ಜೈ ಜಿನೇಂದ್ರ ವೀಕ್ಷಕರೆ ಸದ ಒಂದಿಲ್ಲೊಂದು ಸಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಸದ ಧರ್ಮದ ಉಳಿವಿನೆಡೆಗೆ ಚಿಂತನೆ ನಡೆಸುವವರು ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು. ಅಂತಹ ಅವರ ಚಿಂತನೆಗಳಲ್ಲಿ ಒಂದು ಅದ್ಭುತ ಕೊಡುಗೆ ಜಿನ ಭಜನಾ ಸ್ಪರ್ಧೆ, ಭಾರತೀಯ ಜೈನ್ ಮಿಲನ್ ವಲಯ 8ರ ಸಹಯೋಗದೊಂದಿಗೆ ನಡೆಸಿಕೊಂಡು ಬಂದ ಕಾರ್ಯಕ್ರಮದಿಂದ ಜನ-ಮಾನಸದಿಂದ ಮರೆಯಾಗುತ್ತಿರುವ ಜಿನ ಭಜನೆಯನ್ನು ಮುಂದಿನ ಪೀಳಿಗೆಗೂ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮಕರಾಗಿದ್ದಾರೆ. ಅವರು ಹೇಳಿದಂತೆ ಕಾರ್ಯಕ್ರಮದಿಂದ ಆಯ್ದಗೀತೆಗಳನ್ನು ಧ್ವನಿ ಸುರುಳಿಗಳ ಮೂಲಕ ಪ್ರತಿಯೊಬ್ಬರಿಗು ತಲುಪಿಸಲಾಗುತ್ತಿದೆ. ನಿಮಗಿದು ಸುಂದರ ಗೀತೆಗಳ ಕೊಡುಗೆ.
ಈ ಬಗ್ಗೆ ಶ್ರೀಮತಿ ಶ್ರದ್ಧರವರು ಹೇಳಿದ್ದು ಹೀಗೆ.
ಶ್ರೀ ಕ್ಷೇತ್ರ ಶ್ರವಣ ಬೆಳಗೊಳದ ಸ್ವಸ್ತಿಶ್ರೀ ಜಗದ್ಗುರು ಕರ್ಮ ಯೋಗಿ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಯವರ ಅಶೀರ್ವಾದ ಮತ್ತು ಮಾರ್ಗ ದರ್ಶನದಲ್ಲಿ ಶ್ರೀ ಮತಿ ಅನಿತಾ ಸುರೇಂದ್ರ ಕುಮಾರ್ ರವರ ಪರಿಕಲ್ಪನೆಯಂತೆ 2017ರ ಜಿನ ಭಜನಾ ಸ್ಪರ್ಧೆಯು ಗೊಮ್ಮಟೇಶ್ವರ ಸ್ವಾಮಿಯ ಸನ್ನಿಧಿ ಯಲ್ಲಿ ವಿಂದ್ಯಗಿರಿಯ ಬುಡದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ರಾಜ್ಯದ ಎಲ್ಲೆಡೆಯಿಂದ ಬಂದ ತಂಡಗಳು ಅನೇಕ ಹೊಸ ಮತ್ತು ಹಳೆಯ ಭಜನೆಗಳನ್ನು ಹಾಡುವುದರ ಮೂಲಕ ಸಮಾಜಕ್ಕೆ ಪರಿಚಯಿಸಿದರು. ಹೀಗೆ ಸಂಗ್ರಹವಾದ ಭಜನೆಗಳು 2018ರಲ್ಲಿ ನಡೆಯುತ್ತಿರುವ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಸವಿನೆನಪಿಗಾಗಿ ಎಲ್ಲರ ಮನೆ ಮನ ಗಳನ್ನು ತಲುಪುವಂತಾಗಲಿ ಎಂಬ ಹಾರೈಕೆಯೊಂದಿಗೆ ಗೊಮ್ಮಟ ಜಿನ ಭಕ್ತಿ ಗೀತಾಂಜಲಿಯನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೆವೆ.
ಜೈ ಜಿನೇಂದ್ರ
ಇಂತಹ ವಿಶೇಷ ಚಿತ್ರಿಕೃತ ದೃಶ್ಯಾವಳಿಗಾಗಿ ತಪ್ಪದೆ ಸಂಪರ್ಕಿಸಿ ಜ್ವಾಲಮಾಲ ಕ್ರಿಯೇಷನ್ಸ್
ವಂದನೆಗಳೊಂದಿಗೆ ಮತ್ತೆ ಭೇಟಿಯಾಗೋಣ ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ.













