ಭಗವಾನ್ ಶ್ರೀ ಶ್ರೀ ಗೊಮ್ಮಟೇಶ್ವರ ಮಹಾಮಸ್ತಕಾಭಿಷೇಕ 2018 ರ ಸಂದರ್ಭದಲ್ಲಿ ನಡೆದ ಅಖಿಲ ಭಾರತ ಜೈನ ಮಹಿಳಾ ಸಮ್ಮೇಳನದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರು ನೀಡಿದ ಆಶೀರ್ವಚನ ನಿಮಗಾಗಿ ರಾಷ್ಟ್ರ ಮಟ್ಟದ ಜೈನ ಮಹಿಳಾ ಸಮ್ಮೇಳನವು ಇಷ್ಟು ಅದ್ದೂರಿಯಾಗಿ ನಡೆಯುತ್ತಿರುವುದು ನೋಡಿ ನನಗೆ ತುಂಬಾ ಸಂತೋಷವಾಯಿತು. ನಮ್ಮ ಸಮಾಜದ ಮಹಿಳೆಯರು ಜಿಲ್ಲಾ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿಹಾಗೂ ರಾಷ್ಟ್ರಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪಾಲ್ಗೊಂಡು , ಎಲ್ಲರೂ ಅವರವರ ಸ್ಥಾನಮಾನಗಳನ್ನು ಇಡೀ ಪ್ರಪಂಚವೇ ನೋಡುವ ಕಾರ್ಯಗಳನ್ನು ಮಾಡುತ್ತಿರುವುದು ನನಗೆ ಸಂತಸದ ವಿಷಯ.
ಹಾಗೂ ಗೊಮ್ಮಟ ಮೂರ್ತಿ ಕುರಿತಾಗಿ ಐತಿಹಾಸಿಕ ಹಿನ್ನಲೆಯನ್ನು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.













