ಶ್ರೀ ರಂಗಪಟ್ಟಣದಲ್ಲಿ ಬಸದಿಯಲ್ಲಿ ಶ್ರಾವಣಮಾಸದ ಪ್ರಯುಕ್ತ ಪ್ರಥಮ ಶುಕ್ರವಾರದಂದು ಜಗನ್ಮಾತೆ ಶ್ರೀ ಪದ್ಮಾವತಿ ಅಮ್ಮನವರಿಗೆ ಲಕ್ಷ ಹೂವಿನ ಅಲಂಕಾರದ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಈ ಮನೋಹರ ದೃಶ್ಯಾವಳಿಗಳು ನಿಮಗಾಗಿ .
ಈ ಬಸದಿಯಲ್ಲಿ ಭಕ್ತಾದಿಗಳು ತುಂಬಾ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ದೇವಿಯ ಅಭಿಷೇಕ, ಅಲಂಕಾರ ಗಳನ್ನು ನೋಡಿ ಪುನೀತರಾದರು. ಬಗೆ ಬಗೆಯ ಹೂವುಗಳಿಂದ ಅಲಂಕಾರ ಮಾಡಿದ ದೇವಿಯನ್ನು ನೋಡಲು ತುಂಬಾ ಆಕರ್ಷಣೀಯವಾಗಿತ್ತು. ನಂತರ ದೇವಿಯ ಪೂಜೆಯ ನಂತರ ತೀರ್ಥ , ಪ್ರಸಾದ ವನ್ನು ಅಲ್ಲಿ ಬಂದಿರುವ ಎಲ್ಲಾ ಜನರುಗಳಿಗೆ ವಿನಿಯೋಗ ಮಾಡಲಾಯಿತು.














