ಮಹಾವೀರ ಜಯಂತಿಯ ವಿಶೇಷ ಕಾರ್ಯಕ್ರಮ, ವಿವಿಧೆಡೆಯಲ್ಲಿ ಮಹಾವೀರ ಕಾರ್ಯಕ್ರಮಕ್ಕೆ ನಿಮಗೆಲ್ಲಾ ಸ್ವಾಗತ. ರಾಜ್ಯದ ನಾನಾ ಭಾಗದಿಂದ ಮಹಾವೀರ ಜಯಂತಿಯ ಸುದ್ದಿಯ ಮಹಾಪೂರವೆ ಬಂದಿದ್ದು ನಿಮ್ಮೆಲ್ಲರ ಅಭೂತ ಪೂರ್ವ ಸ್ಪಂದನೆಗೆ ಅಭಿಮಾನಕ್ಕೆ ಮೊದಲಿಗೆ ಧನ್ಯವಾದಗಳನ್ನ ತಿಳಿಸುತ್ತಿದೆನೆ.
ಬನ್ನಿ ಬಂಧುಗಳೆ ಹಲವೆಡೆ ಮಹಾವೀರ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದಾರೆ ನೋಡೊಣ್ಣ ಎಲ್ಲೆಲ್ಲಿ ಹೇಗೆ ಆಚರಿಸಲಾಗಿದೆ ಅಂತ.
ಮೊದಲಿಗೆ ನಾವು ಕರ್ನಾಟಕ ಜೈನ್ ಅಸೋಸಿಯೇಷನ್ ವತಿಯಿಂದ ನಡೆದ ಮಹಾವೀರ ಜಯಂತಿಯ ಉದ್ಘಾಟನೆ ಕಾರ್ಯಕ್ರಮವನ್ನು ತೆಗೆದುಕೊಳ್ಳೊಣ್ಣ. ಪರಮ ಪೂಜ್ಯ ಸ್ವಸ್ತಿಶ್ರೀ ಭುವನ ಕೀರ್ತಿ ಭಟಾರಕರ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್. ಜಿತೇಂದ್ರ ಕುಮಾರ್ ರವರು ಅಧ್ಯಕ್ಷತೆವಹಿಸಿದು ಕೆ.ಜಿ.ಎ ಸದಸ್ಯರೆಲ್ಲರು ಉಪ-ಸ್ಥಿತರಿದ್ದರು. ಗಣ್ಯರುಗಳಾದ ಶ್ರೀ ಶರತ್ ಕುಮಾರ್ ಜೈನ್, ವಿನಯ್ ಕುಮಾರ್, ನಾಗೇಂದ್ರ ಕುಮಾರ್, ಸುನೀಲ್ ಕುಮಾರ್, ಹೆಚ್.ಡಿ. ಪಾರ್ಶ್ವನಾಥ್, ಡಾ|| ನಿಶಾ ಬಿ. ಜೈನ್ ರವರುಗಳಿಗೆ ಸನ್ಮಾನಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜೈನ ಭಾಂದವರು ಭಾಗವಹಿಸಿದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಹಾವೀರ ಜಯಂತಿಯನ್ನು ಅತ್ಯುತ್ತಮ ರೀತಿಯಲ್ಲಿ ಆಚರಿಸಲಾಯಿತು, ವೇದಿಕೆ ಗಣ್ಯರುಗಳಾದ ಕನ್ನಡ ಮತ್ತು ಸಮೃದ್ಧಿ ಇಲಾಖೆ ಸಚಿವೆ ಶ್ರೀಮತಿ ಉಮಾಶ್ರೀ ಯವರು ಶಾಸಕರಾದ ಆರ್.ವಿ ದೇವರಾಜ್ ಹಾಗೂ ಅಭಯ್ ಚಂದ್ರ ಜೈನ್. ಕರ್ನಾಟಕ ಜೈನ್ ಅಸೋಸಿಯೇಷನ್ ವತಿಯಿಂದ ಪಿ. ವೈ ರಾಜೇಂದ್ರ ಕುಮಾರ್ ಮತ್ತು ದೇವೇಂದ್ರ ಸ್ವಾಮಿಗಳವರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು ಎಂದು ಇಸ್ರೋ ಅಜಿತ್ ಕುಮಾರ್ ರವರು ಮಾಹಿತಿ ನೀಡಿದರು. ಹಾಗೂ ಅಂದಿನ ಪ್ರಮುಖ ಭಾಗವಾದ ಶ್ರೀ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಶ್ರೀ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ ಪ್ರಧಾನದ ಬಗ್ಗೆ ಮಾತನಾಡಿದ ಉಮಾಶ್ರೀಯವರು ಈ ಬಗ್ಗೆ ಸ್ವಾಮೀಜಿಯವರು ಹರ್ಷ ವ್ಯಕ್ತಪಡಿಸಿದ್ದು ಕಾರಣಾಂತರಗಳಿಂದ ಅವರಿಗೆ ಪ್ರಶಸ್ತಿ ಸ್ವಿಕರಕ್ಕೆ ಆಗಮಿಸಲು ಹಾಗಲಿಲ್ಲ ಆದರಿಂದ್ದ ನಾವುಗಳೇ ಅವರಿದ್ದರಲ್ಲಿಗೆ ಜೈನ ಸಂಘದವರೊಡಗೂಡಿ ಹೋಗಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಹಾಗೂ ನಿಗದಿ ಪಡಿಸುವ ದಿನಾಂಕವನ್ನು ತಿಳಿಸಲಾಗುವುದು ಎಂದರು.
ಮೈಸೂರಿನಲ್ಲೂ ವಿಜೃಂಭಣೆಯಿಂದ ಪೂಜೆ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮೈಸೂರಿನ ಸಮಾಜದ ವತಿಯಿಂದ ಬೆಳ್ಳಿ ರಥಗಳ ಸುಂದರ ಮೆರವಣಿಗೆ ಅರಮನೆ ಮುಂದೆ ಸಾಗಿ ಏಂಗ್ಗೆಳೆಯರೆಲ್ಲರು ಹೆಜ್ಜೆ ಹಾಕಿ ಸಂಭ್ರಮಿಸಿದ ದೃಶ್ಯ ನೋಡುಗರ ಗಮನ ಸೆಳೆಯಿತು.
ಹಾಸನದಲ್ಲಿ ಕರ್ನಾಟಕದ ಸರ್ಕಾರದಿಂದ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ವತಿಯಿಂದ ಅಯೋಜಿಸಿದಿಂದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಿ. ಚೈತ್ರ ಹಾಗೂ ಶಾಸಕರಾದ ಶ್ರೀ ಎಸ್. ಪ್ರಕಾಶ್ ರವರು ಹಾಗೂ ಶ್ರೀ ಹಾಸನದ ಜೈನ ಸಂಘದ ಅಧ್ಯಕ್ಷರಾದ ಶ್ರೀ ಎಂ. ಅಜಿತ್ ಕುಮಾರ್ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. ಕಲಾಭವನಕ್ಕೆ ಮೆರವಣಿಗೆ ಸಾಗಿ ಅಲ್ಲಿ ಗಣ್ಯರುಗಳಾದ ಎ. ಮಂಜು ನಗರಸಭಾಧ್ಯಕ್ಷರುಗಳಾದ ಹೆಚ್.ಎಸ್. ಅನೀಲ್ ಕುಮಾರ್ ರವರು ಪಾಲ್ಗೂಂಡಿದರು, ಇಲ್ಲಿನ ಸಮಗ್ರ ಮಾಹಿತಿಯನ್ನು ಪ್ರಮೋದ್ ಕುಮಾರ್ ರವರು ತಿಳಿಸಿದಾರೆ.
ಹೊಸ ದುರ್ಗದಲ್ಲಿ ಕೂಡ ಮಹಾವೀರ ಜಯಂತಿಯನ್ನು ಅದ್ದೂರಿಯಾಗಿ ಅಚರಿಸಿದರಲ್ಲದೆ ಮೂಡುಬಿದಿರೆಯ ಮಹಾವೀರರವರಿಂದ ಉಪನ್ಯಾಸ ಕಾರ್ಯಕ್ರಮವನ್ನು ಕೂಡ ಅಯೋಗಿಸಲಾಗಿತ್ತು. ಈ ಮಾಹಿತಿಯನ್ನು ಅಜ್ಜಪ್ಪನವರು ತಿಳಿಸಿದ್ದಾರೆ.
ಮಂಗಳೂರಿನಲ್ಲೂ ಸಹ ವಿಜೃಂಭಣೆಯಿಂದ ಪರಮ ಪೂಜ್ಯ 108 ಮುನಿಶ್ರೀ ಪ್ರಸಂಗ ಸಾಗರರ ಪಾವನ ಸಾನಿಧ್ಯದಲ್ಲಿ ನೆರೆವೇರಿಸಲಾಯಿತ್ತು ಎಂದು ಪುಷ್ಪರಾಜ್ ಜೈನ್ ರವರು ಮಾಹಿತಿ ನೀಡಿದ್ದಾರೆ.
ನೀವೀಗ ನೋಡುತ್ತಿರುವುದು ಮಂಡ್ಯದಲ್ಲಿ ನಡೆದ ಮಹಾವೀರ ಜಯಂತಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ ನಾಗರಾಜ್ ರವರು.
ಕುಪ್ಪಳಿಯಲ್ಲಿ ಕೂಡ ಮಹಾವೀರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಎಂದು ಸುರೇಶ್ ರವರು ತಿಳಿಸಿದ್ದಾರೆ.
ಶ್ರವಣಬೆಳಗೊಳದಲ್ಲಿ ಬಹಳ ಸುಂದರವಾಗಿ ಮಹಾವೀರ ಜಯಂತಿಯನ್ನು ಅಚರಿಸಲಾಗಿದೆ.
ಗುಬ್ಬಿ ತಾಲ್ಲೂಕಿನ ಬಿದಿರೆಯಲ್ಲಿ ಕೂಡ ಮಹಾವೀರ ಜಯಂತಿ ಅಚರಿಸಲಾದ ಬಗ್ಗೆ ಮಹಾವೀರ್ ರವರು ವರದಿಮಾಡಿದ್ದಾರೆ.
ಇನ್ನೂ ಬಹಳಷ್ಟು ಮಾಹಿತಿಗಳು ಸುದ್ದಿಗಳು ಇವೆ ದಯವಿಟ್ಟು ವಿವರವನ್ನು ಮುಂದಿನ ಭಾಗದಲ್ಲಿ ನಿರಿಕ್ಷೀಸಿ.
“ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್”














