ಪೆನುಗೊಂಡೆ ವರ್ಷಿಕಾ ಪೂಜೆ

ಶ್ರೀ ಅಜಿತನಾಥ ತೀರ್ಥಂಕರರು ಜಿನಾಲಯ ಪಿನಗೊಂಡಿ ಕ್ಷೇತ್ರದ ವಾರ್ಷಿಕಪೂಜಾ ಮಹೋತ್ಸವ 17/09/2017ನೇ ಭಾನುವಾರದಂದು ಪರಮಪೂಜ್ಯ ಸ್ವಸ್ಥಿ ಶ್ರೀ ಮದನವಿನಭ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ನೇತೃತ್ವದಲ್ಲಿ ನಡೆಯಿತು.
ಶ್ರೀ ಕೆ.ಆರ್. ವೆಂಕಟರಾಮು ಅವರು ಅಧ್ಯಕ್ಷತೆ ವಹಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಇಳಕಲ್ ವಿಜಯ್ ಕುಮಾರ್, ಇ. ವಿ. ಅಜ್ಜಪ್ಪರವರು , ಹೆಚ್. ಪಿ. ಸುಮತಿಕುಮಾರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಿರಿಯ ಶ್ರಾವಕ ಶ್ರಾವಕಿಯರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ಹಾಗೂ ಡಾ|| ನೀರಜಾ ನಾಗೇಂದ್ರ ಕುಮಾರ್ ರವರ ಉಪನ್ಯಾಸ ಹಾಗೂ ಶ್ರೀಮತಿ ಪದ್ಮಿನಿ ಪದ್ಮರಾಜ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಅಜಿತ್ ಪ್ರಸಾದ್ , ವೈ.ಸಿ ಬುಜಬಲಯ್ಯ , ಶ್ರೀ ಕೋಮಲ್ ತವನಪ್ಪ ಉಪಾದಿ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು.