ಸುಹಾಸ್ತಿ ಜೈನ್ ಮಿಲನ್ ಬೆಂಗಳೂರಿನ ವತಿಯಿಂದ ಜೈನ ಯುವಕರಿಗೊಸ್ಕರ ಮೈ-ಮನಸುಗಳಿಗೆ ಕಸರತ್ತು ಕೊಡುವ ದೇಸಿ ಸೊಗಡಿನ ಅಪ್ಪಟ ಭಾರತೀಯ ಕ್ರೀಡೆಯಾದ ಕಬ್ಬಡಿ ಪಂದ್ಯಾವಳಿಯನ್ನು ರಾಜ್ಯಮಟ್ಟದಲ್ಲಿ ಆಯೋಜಿಸಲಾಗಿತ್ತು. ದಿನಾಂಕ 15-10-2017ರಂದು ನಡೆದ ಪಂದ್ಯಾವಳಿಯ ಉದ್ಘಾಟನೆಯನ್ನು ಎಸ್.ಎಸ್.ಎಂ.ಆರ್.ವಿ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಡಾ|| ಅನಿಲ್ ಕುಮಾರ್ ರವರು ನಡೆಸಿಕೊಟ್ಟರು. ವೇದಿಕೆಯಲ್ಲಿ ಅಧ್ಯಕ್ಷತೆ ವಹಿಸಿದ ಶ್ರೀ ಸುರೇಂದ್ರನಾಥ್ ಜೈನ್, ರಾಷ್ಟೀಯ ಈಜು ಪದಕ ವಿಜೈತೆ ಕುಮಾರಿ ಪ್ರಜ್ಞ ಪಿ ಜೈನ್, ಡಾ|| ನೀರಜಾ ನಾಗೇಂದ್ರ ಕುಮಾರ್, ಆರ್.ಜೆ. ಶ್ರೀ ರಜತ್ ಜೈನ್ ಹಾಗೂ ಜ್ವಾಲಮಾಲ ಟಾಡ್ ನ್ಯೂಸ್ ನ ವೈಶಾಲಿ ಪ್ರಭುರವರು ಉಪಸ್ಥಿತರಿದ್ದರು.
ನಂತರ ನಡೆದ ಕಬ್ಬಡಿ ಪಂದ್ಯಾವಳಿಯಲ್ಲಿ ಪ್ರತಿಯೊಂದು ತಂಡಗಳು ಸಹ ರೋಚಕವಾಗಿ ಹಾಡುವುದರ ಮೂಲಕ ನೋಡುಗರ ಕುತುಹಲವನ್ನು ಹೆಚ್ಚಿಸಿದವು. ಸೆಮಿಪೈನಲ್ ನಿಂದ ಫೈನಲ್ ಗೆ ತಲುಪುವ ಹಣಾಹಣಿ ಅತ್ಯಂತ ರೋಮಾಂಚನಕಾರಿಯಾಗಿದ್ದು ಫೈನಲ್ ಟ್ರೋಫಿಯನ್ನು ಬೆಳಗಾಂ ತಂಡ ತಮ್ಮದಾಗಿಸಿಕೊಂಡಿತು. ಪ್ರತಿತಂಡದ ನಾಯಕರು ಅವರವರ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ ಕೇಳೊಣ್ಣ ಬನ್ನಿ.
ತಂಡಗಳು
ಪರಿಶೇ ತಂಡ (ದಕ್ಷಿಣ ಕನ್ನಡ ಜಿಲ್ಲೆ),
ಜೈನ್ ಬಾಯ್ಸ್ ಸಾಗರ (ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ).
ಅದಿಶ್ರೀ ಯೂತ್ ಜೈನ್.
ಜೈನ್ ಬ್ರದರ್ಸ (ಪುತ್ತುರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ)
ಸುಹಾಸ್ತಿ ಜೈನ್ ಮಿಲನ್ ಬೆಂಗಳೂರು ನಡೆಸಿಕೊಡುತ್ತಿರುವ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದಕ್ಕೆ ಸಂತಸ ವ್ಯಕ್ತಪಡಿಸಿದರು.
ಗೆದ್ದಂತಹ ತಂಡಗಳಿಗೆ ಪ್ರಶಸ್ತಿ ವಿತ್ತರಣಾ ಸಂದರ್ಭದಲ್ಲಿ ಶ್ರೀ ಸಿ.ಡಿ ಸುರೇಂದ್ರ ಕುಮಾರ್ ರವರು ಅದ್ಯಕ್ಷತೆವಹಿಸಿದು ಮುಖ್ಯ ಅಥಿತಿಗಳಾಗಿ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್, ಶ್ರೀ ಈ.ವಿ. ಅಜ್ಜಪ್ಪ, ಶ್ರೀ ಸುಮತಿಕುಮಾರ್, ಶ್ರೀ ಪ್ರಸನ್ನ ಕುಮಾರ್, ಡಾ|| ನೀರಜಾ ನಾಗೇಂದ್ರ ಕುಮಾರ್, ಶ್ರೀ ವಿಲಾಸ್ ಪಾಸಣ್ಣನವರ್, ಶ್ರೀ ಪಿ. ಅಜೀತ್ ಕುಮಾರ್, ಶ್ರೀ ಸುನೆದ್ ಜೈನ್ ಹಾಗೂ ಶ್ರೀ ಜಗಶೆಟ್ಟಿಯವರು ಉಪಸ್ಥಿತರಿದ್ದರು. ವಿಜೇತರುಗಳು ಪ್ರಶಸ್ತಿಯನ್ನು ಸ್ವೀಕರಿಸಿ ಸಂಭ್ರಮಿಸಿದರು.
ಈ ಸುದ್ದಿಯ ಪ್ರಾಯೋಜಕರು ಎಂ.ಎಸ್. ಮೃತ್ಯುಂಜಯ್ ಸುಜಯ್ ಇರಿಗೆಷನ್ ಪ್ರೈ.ಲಿ. ಡ್ರಿಪ್ ಇರಿಗೆಷನ್ ಮ್ಯಾನುಫ್ಯಾಕ್ಚರ್ ಕಾಮಾಕ್ಷಿ ಪಾಳ್ಯ ಬೆಂಗಳೂರು -560079.
ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್














