ಜೈ ಜಿನೇಂದ್ರ ಬೆಂಗಳೂರಿನ ಕರ್ನಾಟಕ ಜೈನ ಭವನದಲ್ಲಿ ಪುಷ್ಪಗಿರಿ ತೀರ್ಥಪ್ರಣೀತ ಪರಮಪೂಜ್ಯ 108 ಆಚಾರ್ಯ ಶ್ರೀ ಪುಷ್ಪದಂತ ಸಾಗರ ಮಹಾರಾಜರು ಮಂದಾರಗಿರಿ ತೀರ್ಥ ಪ್ರಣೀತ ಮುನಿಶ್ರೀ 108 ಪ್ರಮುಖ ಸಾಗರ ಮಹಾರಾಜರು, ಮುನಿಶ್ರೀ 108 ಪೂಜ್ಯ ಸಾಗರ ಮಹಾರಾಜರ ಹಾಗೂ ಸಂಘಸಹಿತ ಚಾತುರ್ಮಾಸ ಕಳಸ ಸ್ಥಾಪನೆ ದಿನಾಂಕ 9/7/2017ರಂದು ನಡೆದಿದ್ದು ಈ ಸಂದರ್ಭದಲ್ಲಿ ಆಚಾರ್ಯ ಶ್ರೀ ಪುಷ್ಪದಂತ ಸಾಗರರು ನಾಡಿನ ಸಮಸ್ತ ಜೈನ ಬಾಂಧವರಿಗೆ ಶುಭ ಸಂದೇಶ ನೀಡಿದ್ದಾರೆ.
ಚಾತುರ್ಮಾಸ ದಿನಗಳಲ್ಲಿ ಜಿನ ಭಕ್ತಿ ಮತ್ತು ಮುನಿಗಳ ಹಾಗೂ ಗುರುಗಳ ಸಾನಿಧ್ಯ ಪಡೆದು ಪುಣ್ಯ ಲಾಭ ಪಡೆಯಲು ಕರೆ ನೀಡಿದ್ದಾರೆ.
ಪ್ರತಿ ದಿವಸ ಸಂಜೆ ಸ್ವಾಧ್ಯಾಯ ಹಾಗೂ ಆರತಿ ಪ್ರತಿ ಭಾನುವಾರದಂದು ವಿಶೇಷ ಆರಾಧನಾ ಕಾರ್ಯಕ್ರಮಗಳು ನಡೆಯುತಲಿದ್ದು ಶ್ರಾವಕ ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪುಣ್ಯ ಬಾಗಿಗಳಾಗಬೇಕೆಂದು ತ್ಯಾಗಿಸೇವ ಸಮಿತಿ ಹಾಗೂ ಸಕಲ ಜೈನ ಸಮಾಜ ಬೆಂಗಳೂರು ಇವರುಗಳು ತಿಳಿಸಿದ್ದಾರೆ. ಮುಂದಿನ ಭಾಗದಲ್ಲಿ ನಿರೀಕ್ಷಿಸಿ ಆಚಾರ್ಯ ಶ್ರೀ ಪ್ರಮುಖ ಸಾಗರರ ಶುಭ ಸಂದೇಶ.
ವಂದನೆಗಳೊಂದಿಗೆ . ಜ್ವಾಲಮಾಲಾ ಡಾಟ್ ನ್ಯೂಸ್














