ಧರ್ಮ ಬಂಧುಗಳೇ . 2616ನೇ ಮಹಾವೀರ ಜನ್ಮ ಕಲ್ಯಾಣದ ಆಚರಣೆಯನ್ನು ಸರ್ಕಾರವು ಎಡೆ ಗೂಡಿ ಎಲ್ಲೆಡೆ ಆಚರಿಸಲಾಗುತ್ತಿದೆ. ಹರಿಯಾಣ ಸರ್ಕಾರ ದಿಂದ ಮಹಾವೀರ ಜಯಂತಿಯನ್ನು ಅಹಿಂಸಾ ದಿನಾಚರಣೆಯನ್ನಾಗಿ ಆಚರಿಸುತ್ತಿರುವ ಈ ಸುಸಂದರ್ಭದಲ್ಲಿ ಬನ್ನಿ ಬಂಧುಗಳೇ ನೋಡೋಣ ಎಲ್ಲೆಲ್ಲಿ ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತಿದೆಯೆಂದು ತಿಳಿದುಕೊಳ್ಳೋಣ.
ಭಗವಾನ್ ಶ್ರೀ ಮಹಾವೀರ ಸ್ವಾಮಿ ಜಿನಮಂದಿರದ ಹನ್ನೊಂದನೇ ವಾರ್ಷಿಕೋತ್ಸವ ಪೂಜೆ ಹಾಗೂ ಮಹಾವೀರ ಜಯಂತಿಯ ಉದ್ಘಾಟನಾ ಸಮಾರಂಭವನ್ನು ಕರ್ನಾಟಕ ಜೈನ್ ಅಸೋಸಿಯೇಶನ್ ಸಕಲ ಜೈನ ಸಮಾಜ ಬೆಂಗಳೂರು. ಇವರ ವತಿಯಿಂದ ಏಪ್ರಿಲ್ 8ರ ಶನಿವಾರದಂದು ಆಚರಿಸಲಾಗುತ್ತಿದೆ. ಗಣ್ಯರುಗಳಿಗೆ ಸನ್ಮಾನವನ್ನು ಕೂಡ ಹಮ್ಮಿಕೊಳ್ಳಲಾಗಿದೆ.
ದಿನಾಂಕ ಏಪ್ರಿಲ್ 9 ರಂದು ರಾಜ್ಯಸರ್ಕಾರ ಹಾಗೂ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಮಹಾವೀರಜಯಂತಿಯನ್ನು ಆಚರಿಸಲಾಗುತ್ತಿದ್ದು, ಶ್ರೀ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ತುಮಕೂರಿನ ಸಿದ್ದಗಂಗಾಮಠದ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಪ್ರಧಾನ ಮಾಡಲಾಗುತ್ತಿದ್ದು, 3 ಲಕ್ಷ ರೂ. ನಗದು ಕೂಡ ಪ್ರಶಸ್ತಿಯೊಡನೆ ನೀಡಲಾಗುತ್ತಿದೆ.
ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸಾನಿಧ್ಯದಲ್ಲಿ ಶ್ರೀ ನ್ಯೇಮನಾಥ ತೀರ್ಥಂಕರರ ವಾರ್ಷಿಕ ಪಂಚಕಲ್ಯಾಣದೊಂದಿಗೆ 9/4/2017 ರಂದು ಮಹಾವೀರ ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿದೆ.
ಬೆಂಗಳೂರಿನ ಕೃಷ್ಣರಾಜಪುರದ ಶ್ರೀ ಆದಿನಾಥ ಚಾರಿಟಬಲ್ ಟ್ರಸ್ಟ್ ನ ವತಿಯಿಂದ ಕೂಡ ಅಮರಜ್ಯೋತಿ ಪಿ.ಯು. ಕಾಲೇಜಿನಲ್ಲಿ ಮಹಾವೀರ ಜಯಂತಿ ನಡೆಯಲಿದೆ. ದಿನಾಂಕ 23/04/2017ರ ಭಾನುವಾರದಂದು ಬೆಂಗಳೂರು ಉತ್ತರ ಜೈನ ಸಮಾಜದ ವತಿಯಿಂದ ಮಹಾವೀರ ಜಯಂತಿಯನ್ನು ಆಚರಿಸುತ್ತಿದ್ದಾರೆ. ಹಲವು ಸಾಧಕರಿಗೆ ಸನ್ಮಾನವನ್ನು ಕೂಡ ಹಮ್ಮಿಕೊಂಡಿದ್ದಾರೆ. ಬೆಳ್ಳೂರಿನ ಶ್ರಾವಕ ಬಂಧುಗಳೂ ಕೂಡ ಪ್ರತಿ ವರ್ಷದಂತೆ ಮಹಾವೀರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ.
ಹಾಸನದಲ್ಲಿ ಕೂಡ ಜಿಲ್ಲಾ ಆಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಾಸನಾಂಭ ಕಲಾಕ್ಷೇತ್ರದಲ್ಲೂ ಸಹ ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತಿದೆ. ದಾವಣಗೆರೆಯ ಜೈನ ಸಮಾಜ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಜಯಂತೋತ್ಸವ ನಡೆಯಲಿದೆ ಹಾಗೂ ಮಹಾವೀರ ಸಂಘದ ವತಿಯಿಂದ ಹಾಗೂ ಜೈನ ಸಮಾಜದ ವತಿಯಿಂದ ಶ್ರೀ ಆದಿನಾಥ ದಿಗಂಬರ ಜೈನ ಸಮಾಜದ ವತಿಯಿಂದ ದಾವಣಗೆರೆ ಇಲ್ಲಿ ಕೂಡ ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತಿದೆ.
ಮಂಗಳೂರಿನಲ್ಲಿ ಸಹ ಪರಮ ಪೂಜ್ಯ108 ಮುನಿಶ್ರೀ ಪ್ರಸಂಗ ಸಾಗರ್ ಸ್ವಾಮಿಜೀ ಸಾನಿಧ್ಯದಲ್ಲಿ ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತಿದೆ. ಹುಬ್ಬಳ್ಳಿಯ ದಿಗಂಬರ ಜೈನ್ ಸಮಾಜದ ವತಿಯಿಂದ ಕೂಡ ಸಹ ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತಿದ್ದು ಹೊಂಬುಜ ಶ್ರೀಗಳ ಪಾವನ ಸಾನಿಧ್ಯದಲ್ಲಿ ನಡೆಯಲಿದೆ ಎಂದು ಅಲ್ಲಿನ ಅಧ್ಯಕ್ಷರಾದ ಶ್ರೀ ಶಾಂತಿನಾಥ ಹೊಸಪೇಟೆಯವರು ತಿಳಿಸಿದ್ದಾರೆ. ಹಾಗೂ ಹುಬ್ಬಳ್ಳಿಯ ಜೈನ ಸಮಾಜದ ವತಿಯಿಂದ ಅಹಿಂಸ ವಾಕ್ ನಡಿಗೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಮೈಸೂರಿನಲ್ಲೂ ಕೂಡ ವಿಜೃಂಭಣೆಯಿಂದ ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತಿದ್ದು , ಪೂಜೆ ಮೆರವಣಿಗೆ ಮತ್ತು ಸಾತ್ವಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೈಸೂರಿನ ಸಮೀಕ್ಷಾ ಜೈನ್ ಮಿಲನ್ ವತಿಯಿಂದ ಕೂಡ ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತಿದ್ದು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಶ್ರೀ ಕ್ಷೇತ್ರ ಭದ್ರಗಿರಿಯಲ್ಲೂ ಕೂಡ ಶ್ರೀ108 ಮುನಿಕುಲ ರತ್ನ ಭೂಷಣ ಮುನಿಮಹಾರಾಜರ ಪಾವನ ಸಾನಿಧ್ಯದಲ್ಲಿ ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತಿದೆ. ಶ್ರೀ ಕ್ಷೇತ್ರ ಆರ್ಡಾಳದಲ್ಲಿ ಮುನಿ ಶ್ರೀ 108 ಪುಣ್ಯ ಸಾಗರ ಮುನಿ ಮಹಾರಾಜರ ಪಾವನ ಸಾನಿಧ್ಯದಲ್ಲಿ ಪಂಚಕಲ್ಯಾಣದೊಂದಿಗೆ ಮಹಾವೀರ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ. ಧರ್ಮ ಬಂಧುಗಳೇ ಮಹಾವೀರ ಜಯಂತಿಯ ವಿಶೇಷ ಕಾರ್ಯಕ್ರಮವಾಗಿ ವಿವಿದೆಡೆ ಆಚರಿಸಲಾಗುವ ಮಹಾವೀರ ಜಯಂತಿಯ ಸುದ್ದಿಯನ್ನು ಜ್ವಾಲಾಮಾಲಾ ಡಾಟ್ ನ್ಯೂಸ್ ನಲ್ಲಿ ಪ್ರಸಾರ ಮಾಡಲಾಗುತ್ತಿದೆ. ತಮ್ಮ ಊರಿನ ಜಯಂತೋತ್ಸವದ ವೀಡಿಯೋ ತುಣುಕುಗಳನ್ನು ನಮ್ಮಲ್ಲಿ ವಾಟ್ಸಪ್ ನಂಬರ್ಗೆ ಕಳುಹಿಸಿದಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಪ್ರಸಾರಮಾಡಲಾಗುವುದು. ಮಹಾವೀರ ಜಯಂತಿಯ ಶುಭಾಷಯವನ್ನು ಕೋರುವವರು ತಮ್ಮ ಭಾವಚಿತ್ರದೊಂದಿಗೆ ವಿವರವನ್ನು ಕಳುಹಿಸಿದ್ದಲ್ಲಿ ಅದನ್ನೂ ಕೂಡ ನಮ್ಮಲ್ಲಿ ಬಿತ್ತರಿಸಲಾಗುವುದು. ಹೆಚ್ಚಿನ ವಿವರಗಳಿಗೆ ಜ್ವಾಲಾಮಾಲಾ . ನ್ಯೂಸ್ ವಾಟ್ಸಪ್ ನಂಬರಿಗೆ ಮೆಸೇಜ್ ಮಾಡಿ.













