ಎಲ್ಲಿಂದ ಪ್ರಾರಂಭಿಸುವುದು ಎಲ್ಲಿಗೆ ಮುಕ್ತಾಯಗೊಳಿಸಲಿ ಹೇಳಬೇಕಾಗಿರುವುದು ಎಷ್ಟು ಹೇಳಿದರು ಸಾಕೆನಿಸದ ಬೃಹತ್ ಕೃತಿಯನ್ನು ನಾನು ಹೇಳ ಹೊರಟ್ಟಿದೆನೆ. ಮೊದಲಿಗೆ ಆಸ್ಥಾನ ಮಹಾನ್ ವಿದ್ವಾನ್ ಎತ್ತುರು ಶಾಂತಿ ರಾಜಶಾಸ್ತ್ರಿಗಳ ಬಗ್ಗೆ ತಿಳಿಯೋಣ.
ಶಾಸ್ತ್ರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಜೈನಕಾಶಿ ಮೂಡುಬಿದಿರೆ ಸಮೀಪ ಎತ್ತುರು ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದವರು. ಅವರು ಸುಸಂಸ್ಕೃತ ಸರಳ ಸಜನಿಕೆಯ ಆದರ್ಶ ವ್ಯಕ್ತಿ ಬಹುಭಾಷಾ ವಿದ್ವಾಂಸರು ಯಾವುದೆ ಕೆಲಸವನ್ನು ಕೊಡ ಹೆಸರಿಗಾಗಿ ಹಣಕ್ಕಾಗಿ ಮಾಡಿದವರಲ್ಲ, ಶಾಸ್ತ್ರಿಗಳು ತಮ್ಮ ಪ್ರಾಥಮಿಕ ವಿಧ್ಯಾಭ್ಯಾಸವನ್ನು ಕಾರ್ಕಳದಲ್ಲಿ ಮುಗಿಸಿ. ನಂತರ ಆಕಸ್ಮಿಕವಾಗಿ ಎತ್ತುರಿಗೆ ಬಂದಿದ್ದ ಸ್ವಸ್ತಿಶ್ರೀ ನೇಮಿಸಾಗರ್ ವರ್ಣಿಜಿಯವರು ಅವರನ್ನು ಗುರುತಿಸಿ ಶ್ರವಣಬೆಳಗೊಳಕ್ಕೆ ಕರೆದುಕೊಂಡು ಬಂದು, ಧಾರ್ಮಿಕ ಶಿಕ್ಷಣ ನೀಡಿದ್ದು. ನಂತರದ ಉನ್ನತ ವ್ಯಾಸಂಗವನ್ನು ರಾಜಸ್ಥಾನದ ಗ್ವಾಲಿಯರ್ ನ ಮೊರೆನದಲ್ಲಿ ಮಾಡಿಸಿದ್ದರು. ಅಲ್ಲಿ ಜೈನಾಗಮ, ವ್ಯಾಕರಣ, ದರ್ಶನ, ಕಾವ್ಯಾಲಂಕಾರ ಮತ್ತು ನ್ಯಾಯ ಶಾಸ್ತ್ರ ಹೀಗೆ ಪಂಚಶಾಸ್ತ್ರದಲ್ಲಿ ಪಾಂಡಿತ್ಯ ಪಡೆದು ನ್ಯಾಯ ತೀರ್ಥ ಎಂಬ ಪದವಿ ಪಡೆದರು, ವಿದ್ಯಾದ ದಾತಿ ವಿನಯಂ ಎಂಬಂತೆ ವಿನಯ ಸದ್ಗಣಗಳ ಆಗರವಾದರು. ನಂತರ ಮೈಸೂರಿನ ಮೊತಿಖಾನೆ ಲಕ್ಷ್ಮಿಪಥೆಯನ್ ರವರ ಜೈನ ವಿಧ್ಯಾರ್ಥಿ ನಿಲಯದಲ್ಲಿ ನೆಲೆಸಿ ವರ್ಧಮಾನ್ಯಯ ನವರ ಸಹಕಾರದೊಂದಿಗೆ ಧರ್ಮ ಪ್ರಚಾರಕರಾಗಿ ಧರ್ಮೊಪದೇಶಕರಾಗಿ ಕಾರ್ಯನಿರ್ವಹಿಸಿದರು. 1925ರಲ್ಲಿ ಬೆಂಗಳೂರಿನ ನಾಗಪ್ಪ ಮತ್ತು ಧರಣಮ್ಮನವರ ಪುತ್ರಿ ಸುಭದ್ರದೇವಿಯವರೊಂದಿಗೆ ಅವರ ವಿವಾಹವಾಯಿತು.
ಶಾಸ್ತ್ರಿಗಳವರು ಸಮಾಜಮುಖಿಯಾಗಿ ಅನೇಕ ಕೆಲಸಗಳನ್ನು ಮಾಡಿದ್ದು ವಿಶ್ವವೊಂದು ಹಾಗೂ ವಿವೇಕಾಬ್ಯದೇಯ ಎಂಬ ಪತ್ರಿಕೆಯನ್ನು ಪ್ರಾರಂಭಿಸುವುದರ ಮೂಲಕ ಜೈನ ಸಾಹಿತ್ಯ ಪ್ರಚಾರ ಕಾರ್ಯ ಮಾಡಿದವರು. ತಮ್ಮನ್ನು ಬಹುಕಾಲ ಉಳಿಸುವುದು ಈ ಭೊದನೆಯಲ್ಲ ಎಂದು ಮನ ಗಂಡ ಇವರು ಅವುಗಳ ಜೊತೆ ಕೃತಿ ರಚನೆಗೆ ತೊಡಗಿದರು, ಹೀಗೆ ಮೊದಲು ಅವರಿಂದ ರಚಿತವಾದ ಕೃತಿ ಪಂಚಸ್ತೊತ್ರ ಬಾಬಾಪ್ರಕಾಶಿಕ. ಇದರೊಟ್ಟಿಗೆ ಒಂದಾದಮೇಲೊಂದರಂತೆ ಸುಮಾರು ಐವತ್ತೈದಕ್ಕೂ ಮೀರಿ ಕೃತಿಗಳನ್ನು ರಚಿಸಿದರು. ಇವರ ಕೃತಿಗಳಲ್ಲಿ ಆಚಾರ್ಯಜಿನಸೇನಗುಣಭದ್ರರಿಂದ ವಿರಚಿತವಾದ ಮಹಾಪುರಾಣ. ಇಪ್ಪತ್ತು ಸಾವಿರ ಸಂಸ್ಕೃತ ಶ್ಲೋಕವುಳ್ಳ ಮಹಾಮೇರು ಕೃತಿಯನ್ನು ಸರಳ ಹೊಸಗನ್ನಡದಲ್ಲಿ ಭಾವರ್ಥವನ್ನು ಮೂಲದ ಯಾವುದೊಂದು ಶಬ್ದಾರ್ಥವನ್ನು ಬಿಡದೆ ಬರೆದು ಕನ್ನಡ ಜನತೆಗೆ ನೀಡಿ ಮಹಾದೊಪಕಾರ ಮಾಡಿದ್ದಾರೆ.
(ನಂತರ ಜಿತೇಂದ್ರ ಕುಮಾರ್ ರವರು ಮಾತನಾಡಿ ಮಹಾಪುರಣವನ್ನು 9ನೇ ಶತಮಾನದಲ್ಲಿ ಅಚಾರ್ಯ ಜಿನಸೇನಾ ಮತ್ತು ಅಚಾರ್ಯ ಗುಣಪುತ್ರರು ಎಂಬ ಇಬ್ಬರು ಅಚಾರ್ಯರು ಸೇರಿ ಸಂಸ್ಕೃತದಲ್ಲಿ ರಚಿಸಿದರು. ಈ ಮಹಾ ಪುರಾಣದಲ್ಲಿ ಸುಮಾರು 20ಸಾವಿರ ಶ್ಲೋಕಗಳಿವೆ, 20ನೇ ಶತಮಾನದಲ್ಲಿ ನಮ್ಮ ತಂದೆಯವರು(ಎ. ಶಾಂತಿ ರಾಜ ಶಾಸ್ತ್ರಿ) ಕನ್ನಡಕ್ಕೆ ತಂದರು ಎಂದು ತಿಳಿಸಿದರು. ಮತ್ತು ಮಹಾಪುರಣದ ವಿಶೇಷತೆಯ ಬಗ್ಗೆ ತಿಳಿಸಿದರು).
ಅವರ ಇತರ ಮಹತ್ತರ ಧರ್ಮ ಗಂಥಗಳಾದ ನೇಮಿಜಿನೇಶ ಸಂಗತಿ, ನಾಗ ಕುಮಾರ ಚರಿತಂ, ಶತಕತ್ರೇಯ, ಧರ್ಮ ಪರಿಶೇ, ದಶ ಭಕ್ತಿ, ಸಂಯುಕ್ತ ಕೌಮುದಿ, ಜಿನ ಭಜನ ಸಾರ, ತ್ತತ್ವರತ್ನ ಪ್ರದೀಪಿಕೆ, ಪ್ರಮೇಯ ರತ್ನಾಲಂಕಾರ, ಪೂಜಾಸಾರ ಸಮೂಚ್ಯಾಹ, ಶ್ರೀ ಗೊಮ್ಮಟೇಶ್ವರ ಚರಿತ ಇತ್ಯಾದಿ ಐವತ್ತೈದಕ್ಕು ಹೆಚ್ಚು ಕೃತಿಗಳನ್ನು ರಚಿಸಿದವರು. ಶಾಂತಿರಾಜ ಶಾಸ್ತ್ರಿಗಳು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವಿಸಲ್ಪಟ್ಟ ಬಹುಷ ಏಕೈಕ ಸಂಸ್ಕೃತ ವಿದ್ವಾಂಸರು.
1933ರಂದು ಶ್ರೀ ಮಠದಿಂದ ಜೈನ ಶಾಸ್ತ್ರವಿಶಾರದ ಎಂದು ಬಿರುದು ನೀಡಿ ಸನ್ಮಾನಿಸಲಾಯಿತು. ಇವರ ಅಪಾರ ವಿದ್ವತ್ತಿನ ಕೀರ್ತಿಗಾಗಿ ಗುರು ಮನೆಗಳಿಂದ ಸಂದ ಗೌರವಗಳಲ್ಲದೆ ಅರಮನೆಯಿಂದಲ್ಲು ಅಸ್ತಾನ ವಿದ್ವಾನ್ ನಂತರ ಅಸ್ತಾನ ಮಹಾ ವಿದ್ವಾನರೆಂದು ಗೌರವಿಸಲ್ಪಟ್ಟು 1946ರಲ್ಲಿ ಶ್ರೀ ಜಯಚಾಮರಾಜ ಒಡೆಯರ್ ಬಹುದ್ದುರ್ ರಿಂದ ಪಂಡಿತ ರತ್ನ ಎಂಬ ಬೀರುದಾಂಕಿತರಾಗಿ ಚಿನ್ನದ ಕಡಗದೊಂದಿಗೆ ಗೌರವ ಹಾಗೂ ರಾಜಮನ್ನಣೆ ಪಡೆದವರು.
(ನಂತರ ಜಿತೇಂದ್ರ ಕುಮಾರ್ ರವರು ಮಾತನಾಡಿ 1946ರಲ್ಲಿ ಶ್ರೀ ಜಯಚಾಮರಾಜ ಒಡೆಯರ್ ಬಹುದ್ದರ ರಿಂದ ಗೌರವಿಸಲ್ಪಟ್ಟು ಸಂದರ್ಭವನ್ನು ವಿವರಿಸಿದರು).
ಮೈಸೂರು ಜೈನ್ ಅಸೋಸಿಯೇಷನ್ ಆಜೀವ ಸದಸ್ಯರಾಗಿ ಸೇವೆಸಲ್ಲಿಸಿದವರು, ಮೈಸೂರು ವಿಶ್ವ ವಿಧ್ಯಾನಿಲಯದಲ್ಲಿಯು ಸಹ ಪ್ರಾಚ್ಯ ಪುಸ್ತಕ ಭಂಡಾರದಲ್ಲಿ ಸಹಾಯಕ ವಿದ್ವಾಂಸಕರಾಗಿ ಕೆಲಸ ನಿರ್ವಹಿಸಿದ್ದರು. ಶಾಸ್ತ್ರಿಗಳು ಜೀವಾಂತ್ಯ ಕಾಲದವರೆಗೆ ವಾಸಮಾಡಿದ ಮನೆ ಹೆಸರಿಗೆ ತಕ್ಕಂತೆ ಶಾಂತಿ ನಿವಾಸ. ಇಂತಹ ಆದರ್ಶ ಜೀವನ ನಡೆಸಿದ ಎತ್ತುರು ಶಾಂತಿ ರಾಜ ಶಾಸ್ತ್ರಿಗಳು 1952ರಲ್ಲಿ ಎಲ್ಲರನ್ನ ಆಗಲಿ ತತಾಸ್ಮರಣಿಯರಾದರು. ಅವರು ಸ್ವಾರಸ್ವತ ಲೋಕಕ್ಕೆ ನೀಡಿದ ಅದ್ಭುತ ಕೊಡುಗೆಯನ್ನು ಅವರ ಮನದಾಸೆಯಂತೆ ಹಿಂದಿಗು ಮುನ್ನಡೆಸಿಕೊಂಡು ಹೊಗುತ್ತಿರುವುದು ಅವರ ಹೆಸರಿನಲ್ಲಿ ನಡೆಸಿಕೊಂಡು ಬಂದಿರುವ ಈ ಶಾಂತಿರಾಜ ಶಾಸ್ತ್ರಿ ಟ್ರಸ್ಟ್.














