ಜೂನ್ 19 2017 ರಂದು ನಡೆದ ಜಯಪುರದ ಸಾಂಗನೇರ್ ಬಸದಿಯ ಭೂಗರ್ಭ ಮೂರ್ತಿಗಳ ಪೂಜಾ ಸಂದರ್ಭದಲ್ಲಿ ಪ್ರತ್ಯಕ್ಷದರ್ಶಿಗಳಾಗಿ ವೀಕ್ಷಿಸಿದ ಪುಣ್ಯಶಾಲಿಗಳಾದ ನನ್ನ ಸ್ನೇಹಿತರೊಬ್ಬರು ಜ್ವಾಲಾಮಾಲಾ ನ್ಯೂಸ್ ಗಾಗಿ ನೀಡಿದ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಸಾಂಗೇಜಿ ಎಂದೇ ಪ್ರಸಿದ್ಧ ವಾದ ಜೈನ್ ಅತಿಶಯ ಕ್ಷೇತ್ರ ಬಹಳ ಪುರಾತನವಾಗಿದ್ದು ಕೆಂಪು ಕಲ್ಲಿನಿಂದ ಕಟ್ಟಲ್ಪಟ್ಟಿವೆ. ಇದು ಜೈಪುರದಿಂದ 16 ಕಿಲೋಮೀಟರ್ ದೂರದಲ್ಲಿದ್ದು , ಇಲ್ಲಿನ ಮೂಲ ಮೂರ್ತಿ 4000 ವರ್ಷಗಳ ಪುರಾತನ ವೃಷಭ ತೀರ್ಥಂಕರದ್ದಾಗಿದೆ. ಇಲ್ಲಿನ ಸುಂದರ ಕೆತ್ತನೆಗಳು ದೆಹಲಿಯ ಮೌಂಟ್ ಆಬುನಲ್ಲಿರುವ ದಿಗಂಬರ ಬಸದಿಯ ಕೆತ್ತನೆಗಳಿಗೆ ಹೋಲಿಸಬಹುದಾಗಿದೆ. ಇಲ್ಲಿನ ಗರ್ಭಗುಡಿಯು ಹೊರಗಿನಿಂದಲೂ ಒಳಗಿನಿಂದಲೂ ಆಕಾಶದೆತ್ತರದ ಶಿಖರಗಳನ್ನು ಹೊಂದಿದೆ. ಇಲ್ಲಿನ ಮಧ್ಯ ನೆಲಮಾಳಿಗೆಯಲ್ಲಿ ಒಂದು ಬಹಳ ಪುರಾತನ ಪುಟ್ಟ ಗುಡಿಯಿದ್ದು ಯಶ್ರು ದೇವತೆಗಳು ಕಾವಲಾಗಿದ್ದಾರೆ. ಇಲ್ಲಿ ಏಳು ನೆಲಮಾಳಿಗೆಗಳಿದ್ದು ಪ್ರಾಚೀನ ಪರಂಪರೆ ಆಧಾರದ ಮೇಲೆ ಅವು ಮುಚ್ಚಲ್ಪಡುತ್ತವೆ. ಇಲ್ಲಿನ ಅಮೂಲ್ಯ ಪವಿತ್ರ ಮೂರ್ತಿ ಗಳು ಬೆಲೆಬಾಳುವ ಕಲ್ಲುಗಳಿಂದ ರತ್ನಗಳಿಂದ ಮಾಡಲ್ಪಟ್ಟಿದ್ದು ದರ್ಶನಕ್ಕಾಗಿ ಮಂಗಳಕರ ಸಮಯದಲ್ಲಿ ಪೂರ್ವ ನಿಗದಿತ ಕೆಲವು ಸಮಯಕ್ಕೆ ಮಾತ್ರ ಹೊರತಂದು ನಂತರ ಮಂಗಳಕರ ಶುಭ ಮುಹೂರ್ತದಲ್ಲಿ ಸ್ವಸ್ಥಾನಕ್ಕೆ ಇರಿಸಲಾಗುತ್ತದೆ.
ಮೂರ್ತಿಗಳನ್ನು ಸರ್ಪಗಳ ರೂಪದಲ್ಲಿರುವ ಯಕ್ಷಿ ದೇವತೆಗಳ ಒಪ್ಪಿಗೆ ಪಡೆದು ಹೊರತೆಗೆಯುವ ಕಾರ್ಯಕ್ಕೆ ಸಾಮಾನ್ಯ ಮನುಷ್ಯರು ಪ್ರವೇಶಿಸಲು ಅಷ್ಟು ಸುಲಭವಾಗಿ ಸಾಧ್ಯವಾಗಿರುವುದಿಲ್ಲ ಕೇವಲ ಬಾಲಯತಿ ಮುನೀಂದ್ರ ಸ್ವಾಮೀಜಿಗಳು ಮಾತ್ರ ಮುಟ್ಟಲು ಸಾಧ್ಯವೆಂದು ಹೇಳಲಾಗುತ್ತದೆ. ಈ ಕ್ಷೇತ್ರವು ಪ್ರಚಲಿತಗೊಂಡಿದ್ದು ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರ ಶಿಷ್ಯರಾದ ಮುನಿಶ್ರೀ ಸುಧಾ ಸಾಗರ್ ರವರು ಇಲ್ಲಿಗೆ ಭೇಟಿ ನೀಡಿ ನೆಲಮಾಳಿಗೆಯಲ್ಲಿದ್ದ ಭೂಗರ್ಭಸ್ಥಿತ ಹಿಂದೆಂದೂ ನೋಡಿರದಂತಹ ರತ್ನಮೂರ್ತಿಗಳನ್ನು 5 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳ ಸಮ್ಮುಖದಲ್ಲಿ ಹೊರ ತಂದು ಮೂರ್ತಿಯನ್ನು ಮತ್ತೆ ಪುನಃ ಮತ್ತೆ ಸ್ವಸ್ಥಾನಕ್ಕೆ ಇರಿಸಲಾದಂತಹ ಸಂದರ್ಭದಲ್ಲಿ ಈ ದೃಶ್ಯವನ್ನು ಅನೇಕ ಚಾನಲ್ ಗಳು ಬಿತ್ತರಿಸಿದ್ದವು. ಇಂತಹ ಅದ್ಭುತ ಜೈನ ತೀರ್ಥಗಳ ಮಾಹಿತಿಗಾಗಿ ವೀಕ್ಷಿಸುತ್ತಿರಿ ವಂದನೆಗಳೊಂದಿಗೆ ಜ್ವಾಲಮಾಲಾ ಡಾಟ್ ನ್ಯೂಸ್.













