ಜೈ ಜಿನೇಂದ್ರ ವೀಕ್ಷಕರೆ ಚಾರಿತ್ರಿಕ ಸಾಂಸ್ಕೃತಿಕ ಶಿಲ್ಪಕಲೆಯ ತವರುರಾದ ಹಾಸನ ಜಿಲ್ಲೆಯ ಕಲೆ ಹಾಗೂ ವಾಸ್ತುಶಿಲ್ಪಗಳ ಪರಿಷಿಷ್ಟಗಳ ಕಲಾ ಪ್ರೇಮಿಗಳನ್ನು ಬಸದಿಗಳ ತಾಣವಾಗಿ ಭಕ್ತ ವೃಂದವನ್ನು ಅಧ್ಯಯನ ಕೇಂದ್ರವಾಗಿ ಸಂಶೋಧಕರನ್ನು ಅಕರ್ಶಣಿಯ ಸ್ಥಳವಾಗಿ ಪ್ರವಾಸಿಗರನ್ನು ತನ್ನತ್ತ ಕೈ ಬಿಸಿ ಕರೆಯುತ್ತಿದೆ ವಿಶ್ವ ಪ್ರಸಿದ್ದ ಐತಿಹಾಸಿಕ ಸ್ಥಳ ಶ್ರೀ ಕ್ಷೇತ್ರ ಶ್ರವಣಬೆಳಗೊಳ.
ಬಹಳ ಹಿಂದೆ ಕಳ್ವಪು ಕಟವುಪುರ ಎಂದೆಲ್ಲ ಕರೆಯಲ್ಪಡುತ್ತಿದ ಇಲ್ಲಿನ ಇಂದ್ರಗಿರಿಯಲ್ಲಿ ಬಾಹುಬಲಿ ಮೂರ್ತಿ ಸ್ಥಾಪನೆಯಾದಗ ಮೊದಲ ಮಸ್ತಕಾಭಿಷೇಕ ಕ್ರಿ.ಶ. 981ರಲ್ಲಿನಡೆದ್ದಿದು ಅಂದಿನಿಂದ ಹಿಂದಿನವರೆಗು ನಡೆದಿದ್ದು ಪ್ರತಿ 12 ವರ್ಷಕೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತ ಬಂದಿದೆ.
ಈ ಬಾರಿಯ ಮಹಾಮಸ್ತಕಾಭಿಷೇಕ ಫೆಬ್ರವರಿ 17. 2018ರಿಂದ ವೈಭವವಾಗಿ ನಡೆಯುತ್ತಿದು ಕಳೆದ 8-7-2018ರಂದು ಹಾಸನದ ಕಳಾಲದೇವಿ ಮಹಿಳಾ ಸಮಾಜದ ವತಿಯಿಂದ ನಡೆದ ಮಹಾಮಸ್ತಕಾಭಿಷೇಕ ವಿಜೃಂಭಣೆಯಿಂದ ನಡೆಯಿತು.
ಸಾವಿರಾರು ಭಕ್ತರು ನೆರೆದಿದ್ದ ಅಂದು ಐದು ಸಾವಿರ ಜನ ಕುಳಿತುಕೊಳ್ಳುವ ವ್ಯವಸ್ಥೆಯಿರುವ ಜರ್ಮನ್ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾದ ಅಟ್ಟಣಿಗೆ ತುಂಬಿಹೊಗಿತ್ತು. ಜನ ಸಾಗರದಂತೆ ಭಕ್ತರ ದಂಡು ಬೆಟ್ಟದ ಮೇಲಷ್ಟೇ ಅಲ್ಲದೆ ಹೊರಗು ಕೆಳಗು ಕಾತರರಾಗಿ ಕಾಯುತ್ತಿದರು.
ಮೊದಲಿಗೆ 1008 ಕಳಸಗಳ ಜಲಾಭಿಷೇಕದಿಂದ ಪ್ರಾರಂಭವಾಗಿ ಏಳನೀರು, ಇಷೂರಸ, ಕ್ಷೀರ, ಕಲ್ಕಚೂರ್ಣ, ಗಂಧ, ಚಂದನ, ಕೇಸರಿ, ಅಷ್ಟಗಂಧ ಹೀಗೆ ಅಷ್ಟ ದ್ರವ್ಯಗಳಿಂದ ನಗುಮೊಗ್ಗದ ಸುಂದರ ಮೂರ್ತಿ ಮಿಂದು ನಾನಾ ಬಣ್ಣ ರೂಪಗಳಲ್ಲಿ ಕಂಗೋಳಿಸಿತು.
ನಂತರ ನಾನಾ ವಿಧದ ಪುಷ್ಪಗಳಿಂದ ಮನ್ಮಥ ರೂಪನಿಗೆ ಪುಷ್ಪವೃಷ್ಟಿ ಮಂಗಳಾರತಿಯನ್ನು ನಡೆಸಲಾಯಿತ್ತು. ಅಧ್ಯಕ್ಷರಾದ ಸುಪ್ರಭಅಬಿನಂದನ್ ಕಾರ್ಯದರ್ಶಿಗಳಾದ ಕುಮುದ ಸುನೀಲ್, ಪದ್ಮಿನಿ ಭರತೇಶ್, ಸುಮ ಸುನೀಲ್, ಸುಚಿತ್ರ ಉದಯ್, ಪುಷ್ಪನಾಗೇಂದ್ರ, ಪದ್ಮಿನಿ ವಿದ್ಯಾನಂದ್ ಇನ್ನೂ ಮುಂತಾದ ಸದಸ್ಯರುಗಳು ಹಾಜರಿದ್ದು ಪುಜೆಯನ್ನು ಯಶಸ್ವಿಗೊಳಿಸಿದರು. ಹಾಸನದ ಎಲ್ಲಾ ಸಂಘ ಸಂಸ್ಥೆಗಳವರು ಕೂಡ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಎಂ.ಎಲ್.ಎ ಪ್ರೀತಮ್ ಗೌಡರವರು ಅಭಿಷೇಕದಲ್ಲಿ ಪಾಲ್ಗೋಂಡಿದರು. ಇನ್ನೂ ಅನೇಕ ವೈಷಿಷ್ಟ ಪೂರ್ಣ ವೀಡಿಯೊಗಳನ್ನು ವೀಕ್ಷಿಸಲ್ಲಿದಿರಿ.
ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್














