನೀಲ್ ಕುಮಾರ್, ಉಷಾ ಜೈ ಪ್ರಕಾಶ್, ಪದ್ಮ ಸುರೇಶ್, ಎ.ಪಿ. ಪದ್ಮರಾಜ್, ಯಶೋಧರ್ ಹೆಗ್ಗಡೆ, ಯುವರಾಜ್ ಭಂಡಾರಿಯವರು ಉಪಸ್ಥಿತರಿದ್ದರು.
ಗಣ್ಯರುಗಳು ಮಾತನಾಡಿ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ಮೂಲೆ ಗುಂಪಾಗಿದಂತ್ತ ಈ ಜಿನ ಭಜನಾವನ್ನು ಕಾರ್ಯಕ್ರಮವನ್ನಾಗಿ ಪ್ರಾರಂಭಿಸಲು ಮತ್ತು ಅದನ್ನು ಯಶಸ್ವಿಗೊಳಿಸಲು ಅವರು ಮಾಡಿದ ಸಾಧನೆಯನ್ನು ಪ್ರಶಂಶಿಸಿದರು. ಮತ್ತು ವರ್ಷದಿಂದ ವರ್ಷಕ್ಕೆ ಜಿನ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಸ್ಪರ್ಧಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು).
(ಪರಮ ಪೂಜ್ಯ ಜಗತ್ ಗುರು ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಮಾತನಾಡಿ ಕ್ರಾಂತಿಕಾರಿಯಾಗಿ ನಡೆದಂತಹ ಸ್ಪರ್ಧೆಎಂದರೆ ಅದು ಜಿನ ಭಜನಾ ಸ್ಪರ್ಧೆ ಎಂದರು).
ಅಂತಿಮವಾಗಿ ಸ್ಪರ್ಧೆಯಲ್ಲಿ ಆಯ್ಕೆಯಾದ ತಂಡಗಳನ್ನು ಅಭಿನಂದಿಸಲಾಯಿತು. ಸ್ಥಳಿಯ ಮಿಲನ್ನ ಪದಾಧಿಕಾರಿಗಳು ಹಾಗೂ ಸದಸ್ಯರುಗಳೆಲ್ಲರು ಸೇರಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದರು.
ಇಂತಹ ವಿಶೇಷ ಸುದ್ದಿಗಳೊಂದಿಗೆ ಮತ್ತೆ ಭೇಟಿಯಾಗೋಣ.
ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್.













