ಜೈ ಜಿನೇಂದ್ರ, ಬೆಂಗಳೂರಿನ ಕರ್ನಾಟಕ ಜೈನ ಭವನದಲ್ಲಿ ಪರಮ ಪೂಜ್ಯ ಅಚಾರ್ಯ ಶ್ರೀ ಪುಷ್ಪದಂತಿ ಸಾಗರ ಮಹಾರಾಜರು, ಮುನಿಶ್ರೀ ಪ್ರಮುಖ ಸಾಗರ ಮಹಾರಾಜರು, ಮುನಿಶ್ರೀ ಪೂಜ್ಯ ಸಾಗರ ಮಹಾರಾಜರು ಹಾಗೂ ಶ್ಕುಲ್ಲಕಶ್ರೀ ಉಕಾರ ಸಾಗರ ಮಹಾರಾಜರು ಇವರ ದಿವ್ಯಸಾನಿಧ್ಯ, ತ್ಯಾಗಿ ಸೇವಾ ಸಮಿತಿ ಹಾಗೂ ಸಕಲ ಜೈನ ಸಮಾಜ ಬೆಂಗಳೂರು ವತಿಯಿಂದ ಪಾರ್ಶ್ವನಾಥ ಸ್ವಾಮಿಯ ಮೋಕ್ಷ ಕಲ್ಯಾಣ ಮಹೋತ್ಸವ ವೈಭವಯುತವಾಗಿ ಭಕ್ತಿಪೂರ್ವಕವಾಗಿ ನೆರೆವೇರಿತು. ಅಂದು ಭಕ್ತಾಂಬರ ಆರಾಧನೆ ಮುಕುಟ ಸಪ್ತಮಿ ಅಂಗವಾಗಿ ಪೂಜಾ ಕಾರ್ಯಕ್ರಮ ಹಾಗೂ ಶ್ರೀ ಪಾರ್ಶ್ವನಾಥ ತೀರ್ಥಂಕರರಿಗೆ ಲಾಡು ಸಮರ್ಪಣೆ ಮಾಡಲಾಯಿತು. (ನಂತರ ಪರಮ ಪೂಜ್ಯ ಮುನಿ ಮಹಾರಾಜರುಗಳು ಪ್ರವಚನ ನೀಡಿದರು).