ಜಗತ್ ವಿಖ್ಯಾತ ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ಚಾತುರ್ಮಾಸ ಮಂಗಳ ಕಳಶ ಸ್ಥಾಪನ ಮಹೋತ್ಸವದ ಉದ್ಘಾಟನಾ ಮಹೋತ್ಸವ 7-7-2017ರಂದು ನಡೆಯಿತು. ಖ್ಯಾತ ಸಾಹಿತಿ ನಾಡೋಜ ಡಾ|| ಹಂಪ ನಾಗರಾಜಯ್ಯ ರವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಪರಮ ಪೂಜ್ಯ ಸ್ವಸ್ತಿ ಶ್ರೀ ಚಾರು ಕೀರ್ತಿ ಭಟಾರಕ ಸ್ವಾಮೀಜಿಯವರು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದರು. (ಸ್ವಸ್ತಿ ಶ್ರೀ ಚಾರು ಕೀರ್ತಿ ಭಟಾರಕ ಸ್ವಾಮೀಜಿಯವರು ಮಾತನಾಡಿ ರಾಜ್ಯಪಾಲರಾದ ವಜುಬಾಯಿ ಆರ್ ವಾಲ ರವರು ಅಗಾಮಿಸಿರುವುದಕ್ಕೆ ಸಂತೋಷ ವ್ಯಕ್ತ ಪಡಿಸುತ್ತಾ ಸ್ವಾಗತ ಕೋರಿದರು. ಮತ್ತು ಈ ಬಾರಿಯ ಮಹಾಮಸ್ತಕಾಭಿಷೇಕದ ವಿಶೇಷದ ಬಗ್ಗೆ ವಿವರಿಸಿದರು).
ಕಾರ್ಯಕ್ರಮದ ಸಂದರ್ಭದಲ್ಲಿ ಗುಜರಾತಿ ಭಾಷೆಯ ನೃತ್ಯ ಮಾಡುತ್ತಿದ್ದ ಕಲಾವಿದ ಗುಂಪಿನತ್ತ ತೆರಳಿದ ವಜುಬಾಯಿ ಆರ್ ವಾಲ ಕಲಾವಿದರೊಂದಿಗೆ ನೃತ್ಯ ಮಾಡುವ ಮೂಲಕ ನೆರೆದಿದ್ದ ಸಾರ್ವಜನಿಕರನ್ನು ಆಶ್ಚರ್ಯ ಚಕಿತರನ್ನಾಗಿ ಸಿದರು. ಸ್ವಾಮೀಜಿ ಮತ್ತು ಗಣ್ಯರು ಸಹ ರಾಜ್ಯಪಾಲರ ನೃತ್ಯ ವೀಕ್ಷಣೆ ಮಾಡಿ ಸಂತಸ ವ್ಯಕ್ತಪಡಿಸಿದರು.
ಕರ್ನಾಟಕದ ಘನತೆವೆತ್ತ ರಾಜ್ಯಪಾಲ ವಜುಬಾಯಿ ಆರ್ ವಾಲ ರವರು ಮಾತನಾಡಿ ಭಾರತೀಯ ಸಂಸ್ಕೃತಿಯು ಶ್ರೀಮಂತವಾಗಲು ಜೈನಧರ್ಮದ ಕೊಡುಗೆಯು ಅಪಾರವಾಗಿದೆ ಹಾಗಾಗಿ ತ್ಯಾಗ ಅಹಿಂಸೆ ಸತ್ಯ ಧರ್ಮವನ್ನು ಜಗತ್ತಿಗೆ ಸಾರಿ ಹೇಳುವ ಜೈನ ಧರ್ಮವನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.
ಪರಮ ಪೂಜ್ಯ ವರ್ಧಮಾನ ಸಾಗರ ಮಹಾರಾಜರವರು ಕಾರ್ಯಕ್ರಮ ಕುರಿತು ಆಶೀರ್ವಚನ ನೀಡಿದರು. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು, ಶಾಸಕ ಸಿ.ಎನ್. ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ರಮೇಶ್, ತಾಲ್ಲೂಕು ಪಂಚಾಯತ್ ಸದಸ್ಯೆ ಮಹಾಲಕ್ಷ್ಮಿ ಶ್ರೀನಿವಾಸ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಾ ಪ್ರಭಾಕರ್, ಜಿಲ್ಲಾಧಿಕಾರಿ ವಿ. ಚೈತ್ರ, ಹಾಸನ ಉಪವಿಭಾಗ ಅಧಿಕಾರಿ ಡಾ|| ಹೆಚ್.ಎಲ್. ನಾಗರಾಜ್, ರಾಷ್ಟ್ರೀಯ ದಿಗಂಬರ ಜೈನ ಸಮಿತಿಯ ಅಧ್ಯಕ್ಷೆ ಸರಿತಾ ಎಂ.ಕೆ.ಜೈನ್, ಕಾರ್ಯಧ್ಯಕ್ಷ ಎಸ್.ಜಿತೇಂದ್ರ ಕುಮಾರ್ ಅಹಮದಾಬಾದ್ ಉದ್ಯಮಿ ಆರ್.ಸಿ. ಗಾಂಧಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪ-ಸ್ಥಿತರಿದರು.














