ಮಹಿಳಾ ಸಮ್ಮೇಳನ ಸಾಧಕರ ಸನ್ಮಾನ

ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಮಹಿಳಾ ಸಮ್ಮೇಳನದಲ್ಲಿ ಸಂಸ್ಕೃತಿ ಸಂರಕ್ಷಣೆ ಧರ್ಮಜಾಗೃತಿ ಮಹಿಳಾ ಶಿಕ್ಷಣ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನ ನೆರೆವೇರಿಸಲಾಯಿತು.

ಮೊದಲಿಗೆ ಆದರ್ಶ ಮಹಿಳಾ ಪ್ರಶಸ್ತಿ ಪುರಸ್ಕಾರವನ್ನು ದೇಶದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಧರ್ಮಪತ್ನಿ ಚನ್ನಮ್ಮ ಹೆಚ್. ಡಿ ದೇವೇಗೌಡರವರನ್ನು ಸನ್ಮಾನಿಸಲಾಯಿತು. (ಮತ್ತು ಇನ್ನೂ ಅನೇಕ ಆದರ್ಶ ಮಹಿಳೆಯರನ್ನು ಕೊಡ ಸನ್ಮಾನಿಸಲಾಯಿತು ).

 ನಂತರ ನಾಡೋಜ ಡಾ|| ಕಮಲ ಹಂಪನ, ಬೆಂಗಳೂರಿನ ಡಾ|| ಪದ್ಮ ಶೇಖರ್, ಬಾಗಲಕೋಟೆಯ ಡಾ|| ಮಲ್ಲಿಕಾ ಎಸ್. ಗಂಟಿ, ಮೈಸೂರಿನ ಡಾ|| ಲತಾ ರಾಜಶೇಖರ್, ಬೆಳಗಾವಿಯ ಡಾ|| ವಿಜಯ ಲಕ್ಷ್ಮಿ ಬಾಳೆಕುಂದ್ವಿ, 81ನೇ ಅಖಿಲ ಭಾರತದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಡಾ|| ಸಿದ್ದಲಿಂಗಯ್ಯನವರ ಧರ್ಮ ಪತ್ನಿ ರಮಾಕುಮಾರಿ ಸಿದ್ದಲಿಂಗಯ್ಯ, ಬೆಂಗಳೂರಿನ ತಬಸಬ್ ಬಾನು, ಕ್ರಿಸ್ಟಲ್ ನೋಹೆ, ಹಿರಿಯ ಪತ್ರಕರ್ತಿ ಹಾಸನ ಲೀಲಾವತಿ, ಹಂಬಾಳೆ ರಾಜೇಶ್ವರಿ, ಬೆಂಗಳೂರಿನ ಸಾಲು ಮರದ ತಿಮ್ಮಕ್ಕ ನವರಿಗೆ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.

ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜೈನ ಮಹಿಳೆಯರಿಗೆ ಆದರ್ಶ ಜೈನಾ ಮಹಿಳಾ ಪ್ರಶಸ್ತಿ ಸಲ್ಲಿಸಲಾಯಿತ್ತು. ದೇಶ ರಕ್ಷಣೆ ಕ್ಷೇತ್ರದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಾರಾಷ್ಟ್ರದ ಸಾಂಗ್ಲೀಯ ಮೇಜರ್ ನೀಲಂ ಗೊರವಾಡೆ, ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಮಹಾರಾಷ್ಟ್ರ ಮುಂಬೈಯ ಡಾ|| ಸರೈಯು ಜೋಷಿ, ಆಡಳಿತ ಕ್ಷೇತ್ರದಲ್ಲಿ ಐ.ಎ.ಎಸ್ ಅಧಿಕಾರಿಗಳಾದ ಮಧ್ಯ ಪ್ರದೇಶದ ಭೂಪಾಲ್ನ ಜಯಶ್ರೀ ಕಿಯಾವತ್, ಹರಿಯಾಣದ ಆಶಿಕ ಜೈನ್, ದೆಹಲಿಯ ನೇಹ ಜೈನ್, ಬೆಂಗಳೂರಿನ ನೀಲಾ ಮಂಜುನಾಥ್,  ಐ.ಪಿ.ಎಸ್ ಅಧಿಕಾರಿಯಾದ ಮುಂಬೈಯ ಸುರೇಖಾ ದುಗ್ಗೆ, ಸಮಾಜ ಸೇವೆ ಕ್ಷೇತ್ರದಲ್ಲಿ ದೆಹಲಿಯ ಎಫ್.ಐ.ಸಿ.ಸಿ.ಐ ಅಧ್ಯಕ್ಷರಾದ ನೇತಾ ಬೀಚಾ, ಬೆಂಗಳೂರಿನ ಮಹಿಣಾ ದೇವಿ ಸೇಟಿ, ರಾಜಸ್ಥಾನದ ಸುಶೀಲಾದೇವಿ ಪಾಟ್ನಿ, ಇನ್ಚಲರಕಲ್ಜಿ ಇಂದುಮತಿ ಕಲ್ಲಪ್ಪಣ್ಣ ವಾಡೆ.

ದೆಹಲಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸುನೀತ ಜೈನ್, ವಾರಣಾಸಿಯ ಬ್ರಾಹ್ಮೀಲಿಪಿ ವಿದ್ವಾಂಸರಾದ ಡಾ|| ಮುನಿ ಜೈನ್, ಕೌಸಲ್ಯ ಧರಣೇಂದ್ರ, ಶ್ರವಣಬೆಳಗೂಳದ ಶಾಂತಮ್ಮ, ಬೆಂಗಳೂರಿನ ವಿಮಲಾ ಸುಮತಿ ಕುಮಾರ್, ಶೈಕ್ಷಣಿಕ ಕ್ಷೇತ್ರದಲ್ಲಿ ದೆಹಲಿಯ ಲಾಲ್ ಬಹದ್ದೂರ್ ಶಾಸ್ತ್ರಿ ಸಂಸ್ಕೃತ ವಿಶ್ವ ವಿಧ್ಯಾನಿಲಯದ ಉಪ ಕುಲಪತಿಗಳಾದ ಶಶಿ ಪ್ರಭಾ ಜೈನ್, ಚಿತ್ರ ಕಲೆ ಮತ್ತು ಕರಕುಶಲ ಕ್ಷೇತ್ರದಲ್ಲಿ ಚಿಕ್ಕಮಗಳೂರಿನ ನವರತ್ನ ಇಂದು ಕುಮಾರ್, ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಮೈಸೂರಿನ ವಿಲಾಸ ಕುಮಾರಿ ಶರ್ಮ, ಜನಪದ ಕ್ಷೇತ್ರದಲ್ಲಿ ಹಾವೇರಿಯ ಭಾರತಿ ಚಬಿ, ಕ್ರೀಡಾ ಕ್ಷೇತ್ರದಲ್ಲಿ ಬೆಂಗಳೂರಿನ ಕರುಣಾ ಜೈನ್, ನೃತ್ಯ ಕಲೆ ಕ್ಷೇತ್ರದಲ್ಲಿ ದಕ್ಷಿಣ ಕನ್ನಡದ ನಾಟ್ಯ ಮಯೂರಿ ಅನುಷ ಜೈನ್ ರವರಿಗೆ ನೀಡಿ ಗೌರವಿಸಲಾಯಿತು. ಜೊತೆಗೆ ಸಂಸ್ಕೃತಿ ಸಂರಕ್ಷಣೆ ಧರ್ಮ ಜಾಗೃತಿ ಮಹಿಳಾ ಶಿಕ್ಷಣ ಹಾಗೂ ಜೈನ ಸಮಾಜದ ಮಹಿಳೆಯರ ಅಭ್ಯುದಯಕಾಗಿ ನಿರಂತರ ಸೇವೆ ಸಲ್ಲಿಸುತ್ತಿರುವ ಕರ್ನಾಟಕದ ಮೂರು ಜೈನ ಮಹಿಳಾ ಸಂಸ್ಥೆಗಳು ಸೇರಿದಂತೆ ದೇಶದ ವಿವಿಧ ಒಂಬತ್ತು ಜೈನ ಮಹಿಳಾ ಸಂಸ್ಥೆಗಳಾದ ಪ್ರತಿವಾಸ್ತಲ್ಲಿ ಜ್ಞಾನೋದಯ ವಿದ್ಯಾಪೀಠ ಜಬಲ್ ಪುರ್, ಅತ್ತಿಯಂಬೆ ವಿದ್ಯಾಪೀಠ ಟ್ರಸ್ಟ್ ತುಮಕೂರು, ವೀರ ಮಹಿಳಾ ಮಂಡಲ ಸಾಂಗ್ಲಿ, ಪಂಚಾಕ್ಷರಿ ಮಹಿಳಾ ಸಮಾಜ ವೈನಾಡು, ಶ್ರೀ ದಿಗಂಬರ ಜೈನ ಮಹಿಳಾ ಆಶ್ರಮ ಸಾಗರ, ಬಾಹುಬಲಿ ಶ್ರಾವಿಕ ಅಶ್ರಮ ಶ್ರಮದಾನ ಶಾಲೆ ಕಾರ್ಕಳ, ಪದ್ಮಾವತಿ ದಿಗಂಬರ ಜೈನ ಐ.ಎಸ್. ಸೆಕೆಂಡ್ರೀಸ್ಕೂಲ್ ಜೈಪುರ್, ಶ್ರೀ ಕ್ಷೇತ್ರ ಸಿದ್ದಾಂತ ತೀರ್ಥಸಂಸ್ಥಾನ ನಂದನವನ ದರಿಯವಾಡ ಪ್ರತಾಪ್ ಘಡ್ ಹಾಗೂ ಶ್ರೀ ಜ್ವಾಲಾಮಾಲಿನಿ ಬಾಲಿಕಾ ಪ್ರೌಢಶಾಲೆ ನರಸಂ ರಾಜಪುರ ಈಗೆ ಮಹಿಳಾ ಸಂಸ್ಥೆಗಳಿಗೆ ಒಂದು ಲಕ್ಷ ರೂಪಾಯಿ ನಗದು ಪುರಸ್ಕಾರದೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು.