ಶ್ರೀ ಶಾಂತಿ ಸಾಗರ್ ಜಿ ಮಹಾರಾಜ್

ಜೈ ಜಿನೇಂದ್ರ ಶ್ರೀ ಧಿಗಂಬರ ಜೈನ ಸಮಾಜ, ಪದ್ಮಶ್ರೀ ಜೈನ ಮಹಿಳಾ ಸಮಾಜ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ 105 ಶ್ಕುಲಕ ಪ್ರಶಸ್ತ ಮತ್ತಿ ಮಾತಜೀಯವರ ಸಾನಿಧ್ಯದಲ್ಲಿ ಪರಮ ಪೂಜ್ಯ ಪ್ರಥಮಚಾರ್ಯ  ಚಾರಿತ್ಯ ಚಕ್ರವರ್ತಿ 108 ಅಚಾರ್ಯ ಶ್ರೀ ಶಾಂತಿ ಸಾಗರ ಮುನಿ ಮಹಾರಾಜರ 62ನೇ ಪುಣ್ಯ ತಿಥಿ ಆಚರಣೆ ಮಾಡಲಾಯಿತು. ಆಚಾರ್ಯ ಶ್ರೀ ಗಳ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.

(ಪ್ರಾರ್ಥನ ಕಾರ್ಯಕ್ರಮವನ್ನು ಶುಭ ನಾಗರಾಜ್ ಮತ್ತು ಚೇತನ ರವರು ನಡೆಸಿಕೊಟ್ಟರು).

ಕಾರ್ಯಕ್ರಮದಲ್ಲಿ ಪದ್ಮಶ್ರೀ ಜೈನ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಶೀಲಾ ಅನಂತರಾಜ್ ರವರು ಅಧ್ಯಕ್ಷತೆಯನ್ನು ಹಾಗೂ ಶ್ರೀ ಧಿಗಂಬರ ಜೈನ ಸಮಾಜದ ಅಧ್ಯಕ್ಷರಾದ ಸುನೀಲ್ ರವರಿಂದ ಉದ್ಘಾಟನೆಯನ್ನು ಮಾಡಲಾಯಿತು. ಡಾ|| ಎಂ.ಎಸ್ ಪದ್ಮರವರು ಅಂದಿನ ಪ್ರವಚನ-ಕಾರರಾಗಿ ಆಗಮಿಸಿದರು. ಅಂದಿನ  ಹಾರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ, ಕ್ರಮವಾಗಿ ಭಾವಚಿತ್ರ ಅನಾವರಣ ಶ್ರೀಮತಿ ಗುಣಮಾಲಿ ಶರ್ಮ ಮತ್ತು ಜಯಲಕ್ಷ್ಮಿ, ದೀಪ ಪ್ರಜ್ವಲನೆ ಶ್ರೀಮತಿ ವಿಲಾಸ ಕುಮಾರಿ ಶರ್ಮ, ಪುಷ್ಪಾರ್ಚನೆ ಜಿನೇಶ್ ಪ್ರಸಾದ್, ಅಷ್ಟ ವಿದಾರ್ಚನೆಯನ್ನು ಪದ್ಮಶ್ರೀ ಜೈನ ಮಹಿಳಾ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರಿಂದ ಮಹಾ ಮಂಗಳಾರತಿ ಮಮತ ಅಜೀತ್ ರವರು ಪಡೆದು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

(ನಂತರ 105 ಶ್ಕುಲಕ ಪ್ರಶಸ್ತ ಮತ್ತಿ ಮಾತಜೀಯವರ ಪ್ರವಚನ ನಡೆಸಿಕೊಟ್ಟರು).

ಪದ್ಮಶ್ರೀ ಜೈನ ಮಹಿಳಾ ಸಮಾಜದ ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರು, ಧಿಗಂಬರ ಜೈನ ಸಮಾಜದ ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರುಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಧನ್ಯವಾದಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್