ಜೈ ಜಿನೇಂದ್ರ ಪವನ್ ಕುಮಾರ್ ಅಚಾರ್ಯಶ್ರೀ ಪುಷ್ಪದಂತ ಸಾಗರ್ ಜಿ ಮಹಾರಾಜರಿಂದ ದೀಕ್ಷಿತರಾಗಿ ತರುಣ್ ಸಾಗರ ಮುನಿ ಮಹಾರಾಜರಾಗಿ ತಮ್ಮ ಕಹಿ ಗುಳಿಗೆಗಳಿಂದ ಧರ್ಮ ಪ್ರಭಾವನೆಯ ಮೂಲಕ ವಿಶ್ವ ವಿಖ್ಯಾತರಾದ ರಾಷ್ಟ್ರಸಂತ. ಅನೇಕ ರಾಜ್ಯಗಳಲ್ಲಿ ತಮ್ಮ ಪ್ರವಚನ ನೀಡಿದಂತಹ ಪ್ರಬಾವಿ ಕ್ರಾಂತಿಕಾರಿ, ಮೃತ್ಯವನ್ನು ಮಹೋತ್ಸವವಾಗಿಸಿದ ಮಹಾತ್ಮ, ಮುನಿಗಳು ಸೆಪ್ಟೆಂಬರ್ 1, 2018ರ ಬೆಳಿಗ್ಗೆ 3:18ಕ್ಕೆ ದೆಹಲಿಯ ರಾಧೆಪುರಿಯಲ್ಲಿ ಸಲೆಕನ ಪೂರ್ವಕ ಸಮಾಧಿ ಮರಣವನ್ನು ಹೊಂದಿದರು ಪೂಜ್ಯರ ಅಂತಿಮ ಸಂಸ್ಕಾರ ದೆಹಲಿಯ ಮೀರತ್ ರಾಷ್ಟೀಯ ಹೆದ್ದಾರಿಯಲ್ಲಿರುವ ತರುಣಸಾಗರಂನಲ್ಲಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿಯವರು, ಧರ್ಮಾಧಿಕಾರಿಯಾದ ವೀರೇಂದ್ರ ಹೆಗ್ಗಡೆಯವರು ಸೇರಿದಂತೆ ಭಟ್ಟಾರಕರುಗಳು ಅನೇಕ ಗಣ್ಯರುಗಳು ಶ್ರಧಾಂಜಲಿಯನ್ನು ಸಲ್ಲಿಸಿದ್ದಾರೆ. ಅಂದು ಕರ್ನಾಟಕ ಜೈನ ಭವನದಲ್ಲಿ ಕೂಡ ತರುಣ ಸಾಗರ ಮಹಾರಾಜರ ಸಮಾಧಿ ಮರಣದ ಶ್ರಧ್ದಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು.
ಪರಮ ಪೂಜ್ಯ ಅಚಾರ್ಯಶ್ರೀ 108 ಕುಮುದ ನಂದಿ ಮಹಾರಾಜರು, ಪರಮಪೂಜ್ಯ ಮುನಿಶ್ರೀ 108 ಅರ್ಪಣ ಸಾಗರ ಮುನಿ ಮಹಾರಾಜರ ಸಾನಿಧ್ಯದಲ್ಲಿ ತ್ಯಾಗಿ ಸೇವಾ ಸಮಿತಿಯ ಅಧ್ಯಕ್ಷರಾದ ಧರ್ಮ ಸ್ಥಳ ಸುರೇಂದ್ರಕುಮಾರ್ ರವರು ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಎಸ್ ಜಿತೇಂದ್ರ ಕುಮಾರ್ ರವರು, ಕರ್ನಾಟಕ ಜೈನ್ ಅಸೋಸಿಯೇಷನ್ ಪದಾಧಿಕಾರಿಗಳು, ತ್ಯಾಗಿ ಸೇವಾ ಸಮಿತಿ ಪದಾಧಿಕಾರಿಗಳು, ತರುಣ್ ಕ್ರಾಂತಿಮಂಚ್ ಸದಸ್ಯರು, ಹಾಗೂ ಇತರ ಜೈನ ಸಮಾಜದ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಗಣ್ಯರುಗಳಿಂದ ತರುಣ್ ಸಾಗರ್ ರವರ ಭಾವಚಿತ್ರಕ್ಕೆ ಪುಷ್ಪವನ್ನು ಸಮರ್ಪಿಸಲಾಯಿತು.
ನಂತರ ಮಾತನಾಡಿದ ಗಣ್ಯರುಗಳು ತರುಣ್ ಸಾಗರ್ ರವರ ನೆನಪಿನ ಗುಚ್ಚದಿಂದ ಭಕ್ತಿ ಪೂರ್ವಕ ವಿನಯಾಂಜಲಿಯನ್ನು ಸಮರ್ಪಿಸಿದರು.
(ಗಣ್ಯರುಗಳು ಮಾತನಾಡಿ ತರುಣ್ ಸಾಗರ್ ರವರ ನಡುವಿನ ಒಡನಾಟವನ್ನು ನೆನೆದು ಬಾವುಕರಾಗಿ ನುಡಿ ನಮನವನ್ನು ಸಲ್ಲಿಸಿದರು).
(ಪರಮ ಪೂಜ್ಯ ಅಚಾರ್ಯಶ್ರೀ 108 ಕುಮುದ ನಂದಿ ಮಹಾರಾಜರು ಮಾತನಾಡಿ ನಮನವನ್ನು ಸಲ್ಲಿಸಿದರು).
ವಂದನೆಗಳೊಂದಿಗೆ ಮತ್ತೆ ಭೇಟಿಯಾಗೋಣ ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ.













