ಕನಕಗಿರಿ ಮಸ್ತಕಾಭೇಷಕ ಕರ್ನಾಟಕ ಜೈನ ಮಹಿಳಾ ಒಕ್ಕುಟ

ದಿನಾಂಕ : 12-03-2017ರ ಭಾನುವಾರದಂದು ಅಖಿಲ ಕರ್ನಾಟಕ ಜೈನ ಮಹಿಳಾ ಒಕೂಟ್ಟದಿಂದ ಕನಕಗಿರಿಯಲ್ಲಿ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾ ಅಭಿಷೇಕವನ್ನು ಸ್ವಸ್ತಿಶ್ರೀ ಭುವನ ಕೀರ್ತಿ ಭಟಾರಕ ಸ್ವಾಮೀಜಿಯವರ ಸಾನಿಧ್ಯದಲ್ಲಿ ಹಮ್ಮಿಕೊಳಲಾಗಿತ್ತು. (ಸ್ವಸ್ತಿಶ್ರೀ ಭುವನ ಕೀರ್ತಿ ಭಟಾರಕ ಸ್ವಾಮೀಜಿಯವರ ಮಾತನಾಡಿ ಕನಕಗಿರಿಯಲ್ಲಿ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾ ಅಭಿಷೇಕವನ್ನು ಕುರಿತು ಮಾತನಾಡಿದರು ನಂತರ ಮೈಸೂರು ಮತ್ತು ಅಖಿಲ ಕರ್ನಾಟಕ ಜೈನ ಮಹಿಳಾ ಒಕೂಟ್ಟದಿಂದ ನೆರೆವೇರಿಸಿಕೊಡುತ್ತಿರುವ ಮಹಿಳೆಯರನ್ನು ಪ್ರಶಂಸಿದರು).

 ವಿವಿಧೆಡೆಯಿಂದ ಬಂದ ಮಹಿಳಾ ಸಂಘಗಳು ದ್ರವ್ಯಾಭಿಷೇಕಗಳಲ್ಲಿ ಭಾಗವಹಿಸಿ ಪುನಿತರಾದರು. (ನಂತರ ಸ್ವಸ್ತಿಶ್ರೀ ಭುವನ ಕೀರ್ತಿ ಭಟಾರಕ ಸ್ವಾಮೀಜಿಯವರ ಮಾತನಾಡಿ ಮಹಿಳೆಯರ ಧರ್ಮಸೇವೆಯ ಬಗ್ಗೆ ಹಾಡಿಹೊಗಳಿದರು. ನಂತರ ಕನಕಗಿರಿಯ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾ ಅಭಿಷೇಕದ ವಿಶೇಷತೆಯಬಗ್ಗೆ ವಿವರಿಸಿದರು). ಗೊಮ್ಮಟೇಶ್ವರ ಮೂರ್ತಿಗೆ ಮಹಿಳಾ ಒಕೂಟ್ಟದ ವತಿಯಿಂದ ಸಂಬೃಧಿಯಿಂದ ನಡೆದ ಅಭಿಷೇಕ ದೃಷ್ಯಾವಳಿ ರಮಣಿಯವಾಗಿತ್ತು.

ಈ ಸಂದರ್ಭದಲ್ಲಿ ಕೇಸರಿ ಅಮ್ಮನವರು, ಅಖಿಲ ಕರ್ನಾಟಕ ಜೈನ ಮಹಿಳಾ ಒಕೂಟ್ಟದ ಅಧ್ಯಕ್ಷರಾದ ಶೀಲಾ ಅನಂತರಾಜ್ ರವರು ಹಾಗೂ ಪಧಾಧಿಕಾರಿಗಳು ಪಾಲ್ಗೊಂಡಿದ್ದರು.