ಶ್ರವಣಬೆಳಗೊಳದಲ್ಲಿನ ವಿಂದ್ಯಗಿರಿ ಬೆಟ್ಟದಲ್ಲಿ ವಿಶ್ವ ವಿಖ್ಯಾತ ಭಗವಾನ್ ಬಾಹುಬಲಿಯ 1037ನೇ ಪ್ರತಿಷ್ಟಾಪನೆ ಮಹೋತ್ಸವ ಕಾರ್ಯಕ್ರಮವನ್ನು ಶ್ರವಣಬೆಳಗೊಳದ ಪೀಠದ್ಯಕ್ಷರಾದ ಪೂಜ್ಯ ಸ್ವಸ್ತಿಶ್ರೀ ಚಾರು ಕೀರ್ತಿ ಭಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ನೆರೆವೇರಿಸಲಾಯಿತು.
ಕ್ರಿ,ಶ 981ರ ಮಾರ್ಚ್ 13ರಂದು ವಿಂದ್ಯಗಿರಿಯ ಪರ್ವತದ ಮೇಲೆ ಶಾಂತಿ ಅಹಿಂಸೆಯನ್ನು ಜಗತ್ತಿಗೆ ಸಾರಿದ ತ್ಯಾಗ ಮೂರ್ತಿ ಭಗವಾನ್ ಬಾಹುಬಲಿಯ 58ಅಡಿ ಎತ್ತರದ ಏಕಶಿಲಾ ವಿಗ್ರಹವನ್ನು ಸಂಸ್ಥಾಪಿಸಲಾಯಿತು. ಇದರ ಅಂಗವಾಗಿ 12ವರ್ಷಗಳಿಗೊಮ್ಮೆ ಮಸ್ತಕಾಭಿಷೇಕ ನೆರೆವೇರಿಸುವಂತೆ ವಿಗ್ರಹ ನಿರ್ಮಾಣಿಸಿದ ಚಾವುಂಡರಾಯ ಅಭಿಪ್ರಾಯ ಪಟ್ಟಿದರು, ಅದರಂತೆ ಪ್ರತಿ 12ವರ್ಷಕೊಮ್ಮೆ ಮಸ್ತಕಾಭಿಷೇಕ ನೆರೆವೇರಿಸಲಾಗೂತ್ತಿದೆ. ಶಾಂತಿ ಸ್ಥಾಪನೆ ಉದ್ದೇಶದಿಂದ ಈ ಪ್ರತಿಷ್ಟಾಪನ ದಿನವನ್ನು ವರ್ಷಕೊಮ್ಮೆ ಆಚರಿಸಲಾಗುತ್ತಿದೆ.
ಪ್ರಾತಃ ಕಾಲದಿಂದಲೆ ಪೂಜ ವಿಧಿವಿಧಾನಗಳು ಆರಂಭವಾಗಿ ಗುಲಾಬಿ ದಳಗಳಿಂದ ಅಲಂಕರಿಸಿದ ಮಂಡಲವನ್ನು ರಚಿಸಲಾಗಿತು. 108 ಕಳಶ, ವಿವಿಧ ಬಗೆಯ ಫಲ ಪುಷ್ಪಗಳು, ಬೆಳ್ಳಿ ಮತ್ತು ರತ್ನ ಹವಳಗಳಿಂದ ಅರ್ಗ್ಯ ಧೂಪ ದೀಪಗಳಿಂದ ಪಾದ ಪೂಜೆ ನೆರೆವೇರಿಸಲಾಯಿತು.
ಈ ವೇಳೆ ಅಚಾರ್ಯ ಶ್ರೀ 108 ಚಂದ್ರ ಪ್ರಭಸಾಗರ ಮಹಾರಾಜರು ಮತ್ತು ಸಂಘಸ್ಯ ತ್ಯಾಗಿಗಳು, ಬಾಲಯೋಗಿ ಮುನಿಶ್ರೀ 108 ಗಿರೀನಾಥ್ ಸಾಗರ್ ಜೀ ಮಹಾರಾಜರುಗಳು ಮತ್ತು ಸಂಘಸ್ಯ ತ್ಯಾಗಿಗಳು ಮುನಿಶ್ರೀ 108 ಪಾವನ ಕೀರ್ತಿ ಮಹಾರಾಜರು ಆರಿಕ ಶ್ರೀ 105 ಕುಂದಶ್ರೀ ಮಾತಾಜೀ ಆರಿಕ ಶ್ರೀ 105 ಸುಪ್ರಭಾಮತಿ ಮಾತಾಜೀ ಆರಿಕ ಶ್ರೀ 105 ಶಿವಮತಿ ಮಾತಾಜೀ ವಿಚಾರ ಪಲ್ಲಟ ಶುಲ್ಲಕ ಶ್ರೀ ಸಿಧಾಂತ ಕೀರ್ತಿ ಸ್ವಾಮೀಜಿ ಮುಂತಾದವರು ಉಪ-ಸ್ಥಿತರಿದರು.














