ಬೆಂಗಳೂರು ಮಹಿಳಾ ಸಮ್ಮೇಳನ ೧೫ ೧೦ ೨೦೧೭ ಸುದ್ದಿ

ಜೈ ಜಿನೇಂದ್ರ ಬೆಂಗಳೂರಿನ ಕರ್ನಾಟಕ ಜೈನ ಭವನದಲ್ಲಿ ನಡೆಯುತ್ತಿರುವ ವಾತ್ಸಲ್ಯ ದಿವಾಕರ 108 ಪುಷ್ಪದಂತ ಸಾಗರ ಮಹಾರಾಜರವರ ಚಾತುರ್ಮಾಸದ ಅಂಗವಾಗಿ 14-10-2017ರಂದು ಮಹಿಳಾ ಅಧಿವೇಶನವನ್ನು ಏರ್ಪಡಿಸಲಾಗಿತ್ತು.

ವಾತ್ಸಲ್ಯ ದಿವಾಕರ ಪುಷ್ಪಗಿರಿ ಪ್ರಣೀತ ಅಚಾರ್ಯ ಶ್ರೀ 108 ಪುಷ್ಪದಂತ ಸಾಗರ ಮಹಾರಾಜರು, ಮುನಿಶ್ರೀ 108 ಪ್ರಮುಖ ಸಾಗರ ಮಹಾರಾಜರು, ಮುನಿಶ್ರೀ 108 ಪೂಜ್ಯ ಸಾಗರ ಮಹಾರಾಜರು ಹಾಗೂ ಶ್ಕುಲಕ ಶ್ರೀ 105 ಪುಕಾರ ಸಾಗರ ಮಹಾರಾಜರ ಪಾವನ ಸಾನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ|| ಪದ್ಮ ಶೇಖರ್ ರವರು ಉದ್ಘಾಟಕರಾಗಿ ಹಾಗೂ ಮುಖ್ಯ ಅಥಿತಿಗಳಾಗಿ ಡಾ|| ರೇಖಾ ಜೈನ್, ಶ್ರೀ ಮತಿ ಶೀಲಾ ಅನಂತ ರಾಜ್ ರವರು ಹಾಗೂ ಶ್ರೀ ಮತಿ ಅನಿತಾ ಸುರೇಂದ್ರ ಕುಮಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.

ಜೈನ ಧರ್ಮ ದಲ್ಲಿ ಪಿ.ಹೆಚ್.ಡಿ. ಪಡೆದಿರುವ ಡಾ|| ಎಸ್.ವಿ ಸುಜಾತ ರವರು ಮಾತನಾಡಿ ವಿಧ್ಯೆಯನ್ನು ಕಲಿಯುವುದು ಬಹುಮುಖ್ಯ ಅದರಲ್ಲೂ ಲಿಪಿ ಮತ್ತು ಅಂಕಿಯನ್ನು ಕಲಿಯುವುದು ಮುಖ್ಯ, ಹಾಗೆ ವಿಜ್ಞಾನವನ್ನು ಕೂಡ ಕಲಿಯಬೇಕು ಎಂದರು.

 ಶ್ರೀ ಮತಿ ಶೀಲಾ ಅನಂತ ರಾಜ್ ರವರು ಮಾತನಾಡಿ ಅಚಾರ್ಯರು ಮಹಿಳೆಯರಿಗಾಗಿ ಈ ಚಾತುರ್ಮಾಸದಲ್ಲಿ ವಿಶೇಷ ಪ್ರವಚನವನ್ನು ನೀಡಿದ್ದಾರೆ ಇದು ನಮ್ಮ ಸೌಭಾಗ್ಯ ವೆಂದರು ಹಾಗೂ ವಿಶೇಷವಾಗಿ ಯೋಗ ಮತ್ತು ಪಂಜನಮಸ್ಕಾರದ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಎಂದರು ಹಾಗೂ ಎಲ್ಲಾ ಮಹಿಳೆಯರು ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಅಂದಿನ ಕಾರ್ಯಕ್ರಮದಲ್ಲಿ ರಾಜಸ್ಥಾನದ ಅಜ್ಮೀರ್ ನಿಂದ ಆಗಮಿಸಿದ ಶ್ರೀಮತಿ ಭಾರತೀ ಜೈನ್ ರವರ  ಔಷಧ ರಹಿತ ಚಿಕಿತ್ಸೆ ನಮೋಕಾರಜಿನ್ ಎನ್ನುವ ಯೋಉ ಕಾರ್ಯಕ್ರಮವನ್ನು ಅದ್ಬುತವಾಗಿ ನಡೆಸಿಕೊಟ್ಟರು.

(ನಾವು ಜೈನ ಧರ್ಮದಲ್ಲಿ ಇದ್ದರು ಜೈನರು ಎಂದರೆನ್ನು ಎಂಬುವುದು ನಮ್ಮಗೆ ಗೊತ್ತಿರುವುದಲ್ಲಾ ಹಾಗಾಗಿ  ಇದನ್ನು ನಮಗೆ ಮನ ಮುಟ್ಟುವಂತೆ ಮುನಿ ಮಹಾರಾಜರು ಈ ಚಾತುರ್ಮಾಸದಲ್ಲಿ ತಿಳಿಸಿಕೊಟ್ಟಿದಾರೆ).

ತ್ಯಾಗಿ ಸೇವಾ ಸಮಿತಿ, ಚಕ್ರೇಶ್ವರಿ ಮಹಿಳಾ ಸಮಾಜ, ಕರ್ನಾಟಕ ಜೈನ್ ಅಸೋಸಿಯೇಷನ್, ಕಂಡೆಲ್ ವಾಲಾ ಜೈನ ಸಮಾಜ ಹಾಗೂ ಸಕಲ ಜೈನ ಸಮಾಜ ಬೆಂಗಳೂರು ಇವರುಗಳ ಸಂಯೋಗದೊಂದಿಗೆ ನಡೆದ ಕಾರ್ಯಕ್ರಮ ಮನೋಜ್ಞವಾಗಿ ಮೂಡಿಬಂತು.

ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್