ಮಹಿಳಾ ಸಮ್ಮೇಳನ ರಂಗೋಲಿ, ಅಕ್ಷತಾ ಪುಂಜ ಸಂಯೋಜನೆ ಮತ್ತು ಪ್ರದರ್ಶನ

ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಮಹಿಳಾ ಸಮ್ಮೇಳನದ ಅಂಗವಾಗಿ ದಿನಾಂಕ : 10-08-2017ರಂದು ರಂಗೋಲಿ ಸ್ಪರ್ಧೆಯನ್ನು ಹಾಗೂ ಅಕ್ಷತ ಪುಂಜ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿವಿದೆಡೆಯಿಂದ ಬಂದ ಮಹಿಳೆಯರು ಉತ್ಸಹಾದಿಂದ ಪಾಲ್ಗೋಂಡು ಬಣ್ಣ ಬಣ್ಣದ ಧಾರ್ಮಿಕ ವಿಷಯಗಳನ್ನು ಒಳಗೊಂಡ ರಂಗೋಲಿಯನ್ನು ಚಿತ್ರಿಸಿ ತಮ್ಮ ಕಲೆಯನ್ನು ಪ್ರದರ್ಶಿಸಿದರು. ಇನ್ನೂ ಅಕ್ಷತಾ ಪುಂಜ ಸ್ಪರ್ಧೆಯಲ್ಲಿ ಬಾಗವಹಿಸಿದ ಸ್ಪರ್ಧಿಗಳು ಮುದ್ದಾದ ಪುಂಜಗಳಲ್ಲಿ ನಂದಿಶ್ವರ ದೀಪ, ಪಂಚಮೇರು ಇನ್ನು ಅನೇಕ ಮಾದರಿಯ ಪುಂಜಗಳನ್ನು ಜೋಡಿಸಿ ನೋಡಿದ ಇತರರಿಗು ಕೊಡ ಅಸಕ್ತಿಮೊಡಿಸಿದರು.

ರಂಗೋಲಿ ಸ್ಪರ್ಧೆ ಸಂಘಟಕರಾದ ನವರತ್ನ ಇಂದುಕುಮಾರ್, ಮಂಡ್ಯದ ಜಯಂತಿ ಮಹೇಂದ್ರ, ಜಯಂತಿ ಬಾಹುಬಲಿಯವರು ಹಾಗೂ ತೀರ್ಪೂಗಾರರಾದ ಮೈಸೂರಿನ ತೇಜಸ್ವಿನಿ, ಪದ್ಮ ರೇಖಾ, ಹಾಗೂ ಸುಪ್ರಭಾ ಹಾಸನ್ ರವರು.

ಅಕ್ಷತ ಪುಂಜದ ಸಂಘಟಕರಾದ ಜಯಂತಿ ಮಹೇಂದ್ರ, ಜಯಂತಿ ಬಾಹುಬಲಿ, ಸುಮ ಚಿಕ್ಕಮಗಳೂರು ಹಾಗೂ ತೀರ್ಪೂಗಾರರಾದ ಕೇಸರಿ ರತ್ನರಾಜಯ್ಯ, ರಾಜಶ್ರೀ ಕುಸುನಾಳೆ ಹುಬ್ಬಳಿ, ಡಾ|| ನೀರಜಾ ಬೆಂಗಳೂರು ಇವರುಗಳು ಉಪಸ್ಥಿತರಿದ್ದರು, ಹಾಗೂ ಜೈನ್ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಶಿಲಾ ಅನಂತರಾಜ್ ರವರು ಪುಷ್ಪಾಂದಿನ ಮಹಿಳಾ ಸಂಘದ  ಪೂರ್ಣಿಮ ಅನಂತ ಪದ್ಮನಾಭ್, ಕಲ್ಪನಾ ಉದಯ್ ಕುಮಾರ್, ಪದ್ಮಶ್ರೀ ಮಹಿಳಾ ಸಮಾಜದ ಕಾರ್ಯದರ್ಶಿಗಳಾದ ಲತಾ ಸುದರ್ಶನ್ ರವರು ಹಾಗೂ ನಿರ್ಮಲಾ ಭರತ್ ರಾಜ್ ಇವರುಗಳು ಸಹ ಉಪ ಸ್ಥಿತರಿದರು.

ಅಖಿಲ ಭಾರತ ಮಹಿಳಾ ಸಮ್ಮೇಳನದಲ್ಲಿ ಗಮನ ಸೆಳೆದ ಒಂದು ಭಾಗ ಮಹಿಳೆಯರ ಸಾಧನೆಯ ಪ್ರತಿಭೆಯನ್ನು ಬಿಂಬಿಸುವ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಸ್ತು ಪ್ರದರ್ಶನ. ಗೊಹಾಟಿಯ ಶ್ರೀಮತಿ ರತ್ನ ಪ್ರಭಾ ಸೇಟಿಯವರು ಉದ್ಘಾಟಿಸಿದ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಲಾದ ವರ್ಣಚಿತ್ರಗಳು ಯಕ್ಷ ಯಕ್ಷಿಯರ ಅಲಂಕಾರಿಕ ಕಲಾಕೃತಿಗಳು ಹಾಗೂ ಕರಕುಶಲ ವಸ್ತುಗಳನ್ನು ಪರಮ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟಾರಕ ಸ್ವಾಮೀಜಿಯವರು ಅತಿಥಿ ಗಣ್ಯರೊಂದಿಗೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘಟಕರಾದ  ನವರತ್ನ ಇಂದು ಕುಮಾರ್, ಭೂಪಾಲ್ ನ್ನ ಸುಧಾ ಮಲ್ಲಯ್ಯ, ಶ್ರೀಮತಿ ಕುಸುಮಾ ಬಾಲಕೃಷ್ಣರವರು ಇನ್ನೂ ಅನೇಕ ಗಣ್ಯರು ಉಪ-ಸ್ಥಿತರಿದರು.