ಜೈ ಜಿನೇಂದ್ರ ಮೈಸೂರು ದಿಗಂಬರ ಜೈನ ಸಮಾಜ ಹಾಗೂ ಪದ್ಮಶ್ರೀ ಜೈನಾ ಮಹಿಳಾ ಸಮಾಜದವತಿಹಿಂದ ನಡೆದ ಸರ್ವತೊಭದ್ರ ಆರಾಧನೆ ಪರಮ ಪೂಜ್ಯ ಸ್ವಸ್ತಿಶ್ತೀ ಭುವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳ ಶುಭ ಆಶಿರ್ವಾದದೊಂದಿಗೆ ಹಾಗೂ 105 ಶ್ಕುಲಕ ಶ್ರೀ ಪ್ರಶಸ್ತಮತಿ ಮಾತಾಜೀಯವರ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ನಡೆದು 10-10-2017ರಂದು ಮೆರವಣಿಗೆಯ ಮೂಲಕ ಮುಕ್ತಾಯಗೊಂಡಿತು. ಅಂದಿನ ಪೂಜಾ ಕಾರ್ಯಕ್ರಮಗಳನ್ನು ವೀಕ್ಷಿಸೋಣ ಬನ್ನಿ.
(ಪರಮ ಪೂಜ್ಯ ಸ್ವಸ್ತಿಶ್ತೀ ಭುವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳು ಮಾತನಾಡಿ ಗ್ರಹಗಳು ಒಂದಕ್ಕೊಂದು ಸಹಾಯಕವಾಗಿ ಇರುತ್ತವೆ ಅಂದರೆ ಗುರುತ್ವಾಕರ್ಷಣೆಯ ಬಲದಿಂದ ಸಹಾಯಕವಾಗಿರುವುದನ್ನು ಜೀವನದಲ್ಲಿ ಒಬ್ಬರಿಗೊಬ್ಬರು ಸಹಾಯಕವಾಗಿರ ಬೇಕೆನ್ನುವ ಹೋಲಿಕೆಯ ವಿವರಣೆಯನ್ನು ತಿಳಿಸಿದರು).
ಪರಮ ಪೂಜ್ಯ ಸ್ವಸ್ತಿಶ್ತೀ ಭುವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳು ಮಾತನಾಡಿ :- ಮೈಸೂರು ನಗರದಲ್ಲಿ ಇರುವಂತಹ ಜ್ವಾಲಮಾಲ ನ್ಯೂಸ್ ಅನ್ನು ದಿನದಲ್ಲಿ ಒಂದು ಬಾರಿಯಾದರು ನೋಡಿ ಏಕೆಂದರೆ ಇವತ್ತು ಎಲ್ಲಿ ಧರ್ಮಾರಾಧನೆ ನಡೆದಿದೆ, ಎಲ್ಲಿ ಪುಜೆ ನಡೆದಿದೆ,ಎಲ್ಲಿ ತ್ಯಾಗಿಗಳು ಬಂದಿದ್ದಾರೆ, ಮಹೋತ್ಸವ ಎಲ್ಲಿ ನಡೆಯುತ್ತಾಯಿದೆ ಹಾಗೇ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುವ ಬಗ್ಗೆ ಒಳ್ಳೆಯ ಸಂದೇಶವನ್ನು ಕೊಡುವಂತಹ ಮಾದ್ಯಮವಾಗಿದೆ ನಮ್ಮ ಎಲ್ಲಾ ಸಮಾಜದವರಿಗೆ ಒಂದು ಒಳ್ಳೆಯ ಅವಕಾಶ ಕಲ್ಪಿಸಿ ಕೊಟ್ಟಿದೆ. ಜ್ವಾಲಮಾಲ ನ್ಯೂಸ್ ನವರು ಶ್ರದ್ದೆಯಿಂದ ನಮ್ಮ ಸಮಾಜದ ಧಾರ್ಮಿಕ ಪುಜೆ ಆರಾಧನೆ ವಿಧಿ ವಿಧಾನವನ್ನು ತೋರಿಸುವಂತಹ ಚಾನಲ್ ಹಾಗಿದೆ ಮತ್ತು ಎಲ್ಲರ ಮನೆಮನೆಗೆ ತಲ್ಲುಪಿಸುತ್ತಿದ್ದಾರೆ ಜ್ವಾಲಮಾಲ ನ್ಯೂಸ್ ನವರಿಗೆಲ್ಲರಿಗು ಕೊಡ ಶುಭ ಕೊರಿದರು.
ನಂತರ ಮಾತನಾಡಿದ 105 ಶ್ಕುಲಕ ಶ್ರೀ ಪ್ರಶಸ್ತಮತಿ ಮಾತಾಜೀಯವರು ಪರಮ ಪೂಜ್ಯ ಸ್ವಸ್ತಿಶ್ತೀ ಭುವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳು ಮಾತನಾಡಿದ ಪರಿಯನ್ನು ವಿವರಿಸುತ್ತ ಸಂತಸ ಪಟ್ಟರು.
ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್













