ಅಕಿಲ ಬಾರತಿಯ ಮಹಿಳಾ ಸಮ್ಮೇಳನದ ಮೆರವಣಿಗೆ

ಗೊಮ್ಮಟೇಶ್ವರ ಭಗವಾನ್ ಶ್ರೀ ಶ್ರೀ ಬಾಹುಬಲಿ ಸ್ವಾಮಿ ಮಹಾ ಮಸ್ತಕಾಭಿಷೇಕ ಮಹೋತ್ಸವ 2018 ರ ಸುಸಂದರ್ಭದಲ್ಲಿ ರಾಷ್ಟ್ರಮಟ್ಟದ  ಜೈನ ಮಹಿಳಾ ಸಮ್ಮೇಳನ ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿ ಶ್ರೀ ಚಾರುಕೀರ್ತಿ  ಭಟ್ಟಾರಕ ಸ್ವಾಮೀಜಿಯವರ ಪಾವನ ನೇತೃತ್ವದಲ್ಲಿ ದಿನಾಂಕ  11, 12 , 13 ಆಗಸ್ಟ್  2007 ರಂದು ಜರುಗಿದ್ದು ಅಭೂತಪೂರ್ವ ಯಶಸ್ಸನ್ನು  ಕಂಡಿತು.

 

ಸಮ್ಮೇಳನದ ಪ್ರಾರಂಭದ ದಿನವಾದ ದಿನಾಂಕ 11 ರಂದು ಚಾವುಂಡರಾಯ ಸಭಾ ಮಂಟಪದಲ್ಲಿ ಮಂಗಳ ಕಳಸ ಸ್ಥಾಪನೆ  ನಂತರ ಬೃಹತ್  ಮೆರವಣಿಗೆ ಏರ್ಪಡಿಲಾಯಿತು.  ವಿವಿಧ ರೀತಿಯ ವಾದ್ಯಗಳು, ವಿವಿಧ ರೀತಿಯ ನೃತ್ಯಗಳೊಂದಿಗೆ ಮೆರವಣಿಗೆ  ಎಲ್ಲರ ಕಣ್ಮನ ಸೆಳೆಯಿತು.