ಅತಿಶಯ ಶ್ರೀ ಕ್ಷೇತ್ರ ಹೊಂಬುಜದಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಶ್ರೀ ಪದ್ಮಾವತಿ ದೇವಿ ಮಹಾರಥೋತ್ಸವದ ಅಂಗವಾಗಿ ಮಠದ ಪೀಠಾಧಿಪತಿಗಳಾದ ಸ್ವಸ್ತೀಶ್ರೀ ದೇವೇಂದ್ರ ಕೀರ್ತಿ ಭಟಾರಕ ಪಟ್ಟಚಾರ್ಯರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಎಂಟು ನೂರು ವರ್ಷಗಳಿಗೂ ಹಿಂದಿನ ರಥವನ್ನು ಸಿಂಗರಿಸಿ ಸಂಪ್ರದಾಯದಂತೆ ರಥೋತ್ಸವವನ್ನು ಆಚರಿಸಲಾಯಿತು.
ಮಾರ್ಚ್ 17ರಿಂದ 22ರವರೆಗೆ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದು, ಮಾರ್ಚ್ 21ರಂದು ಭಗವಾನ್ ಶ್ರೀ ಪಾರ್ಶ್ವನಾಥರಿಗೆ 108 ಕಳಶಗಳ ಪೂಜೆಯನ್ನು ನೆರೆವೇರಿಸಲಾಯಿತು.
ವಂದನೆಗಳೊಂದಿಗೆ ಜ್ವಾಲಾ ಮಾಲಾ ಡಾಟ್ ನ್ಯೂಸ್














