ಜೈ ಜಿನೇಂದ್ರ ವೀಕ್ಷಕರೆ ಅರೆಮನೆಗಳ ನಗರಿ ಸುಂದರ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆ ನಿಮ್ಮ ಮುಂದೆ.
ಅಂದು ಅಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಲು ಬಂದ ಸ್ಪರ್ಧಿಗಳು ಹಾಗೂ ಅವರೊಡನೆ ಬಂದ ಪೋಷಕರ ಸಂಭ್ರಮದ ಓಡಾಟ ನೋಡುವುದೆ ಒಂದು ಅನಂದವಾಗಿತ್ತು.
(ಸ್ಪರ್ಧೆಗೆ ಬಂದಿದ್ದ ಚಿಣ್ಣರು ಸ್ಪರ್ಧೆಯ ಬಗ್ಗೆ ಉತ್ಸಾಹ ತೋರಿದರು).
(ಗಣ್ಯರು ಸಂತಸ ವ್ಯಕ್ತ ಪಡಿಸಿದರು).
ಅಂದಿನ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಕೆ. ಪ್ರಸನ್ನ ಕುಮಾರ್, ಅಜ್ಜಪ್ಪನವರು, ಹೆಚ್.ಪಿ ಪ್ರಸಾದ್, ಕೆ. ಯುವರಾಜ್ ಭಂಡಾರಿ ಹಾಗೂ ಶೀಲಾ ಅನಂತರಾಜ್ ರವರು ದೀಪ ಬೆಳಗಿಸಿದರು. ಗಣ್ಯರನ್ನು ಸನ್ಮಾನಿಸಲಾಯಿತು. ನಂತರ ಕಿರಿಯರ ಮತ್ತು ಹಿರಿಯರ ಸ್ಪರ್ಧೆ ಆರಂಭಗೊಂಡು ಪ್ರತಿ ವರ್ಷ ವರ್ಷಕ್ಕೆ ಸ್ಪರ್ಧಿಗಳು ಹೆಚ್ಚಿನ ಅಸಕ್ತಿಯಿಂದ ತೊಡಗಿಸಿಕೊಂಡಿದರು.
ಮೈಸೂರು ವಿಭಾಗದ ವಲಯ ಕಾರ್ಯದರ್ಶಿಗಳಾದ ಯುವರಾಜ್ ಭಂಡಾರಿಯವರು ಮಾತನಾಡಿ (ಜಿನ ಭಜನಾ ಕಾರ್ಯಕ್ರಮದ ಸಲುವಾಗಿ ಒಂದು ಸಮಿತಿಯನ್ನು ಮಾಡೊಣ್ಣವೆಂದು ಶ್ರೀ ಮತಿ ಅನಿತಾ ಸುರೇಂದ್ರ ಕುಮಾರ್ ರವರಿಗೆ ವಿನಂತಿಸಿದರು).
ಸಮಾರೋಪ ಸಮಾರಂಭದಲ್ಲಿ ಡಾ|| ರಾಜ್ ಶೇಖರ್, ಲತಾರಾಜ್ ಶೇಖರ್, ಕೆ ಪ್ರಸನ್ನ ಕುಮಾರ್, ಶೀಲಾ ಅನಂತರಾಜ್ ರವರು, ಯುವರಾಜ್ ಭಂಡಾರಿ ಹಾಗೂ ಹೆಚ್. ಪಿ. ಪ್ರಸಾದ್ ರವರು ಉಪಸ್ಥಿತರಿದು ವಿಜೇತರುಗಳಿಗೆ ಅಭಿನಂದಿಸಿದರು.
ನೇರೆದಿದವರು ಜ್ವಾಲಮಾಲ ನ್ಯೂಸ್ ನ ಕಾರ್ಯವೈಕರಿಯನ್ನು ಪ್ರಶಂಶಿಸಿದರು.
ಇಂತಹ ವಿಶೇಷ ಸುದ್ದಿಗಳೊಂದಿಗೆ ಮತ್ತೆ ಭೇಟಿಯಾಗೋಣ.
ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್.













