ಜೈ ಜಿನೇಂದ್ರ, ಬೆಂಗಳೂರಿನ ಕರ್ನಾಟಕ ಜೈನ ಭವನದಲ್ಲಿ ಪುಷ್ಪಗಿರಿ ತೀರ್ಥಪ್ರಣಿತ ಪರಮ ಪೂಜ್ಯ 108 ಅಚಾರ್ಯ ಶ್ರೀ ಶ್ರೀ ಪುಷ್ಪದಂತ ಸಾಗರರು ತಮ್ಮ ಸಂಘ ಸಹಿತ ಚಾತುರ್ಮಾಸವನ್ನು ಕೈಗೊಂಡಿದಾರೆ. ಈ ಸಂದರ್ಭದಲ್ಲಿ ಅಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ಸವಿ ವಿವರವನ್ನು ತ್ಯಾಗಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಂದ್ರ ಕುಮಾರ್ ಜೈನ್ ರವರು ನೀಡಿದ್ದು, ಸ್ವತಃ ಅವರೆ ತಮ್ಮಲ್ಲಿ ಜೈನ ಭವನದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಪುಣ್ಯ ಬಾಗಿಗಳಾಗ ಬೇಕಾಗಿ ಹೇಳಿದ್ದಾರೆ.
ಪುಷ್ಪಗಿರಿ ತೀರ್ಥಪ್ರಣಿತ 108 ಅಚಾರ್ಯ ಶ್ರೀ ಶ್ರೀ ಪುಷ್ಪದಂತ ಸಾಗರರು ಬೆಂಗಳೂರಿನಲ್ಲಿ ಚಾತುರ್ಮಾಸ ಕೈಗೊಂಡಿರುವುದರಿಂದ ತ್ಯಾಗಿ ಸೇವಾ ಸಮಿತಿ ವತಿಯಿಂದ ಇಲ್ಲಿನ ವ್ಯವಸ್ಥೆಗಳು ಹಾಗೂ ಕಾರ್ಯಕ್ರಮಗಳೆನ್ನು, ಮತ್ತು ಜೈನ ಬಾಂಧವರನ್ನ ಅಹ್ವಾನಿಸುವ ಒಂದೆರಡು ಮಾತುಗಳನ್ನಾಡ ಬೇಕಾಗಿ ಕೇಳಿ ಕೊಳುತ್ತಿದೆನೆ. (ಮಾತನಾಡಿದ ಶ್ರೀ ಸುರೇಂದ್ರ ಕುಮಾರ್ ಜೈನ್ ರವರು ಪರಮ ಪೂಜ್ಯ 108 ಅಚಾರ್ಯ ಶ್ರೀ ಶ್ರೀ ಪುಷ್ಪದಂತ ಸಾಗರ ಸ್ವಾಮೀಜಿಯವರನ್ನು ಆಹ್ವಾನಿಸಿದ ಬಗ್ಗೆ ವಿವರಿಸಿದರು ಮತ್ತು ತ್ಯಾಗಿ ಸೇವಾ ಸಮಿತಿಯಿಂದ ನಡೆಯುವ ಮುಂದಿನ ಕಾರ್ಯಕ್ರಮವನ್ನು ತಿಳಿಸಿದರು).
ಅಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಪಟ್ಟಿ ಹೀಗಿದ್ದೂ 27-7-2017ರಂದು ಮುಕುಟ ಸಪ್ತಮಿಯ ವಿಶೇಷ ಕಾರ್ಯಕ್ರಮ, 7-8-2017ರಂದು ರಕ್ಷಾಬಂಧನ, 15-8-2017ರಂದು ಸ್ವಾತಂತ್ರೋತ್ಸವದ ಅಂಗವಾಗಿ ಸರ್ವಧರ್ಮ ಸಮ್ಮೇಳನ, 26-8-2017ರಿಂದ 6-8-2017ರವರೆಗೆ ದಶಲಕ್ಷಣ ಪರ್ವದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಚಾರ್ಯ ಶ್ರೀ ಶ್ರೀ ಪುಷ್ಪದಂತ ಸಾಗರರು ಆಗಸ್ಟ್ 15ರ ಮಹತ್ವವನ್ನು ಹಾಗೂ ಅಂದಿನ ಕಾರ್ಯಕ್ರಮದ ವಿಶೇಷತೆಯನ್ನು ತಿಳಿಸುತ್ತಾ ಭಾರತಾಂಬೆಗೆ ಜಯ ಘೋಷದ ಮೂಲಕ ದೇಶ ಭಕ್ತಿ ವ್ಯಕ್ತಪಡಿಸಿದರು ನಂತರ ಅಚಾರ್ಯ ಶ್ರೀ ಗಳಿಗೆ ಆರತಿ ಏರ್ಪಡಿಸಲಾಗಿತ್ತು. ಮಂದರಗಿರಿ ತೀರ್ಥಪ್ರಣಿತ ಮುನಿಶ್ರೀ 108 ಪ್ರಮುಖ ಸಾಗರ ಮಹಾರಾಜರವರಿಗೆ ಆರತಿ. ಸನಿಧ್ಯದಲ್ಲಿ ಅನಿತಾ ಸುರೇಂದ್ರ ಕುಮಾರ್ ರವರು, ದೇವೇಂದ್ರ ಸ್ವಾಮಿಯವರು, ರಾಜಕೀರ್ತಿ ಜೈನ್, ಜೈ ರಾಜ್ ಆರಿಗ, ಗುಣಪಾಲ್ ಜೈನ್, ಮಹಾವೀರ್ ರವರು ಹಾಗೂ ಅಚಾರ್ಯ ಶ್ರೀಗಳ ಭಕ್ತ ವೃಂದದವರು ಭಾಗವಹಿಸಿದರು.














