ಟ್ರಸ್ಟ್ ನ ಕುರಿತಂತೆ ಮುಂದುವರಿದ ಭಾಗದಲ್ಲಿ ಟ್ರಸ್ಟ್ ನ ಸೇವಾ ವೈಕರಿ ಬಗ್ಗೆ ಹೇಳುತ್ತಿದ್ದೇನೆ.
ವಿಧ್ಯಾನಂದ ಮುನಿಗಳು ಒಂದೆಡೆ ನುಡಿದಂತ್ತೆ ತಪ್ಪುಗಳಿಲ್ಲದ ಕೃತಿಗಳನ್ನು ನೀವು ಓದುವುದಾದರೆ ಶಾಂತಿ ರಾಜ ಶಾಸ್ತ್ರಿಗಳ ಪುಸ್ತಕಗಳನ್ನು ಓದಿ, ಅವುಗಳಲ್ಲಿ ಕಿಂಚಿತ್ತು ತಪ್ಪುಗಳು ಕಾಣಸಿಗುವುದಿಲ್ಲ ಎಂದಿದ್ದಾರೆ. ಅಂತಹ ಒಂದು ಶ್ರೇಷ್ಟತೆಯನ್ನು ಹಿಂದಿಗು ಮುಂದುವರೆಸಿಕೊಂಡು ಬರಲಾಗಿದೆ. ಪ್ರತಿಯೊಂದು ಪುಟದಲ್ಲಿಯೂ ಲೋಪವಾಗದಂತೆ ಉತ್ತಮ ಕರಡು ತಿದ್ದುವ ಕೆಲಸ ಸ್ವತಹ ಶಾಸ್ತ್ರಿಗಳ ಪುತ್ರರಾದ ಎಸ್. ಜಿತೇಂದ್ರ ಕುಮಾರ್ ರವರು ಮಾಡುತ್ತಾ ಬಂದಿದ್ದಾರೆ. ತಮ್ಮ ತಂದೆಯವರು ಬರೆದ ಕೊನೆಯ ಪುಟದಲ್ಲಿ ತಿಳಿಸಲಾದ ಎಲ್ಲಾ ತಪ್ಪು ಒಪ್ಪುಗಳನ್ನುಮರುಮುದ್ರಣಗಳಲ್ಲಿ ತಿದ್ದುಪಡಿಸುವುದಲ್ಲದೆ ಹೊಸದಾಗಿ ತಪ್ಪುಗಳಾಗದಂತೆ ಪ್ರತಿ ಪುಟಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ನಂತರ ಮುದ್ರಿಸಲು ಅನುಮತಿ ಕೊಡುತ್ತಾರೆ, ಆದ್ದರಿಂದಲೇ ಇಂದಿಗೂ ಶಾಸ್ತ್ರಿಗಳ ಟ್ರಸ್ಟ್ ನ ಪುಸ್ತಕಗಳು ಅತಿ ಹೆಚ್ಚು ಬೇಡಿಕೆಯಲ್ಲಿವೆ.
ತಮ್ಮೆಲ್ಲ ಗುರುಚರ ಜವಬ್ದಾರಿಗಳ ನಡುವೆಯೂ ಟ್ರಸ್ಟ್ ಗಾಗಿ ಇವರ ಶ್ರಮ ಊಹೆಗೂ ನಿಲುಕದ್ದು. ಅಲ್ಲದೆ ತಂದೆಯವರು ಸಾಧನೆಯ ಮಾರ್ಗದಲ್ಲಿ ಕೆಲವೊಂದು ಒಲ್ಲದ ಮನಸ್ಸಿನಲ್ಲಿ ಅಪೂರ್ಣವಾಗಿ ಬಿಟ್ಟಿದ್ದ ಕೆಲಸಗಳನ್ನು ಸಹ ಅವರ ಆಸೆಯಂತೆ ಪೂರೈಸುತ್ತ ಪರಿಷ್ಕರಿಸಿ ಪುಸ್ತಕಗಳನ್ನು ನೀಡುತ್ತಾ ಬಂದಿದ್ದಾರೆ. (ಎಸ್. ಜಿತೇಂದ್ರ ಕುಮಾರ್ ರವರು ಮಾತನಾಡಿ ಪುಸ್ತಕಗಳನ್ನು ಪರಿಷ್ಕರಿಸುವ ಬಗ್ಗೆ ವಿವರಿಸಿದರು).
ಅಷ್ಟೇ ಅಲ್ಲದೆ ಸಂಸ್ಕೃತದಲು ಪಾಂಡಿತ್ಯಪಡೆದ ಇವರ ಲೇಖನಗಳಿಗೆ ಹೊರ ರಾಜ್ಯಗಳಲ್ಲೂ ಕೊಡ ಮನ್ನಣೆ ದೊರಕಿದೆ. ಶಾಸ್ತ್ರಿಗಳು ಸಂರಕ್ಷಿಸಿದ ಅನೇಕ ತಾಳೆಗರಿ ಗ್ರಂಥಗಳನ್ನು ಇಂದಿಗೂ ಇಲ್ಲಿ ಸಂರಕ್ಷಿಸುತ್ತಾ ಬಂದ್ದಿದು ಸ್ವಲ್ಪವು ಹಾಳಾಗದಂತೆ ನೋಡಿಕೊಳ್ಳಲಾಗುತ್ತಿದೆ. ಕೆಲವು ಗ್ರಂಥಗಳನ್ನು ಶ್ರೀ ಮಠಕ್ಕೂ ಸಹ ನೀಡಿದ್ದಾರೆ.
ಪುಸ್ತಕ ಪ್ರಕಾಶನವಲ್ಲದೆ ಟ್ರಸ್ಟ್ ನ ವತಿಯಿಂದ ಚತುರ್ವಿಧ ದಾನವಾದ ಜ್ಞಾನ ದಾನ, ಆಹಾರ ದಾನ, ಅಭಯ ದಾನ ಮತ್ತು ಔಷಧ ದಾನಕ್ಕೆ ಆದ್ಯತೆ ನೀಡುತ್ತ ಬಂದಿದೆ. ಇದರ ಅಂಗವಾಗಿ 1989-90ನೇ ಸಾಲಿನಿಂದ ಈವರೆಗೆ ಒಟ್ಟು 2600 ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ, ಸಾವಿರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ದಾನಿಗಳ ಸಹಕಾರವು ಸೇರಿದಂತೆ ಸುಮಾರು 50ಲಕ್ಷದವರೆಗೆ ದಾನ ರೂಪದಲ್ಲಿ ವಿನಿಯೋಗಿಸಿದೆ. ಪರಿಸ ಸಂತ್ರಸ್ತರ ಪರಿಹಾರ, ಬರ ಪರಿಹಾರ, ಸುನಾಮಿ ಸಂತ್ರಸ್ತರ ಪರಿಹಾರ, ಪ್ರವಾಹ ಸಂತ್ರಸ್ತರ ಪರಿಹಾರ ನಿಧಿ ಹೀಗೆ ಧನ ಸಹಾಯ ಮಾಡುತ್ತಿದ್ದು ಉನ್ನತ ಧೆಯೋದೇಶಗಳನ್ನು ಒಳಗೊಂಡಿದೆ ಆಹಾರ ಮತ್ತು ಔಷಧ ದಾನದಡ್ಡಿಯಲ್ಲಿ ಕೊಳಚೆ ಪ್ರದೇಶದ ನಿವಾಸಿಗಳ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಹಾಲು ವಿತರಣೆ ಮಾಡಲಾಗುತ್ತಿದು, 1995ರಲ್ಲಿ ಹೃದಯಘಾತ ಮತ್ತು ರಕ್ತದೊತ್ತಡ ಕಿರು ಹೊತ್ತಿಗೆಯ ನಾಲ್ಕು ಸಾವಿರ ಪ್ರತಿಗಳ ಪ್ರಕಟಣೆ ಹಾಗೂ ವಿತರಣೆ ಮಾಡಲಾಗಿದೆ. 2002ರಲ್ಲಿ ಕರ್ನಾಟಕ ಜೈನ್ ಅಸೋಸಿಯೇಷನ್ ನಿಂದ ನಿರ್ಮಾಣವಾದ ಮೊತಿಖಾನೆ ತಿಮ್ಮಪ್ಪಯ್ಯ ಜೈನಾ ವಿದ್ಯಾರ್ಥಿ ನಿಲಯದಲ್ಲಿ ಒಂದು ಕೊಠಡಿ ನಿರ್ಮಾಣಕೆಂದು ಧನ ಸಹಾಯ ನೀಡಲಾಗಿದೆ. ಪರಮ ಪವಿತ್ರ ಗ್ರಂಥವಾದ 24 ತೀರ್ಥಂಕರರ 24 ಕ್ಷೇತ್ರಗಳ ನಲವತ್ತನಾಲ್ಕು ವರ್ಣ ಪುಟಗಳನೊಳಗೊಂಡ 1,500 ಪುಟಗಳ ಬೃಹತ್ ಮಹಾ ಪುರಾಣ ಗ್ರಂಥವನ್ನು ಎರಡು ಮಹಾ ಸಂಪುಟಗಳಲ್ಲಿ ಎರಡು ಬಣ್ಣಗಳಲ್ಲಿ ಮರುಮುದ್ರಣ ಮಾಡಿಸಿ ಲೋಕಾರ್ಪಣೆಮಾಡಿದ ಈ ಅದ್ಭುತ ಈ ಟ್ರಸ್ಟ್ ನದು. (ಎಸ್. ಜಿತೇಂದ್ರ ಕುಮಾರ್ ರವರು ಮಾತನಾಡಿ ಮಹಾಪುರಾಣ(ಪೂರ್ವ ಪುರಾಣ ಮತ್ತು ಉತ್ತರ ಪುರಾಣ) ಗ್ರಂಥದ ಮಹತ್ವ ಮತ್ತು ಮಹಾ ಪುರಾಣವನ್ನು ಮಹಾ ಮಸ್ತಕಾಭಿ಼ಷೇಕದ ಸಂದರ್ಭದ ಹೊತ್ತಿಗೆ ಪ್ರಕಟಿಸುವ ಬಗ್ಗೆ ತಿಳಿಸಿದರು).
ಟ್ರಸ್ಟ್ ಗಾಗಿ ಸ್ರಮಿಸುತ್ತಿರುವ ಧರ್ಮದರ್ಶಿಗಳ ಮನದಾಳದ ಮಾತು.
ಹೆಚ್.ಬಿ. ದೇವೇಂದ್ರ ಸ್ವಾಮಿ :- ಶಾಂತಿ ರಾಜ ಶಾಸ್ತ್ರಿ ಟ್ರಸ್ಟ್ ನಲ್ಲಿ ನಮ್ಮನ್ನು ಟ್ರಸ್ಟಿಗಳಾಗಿ ತೆಗೆದುಕೊಂಡು ಸೇವೆ ಮಾಡಲು ನಮ್ಮಗೆ ಮಾರ್ಗ ದರ್ಶನ ನೀಡಿರುವುದರ ಬಗ್ಗೆ ತಿಳಿಸಿದರು.
ಎಂ.ಜೆ. ಇಂದ್ರಕುಮಾರ್ :- ಶಾಂತಿ ರಾಜ ಶಾಸ್ತ್ರಿ ಟ್ರಸ್ಟ್ ನಿಂದ ನಡೆಯುತ್ತಿರುವ ಕೆಲಸಗಳ ಬಗ್ಗೆ ಮತ್ತು ಎಸ್. ಜಿತೇಂದ್ರ ಕುಮಾರ್ ರವರ ಸಾರಥ್ಯದಿಂದ ನಡೆದುಕೊಂಡು ಹೋಗುತ್ತಿರುವ ಟ್ರಸ್ಟ್ ನ ಉದ್ದೇಶ ಶುಭವಾಗಿ ನಡೆಯಲ್ಲಿ ಎಂದು ತಿಳಿಸಿದರು.
ಹೀಗೆ 1988 ರಿಂದ ಪ್ರಾರಂಭವಾಗಿ ಇಲ್ಲಿಯವರೆಗೆ 30ವರ್ಷಗಳ ಸುಧೀರ್ಘ ಸೇವೆ ನಿರಂತರವಾಗಿ ಸಾಗುತ್ತಿರಲ್ಲಿ. ಇಂತಹ ಮಹೋನ್ನತ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದ ಶಾಸ್ತ್ರಿಗಳಿಗೂ ಹಾಗೂ ಅದನ್ನು ಮರು ಪ್ರಕಾಶಿಸಿ ಕನ್ನಡ ಜನತೆಗೆ ಒದಗಿಸಿದ ಇನ್ನೂ ಅನೇಕ ಧರ್ಮಕಾರ್ಯಗಳಲ್ಲಿ ತೊಡಗಿಸಿಕೊಂಡು ತಂದೆಯ ಹೆಸರಿನ ಕೀರ್ತಿ ಹೆಚ್ಚಿಸುತ್ತಿರುವ ಅವರ ಮಕ್ಕಳಿಗೂ ಅವರೊಡನೆ ಸದಾ ಶ್ರಮಿಸುತಿರುವ ಇನ್ನಿತರ ಧರ್ಮದರ್ಶಿಗಳಿಗೂ ಕೃತಜ್ಞತೆಗಳು.
ಹೆಚ್ಚಿನ ವಿವರಗಳಿಗೆ ದಾನಿಗಳು ಸಂಪರ್ಕಿಸ ಬೇಕಾದ ದೂರವಾಣಿ ಸಂಖ್ಯೆ
93430 94443.














