ಮೈಸೂರು ಚಾಮುಂಡಿಪುರಂ ಝಾನ್ಸಿ ಲಕ್ಷ್ಮಿ ಬಾಯಿ ರಸ್ತೆಯಲ್ಲಿರುವ ಅರಮನೆ ಪದ್ಮರಾಜ ಪಂಡಿತರ ಜೈನ ಬ್ರಾಹ್ಮಣ ವಿದ್ಯಾರ್ಥಿನಿಲಯ ನೂರು ವರ್ಷಗಳನ್ನು ಪೂರೈಸಿ ಶತಮಾನೋತ್ಸವವನ್ನು ಆಚರಿಸಿಕೊಂಡಿತು. ಅರಮನೆ ಪದ್ಮರಾಜ ಪಂಡಿತರು ಮತ್ತು ಅನೇಕ ಗಣ್ಯ ಹಿರಿಯರ ಶ್ರಮದಿಂದ ನಿರ್ಮಾಣಗೊಂಡ ಈ ವಿಧ್ಯಾರ್ಥಿನಿಲಯ ಸಮಾಜದ ಹೇಳಿಗೆಗಾಗಿ ಅನೇಕ ಸಮಾಜಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ದಿನಾಂಕ : 8ರಿಂದ 10-7-2018ರ ವರೆಗೆ ಆಯೋಜಿಸಲಾಗಿದ ಸಮಾರಂಭದಲ್ಲಿ ಜೈನ ಕಾಶಿ ಮೂಡುಬಿದಿರೆ ಶ್ರೀ ಜೈನ ಮಠದ ಸಿಂಹಾಸನಾಧಿಶರಾದ ಪರಮ ಪೂಜ್ಯ ಸ್ವಸ್ತಿಶ್ರೀ ಭಾರತ ಭೂಷಣ ಚಾರುಕೀರ್ತಿ ಪಂಡಿತಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿದ್ಯದಲ್ಲಿ ಆರಾಧನೆಗಳು ವ್ರತೊಪದೇಶ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಿತು.
ಅಲ್ಲಿನ ಚೈತ್ಯಾಲಯದ ಶ್ರೀ 1008 ಪಾರ್ಶ್ವನಾಥ ಸ್ವಾಮಿಗೆ 108 ಕಳಸಗಳ ಅಭಿಷೇಕ ಜೊತೆಗೆ ಪಂಚಾಮೃತ ಅಭಿಷೇಕ ಕೊಡ ನೆರೆವೇರಿತು.
ಸಭಾ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಶ್ರೀಗಳವರು ವಹಿಸಿದು ಉಪನ್ಯಸಕರುಗಳಿಂದ ಧಾರ್ಮಿಕ ಉಪನ್ಯಾಸ ಕೂಡ ನಡೆಯಿತು. ಹಾಗೂ 10-07-2018ರಂದು ಶತಮಾನ ದರ್ಶಿನಿಯೆಂಬ ಪುಸ್ತಕವನ್ನು ಕೂಡ ಬಿಡುಗಡೆಗೊಳಿಸಲಾಯಿತು.
(ಭಾರತ ಭೂಷಣ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಮಾತನಾಡಿ ಮನುಷ್ಯ ಜನ್ಮದ ವಿಶೇಷತೆಯ ಬಗ್ಗೆ ತಿಳಿಸಿದರು ಹಾಗೇ ಮೋಕ್ಷ ಪಡೆಯಲು ಮನುಷ್ಯ ಜನ್ಮದಿಂದ ಮಾತ್ರ ಸಾಧ್ಯವೆಂದು ತಿಳಿಸಿದರು. ಮತ್ತು ಒಂದು ಮಗುವಿಗೆ ಉತ್ತಮ ಸಂಸ್ಕಾರ ದೊರೆಯ ಬೇಕೆಂದರೆ ಇಂತಹ ಧರ್ಮ ಶಾಲೆಗಳಿಗೆ ಸೇರಿಸಬೇಕು ಬೇರೆ ಆಸ್ಟೆಲ್ ಗಳಿಗೆ ಸೇರಿಸಿದರೆ ಹಾಗುವಂತಹ ಪರಿಣಾಮಗಳ ಬಗ್ಗೆ ವಿವರಿಸಿದರು).
ಕಾರ್ಯಕ್ರಮದಲ್ಲಿ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಸದಸ್ಯರುಗಳು ಜೊತೆಗೆ ಹೆಚ್ಚಿನ ಸಂಖ್ಯೆಗಳಲ್ಲಿ ಧರ್ಮ ಬಂಧುಗಳು ಭಾಗವಹಿಸಿದರು.
ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್













