ಮಹಾವೀರ ಶಾಂತಿ ಪ್ರಶಸ್ತಿ ಭಾಗ- ೨

ಮಹಾವೀರ ಶಾಂತಿ ಪ್ರಶಸ್ತಿ  ಸಮಾರಂಭವು ಅತಿ ಗಣ್ಯಾತಿಣ್ಯರಿಂದ  ತುಂಬಾ ಅದ್ಧೂರಿಯಾಗಿ ನೆರವೇರಿತು. ಆಗ ಶ್ರೀಗಳನ್ನು ಕುರಿತು ಹಾಗೂ ಶ್ರವಣಬೆಳಗೊಳದ ಪಾರಂಪರಿಕ ಹಿನ್ನೆಲೆಯನ್ನು ಪ್ರತಿಯೊಬ್ಬ ಗಣ್ಯರುಗಳು ಶ್ಲಾಘಿಸಿದರು.  ಶ್ರೀ ಹೆಚ್. ಡಿ. ರೇವಣ್ಣ ರವರು ಮಾನ್ಯ ಲೋಕೋಪಯೋಗಿ ಇಲಾಖೆ ಹಾಗೂ ಹಾಸನ ಜಿಲ್ಲೆ ಉಸ್ತುವಾರಿ ಸಚಿವರು  ಇಂದು ನಾವು ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮಿಗಳು ತಮ್ಮ 20 ನೆಯ ವಯಸ್ಸಿನಲ್ಲಿಯೇ ಸನ್ಯಾಸ ಸ್ವೀಕಾರ ಮಾಡಿ ಈಗಾಗಲೇ ಸುಮಾರು 48 ವರ್ಷಗಳ ಕಾಲ  ಜೈನ ಸಮಾಜಕ್ಕೆ  ಅವರದೇ ಆದಂತಹ ಕೊಡುಗೆಗಳನ್ನು ಇಡೀ ರಾಷ್ಟ್ರದಲ್ಲೇ  ಪ್ರಖ್ಯಾತರಾಗಿದ್ದಾರೆ.  ಇಂದು ನೀಡುತ್ತಿರುವ ಭಗವಾನ್ ಮಹಾವೀರ  ಶಾಂತಿ ಪ್ರಶಸ್ತಿಯನ್ನು ಕೊಟ್ಟಿರುವುದು ತುಂಬಾ ಹೆಮ್ಮೆಯ ವಿಷಯವೆಂದು ಹೇಳಿದರು.  ನಾವು ಹಾಗೂ ನಮ್ಮ ಕುಟುಂಬದವರೆಲ್ಲರೂ ಸಹ ಸ್ವಾಮೀಜಿಯವರನ್ನು ತುಂಬಾ ಗೌರವಿಸುತ್ತೇವೆ. ಸ್ವಾಮೀಜಿಯವರ ನಿಸ್ವಾರ್ಥ ಸೇವೆ ಸಮಾಜಕ್ಕೆ ಕೊಟ್ಟಿರುವ ಕೊಡುಗೆಗಳನ್ನು ನೋಡಿದರೆ ನಾವೆಲ್ಲರು ಅವರ ಬಗ್ಗೆ ಮಾತನಾಡುವಷ್ಟು ಯೋಗ್ಯತೆ ಇಲ್ಲ ಭಾವಿಸುತ್ತೇನೆ ಎಂದು ತಿಳಿಸಿದರು.  ಅವರಿಗಿರುವ ಶಾಂತಿ . ಸೌಹಾರ್ದತೆ, ಔಧಾರಿಕತೆ, ನೋಡಿ ತುಂಬಾ ಮನಸ್ಸು ತುಂಬಿ ಬರುತ್ತದೆ ಎಂದು ತಿಳಿಸಿದರು.

 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಇಲಾಖೆಯ ಸಚಿವರಾದಂತಹ ಶ್ರೀಮತಿ ಡಾ|| ಜಯಮಾಲರವರು ಮಾತನಾಡಿ : ಶ್ರವಣಬೆಳಗೊಳದ ಶಕ್ತಿ , ಒಂದು  ಸಾಂಸ್ಕೃತಿಕವಾದಂತಹ ಎಲ್ಲರಿಗೂ ಚೈತನ್ಯವನ್ನು ನೀಡಿರುವಂತಹ  ದೇವರನ್ನು ಕಾಣುವ ಭಾಗ್ಯ ನಮಗೂ ಕೂಡ ಸಿಕ್ಕಿದೆ . ಇದಂತೂ ರೀತಿಯ ಧನ್ಯತಾ ಕಾರ್ಯಕ್ರಮವಾಗಿದ್ದು , ಭಗವಾನ್ ಮಹಾವೀರ  ಶಾಂತಿ ರಾಷ್ಟ್ರೀಯ ಪ್ರಶಸ್ತಿ ಅದೂ ಕೂಡ ಸರ್ಕಾರದ ಪರವಾಗಿ ಪೂಜ್ಯರಿಗೆ ನೀಡುವಂತದ್ದು , ಅದರಲ್ಲೂ ಕೂಡ  ನಾವು ಎಲ್ಲಿ ನೀಡುತ್ತಿದ್ದೇವೆಂದರೆ , ಇಡೀ ಬದುಕಿನಲ್ಲಿ ಎಲ್ಲವನ್ನು ತ್ಯಾಗ ಮಾಡಿ ಬದುಕನ್ನು ಸೋತು ಗೆದ್ದಂತಹ ಅಲ್ಲಿ ಹೋಗಿ ದಿಗಂಬರರಾಗಿ ಅಜರಾಮರರಾಗಿ  ನಿಂತಿರುವ  ಪುಣ್ಯಾತ್ಮನ ಪಾದದ ಕೆಳಗೆ  ಇವತ್ತು ಇನ್ನೊಬ್ಬ ಪುಣ್ಯಾತ್ಮನಿಗೆ  ಈ ಪ್ರಶಸ್ತಿಯನ್ನು ನೀಡುತ್ತಿರುವುದು  ನಮಗೆಲ್ಲರಿಗೂ ನೆನಪಿನಲ್ಲಿ ಉಳಿಯುವಂತಹ ಸಂದರ್ಭವಾಗಿದೆ. ಸ್ವಾಮೀಜಿಗಳು ಆದರ್ಶಗಳು, ಸಮಾಜದಲ್ಲಿ ಬಾಂದವರೊಡನಾಟ , ಇನ್ನೂ ಅನೇಕ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಹಾಗೂ   ಅನ್ನ ದಾಸೋಹ ವನ್ನೂ ಸಹ ನಡೆಸಿಕೊಂಡು ಬರುತ್ತಿದ್ದಾರೆ ಹಾಗೇ ನಾನೂ ಕೂಡ  ಇಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ  ಬಂದಿದ್ದಾಗ , ತಾವು ಎಷ್ಟು ದಿನ ಸಮ್ಮೇಳನವಾಯಿತೋ ಅಷ್ಟೂ ದಿನವೂ  ಬಂದಂತಹ ಎಲ್ಲಾ ಲಕ್ಷಾಂತರ  ಜನರಿಗೆ ಊಟವನ್ನು ಹಾಕಿದ್ದು ನಮಗೆ ಮರೆಯಲು ಸಾಧ್ಯವಾಗುತ್ತಿಲ್ಲ. ಅಂತಹ ಅನ್ನ ದಾಸೋಹ ಮಾಡಿರುವಂತಹ ಸ್ವಾಮೀಜಿಯವರಿಗೆ ಮಹಾವೀರ ಶಾಂತಿ ಪ್ರಶಸ್ತಿ ಬಂದಿರುವುದು ತುಂಬಾ ಸಂತೋಷದ ವಿಷಯವಾಗಿದ್ದು ನಾವು ನಮ್ಮ ಇಲಾಖೆಯ ವತಿಯಿಂದ  ಕೊಡುತ್ತಿರುವ ಈ ಪ್ರಶಸ್ತಿ ಎಲ್ಲಾ ಧರ್ಮದವರಿಗೂ ಕೂಡ ನಮ್ಮ ಘನ ಸರ್ಕಾರ ಕೊಡುತ್ತಿರುವುದು ಹೆಮ್ಮೆಯ ವಿಷಯ.

 

ನಂತರ ಶಾಸಕರಾದ ಬಾಲಕೃಷ್ಣ ರವರು ಮಾತನಾಡಿ  ಸ್ವಾರ್ಥರಹಿತವಾದಂತಹ ಒಂದು ಕ್ಷೇತ್ರ ಇಡೀ ಪ್ರಪಂಚದಲ್ಲಿದ್ದರೆ ಅದು ಶ್ರೀ ಶ್ರವಣಬೆಳಗೊಳ ಕ್ಷೇತ್ರ ಒಂದು ಪುಣ್ಯ ಕ್ಷೇತ್ರ ವಾಗಿದೆ ಎಂದು ನಾವು ಹೆಮ್ಮೆ ಪಡುವ ವಿಷಯವಾಗಿದೆ.  ಸ್ವಾಮೀಜಿಯವರ ನಡೆ , ನುಡಿಗಳು, ಆದರ್ಶ ವ್ಯಕ್ತಿತ್ವ ನಮ್ಮೆಲ್ಲರಿಗೂ ಮಾದರಿಯಾಗಿದೆ.

 

ನಂತರ ಶ್ರೀಗಳು ಪ್ರಶಸ್ತಿ ಸ್ವೀಕರಿಸಿದ  ಸಂದರ್ಭದಲ್ಲಿನ ಅನಿಸಿಕೆಯನ್ನು ಹಂಚಿಕೊಂಡರು. ಕಾರ್ಯಕ್ರಮಕ್ಕೆ ಆಗಮಿಸಿರುವ ಗಣ್ಯರೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.  ನನಗೆ ಪ್ರಶಸ್ತಿ ದೊರಕಿರುವುದು ಸಂತಸ ತಂದಿದೆ ನನಗೆ ಈಗ 70 ವರ್ಷಗಳಾಗಿದ್ದು ನನಗಿಂತಲೂ ಹಿರಿಯರುಗಳು ಇನ್ನು ನಮ್ಮ ಸಮಾಜದಲ್ಲಿ ಇದ್ದಾರೆ. ಅವರನ್ನು ಸಹ ತಾವೆಲ್ಲರೂ ಗೌರವಿಸಬೇಕು ಎಂದು ತಿಳಿಸಿದರು.

 

ಶ್ರೀ ಎಸ್ . ಜಿತೇಂದ್ರ ಕುಮಾರ್ ರವರಿಂದ ವಂದನಾರ್ಪಣೆಯ ಮೂಲಕ ಎಲ್ಲರಿಗೂ ಸನ್ಮಾನಿಸಿ ಕಾರ್ಯಕ್ರಮವನ್ನು ಮುಕ್ತಾಯ ಮಾಡಲಾಯಿತು.  ಇಂತಹ ಅದ್ಭುತ ಕಾರ್ಯಕ್ರಮಗಳೊಂದಿಗೆ ಮತ್ತೆ ಭೇಟಿಯಾಗೋಣ. ವಂದನೆಗಳು.