ಉದ್ಯಾನ ನಗರಿ ಬೆಂಗಳೂರಿನಲ್ಲಿ ಅಂದು ರಾಜ್ಯಮಟ್ಟದ ಜಿನಭಜನ ಕಾರ್ಯಕ್ರಮದ ಫೈನಲ್ ದಿನ. ಭಾರತೀಯ ಜೈನ್ ಮಿಲನ್ ವತಿಯಿಂದ ಆಯೋಜಿಸಲ್ಪಟ್ಟ ಅಭೂತ ಪೂರ್ವ ಯಶಸ್ಸನ್ನು ಕಂಡು ರಾಜ್ಯಾದ್ಯಂತ ಮನೆಮಾತಾದ ಕಾರ್ಯಕ್ರಮ. ಅಂದು ಕರ್ನಾಟಕ ಜೈನ್ ಆಸೋಸಿಯೇಷನ್ನ ಸಭಾಂಗಣದಲ್ಲಿ ವೇದಿಕೆ ಭಾವ್ಯವಾಗಿ ಸಜ್ಜಾಗಿತ್ತು, ಹಬ್ಬದ ಸಡಗರ ವಾತಾವರಣ ಸೃಷ್ಠಿಯಾಗಿತ್ತು, ಜೈನ ಸಂಸ್ಕೃತಿಯನ್ನು ಬೆಳಗಿದ ಕಾರ್ಯಕ್ರಮವಾಗಿತು. ಸರಳ ಮನಸ್ಸಿನ ಅನಿತ ಸುರೇಂದ್ರ ಕುಮಾರ್ ರವರು ಪರಿಕಲ್ಪನೆ ಸುಂದರವಾಗಿಯೇ ಸಕಾರಗೊಂಡಿತ್ತು. ಶ್ರೀಮತಿ ಹೇಮಾವತಿ ಹೆಗ್ಗಡೆಯವರ ಉಪ-ಸ್ಥಿತಿ ಕಾರ್ಯಕ್ರಮಕ್ಕೆ ಮೆರುಗನ್ನು ತಂದುಕೊಟ್ಟಿತ್ತು. 20 ತಂಡಗಳಿಂದ ಹಾರಿಸಿ ಬಂದ 8 ತಂಡಗಳು ಅಂದಿನ ದಿನ ಭಾಗವಹಿಸಲ್ಲಿದರು. ಕಾರ್ಯಕ್ರಮವನ್ನು ಬಲು ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು. ಸುವರ್ಣ ಟಿ.ವಿ. ನಿರೂಪಕಿಯಾದ ನಮಿತ ಜೈನ್ ರವರ ಸುಲಲಿತ ನಿರೂಪಣೆ ಹಾಗೂ ಶ್ರೀಮತಿ ಶ್ರಧ್ಧ ಅಮಿತ್ ಪ್ರಿಯದರ್ಶಿನಿ ಹಾಗೂ ಮೇಘನ ವಾಸುದೇವ್ ರವರ ಸುಮಧುರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಬೆಂಗಳೂರು ವಿಭಾಗದ ಉಪಾಧ್ಯಕ್ಷರಾದ ಶ್ರೀ ಭರತೇಶ್ ಜಗತ್ ಶೆಟ್ಟಿ ಸ್ವಾಗತಿಸಿದರು. ಖ್ಯಾತ ಗಾಯಕರಾದ ಶಶಿಧರ್ ಕೋಟೆ, ಶ್ರೀಮತಿ ಹೇಮಾವತಿ ಹೆಗ್ಗಡೆ ಯವರು ಹಾಗೂ ಭಾರತೀಯ ಜೈನ್ ಮಿಲನ್ನ ಅಧ್ಯಕ್ಷರಾದ ಧರ್ಮಸ್ಥಳ ಸುರೇಂದ್ರ ಕುಮಾರ್ ರವರು, ಅನಿತ ಸುರೇಂದ್ರ ಕುಮಾರ್ ರವರು, ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷರಾದ ಎಸ್. ಜಿತೇಂದ್ರ ಕುಮಾರ್ ರವರು ದೀಪಪ್ರಜ್ವಲನೆ ಮಾಡಿ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಹೇಮಾವತಿ ಹೆಗ್ಗಡೆಯವರು ಮಾತನಾಡಿ ಈ ಜಿನ ಭಜನ ಕಾರ್ಯಕ್ರಮದಲ್ಲಿ ಪುರುಷರು ಭಾಗವಹಿಸಿದಕ್ಕೆ ಸಂತೋಷವನ್ನು ವ್ಯಕ್ತಪಡಿಸಿದರು ಹಾಗೂ ತಮ್ಮ ಮಾತಿನಲ್ಲಿ ಮಾರನಡು ವರ್ಧಮಾನ ಹೆಗ್ಗಡೆಯವರ ಸೇವೆಯನ್ನು ಅಪಾರವಾಗಿ ಸ್ಮರಿಸಿದರು . ಶ್ರೀಮತಿ ಹೇಮಾವತಿ ಅಮ್ಮನವರಿಗೆ ಪ್ರೇಮ ತಿಮ್ಮಪ್ಪನವರಿಂದ ಗೌರವ ಸಮರ್ಪಣೆಯಾಯಿತ್ತು. ಕರ್ನಾಟಕ ಜೈನ್ ಅಸೋಸಿಯೇಷನ್ ಶ್ರೀ ಜಿರೇಂದ್ರ ಕುಮಾರ್ ರವರನ್ನು ಮಂಗಳೂರು ವಿಭಾಗದ ಪುಷ್ಪಾರಾಜ್ ಜೈನ್ ಗೌರವಿಸಿದರು, ಸಂಘಟನಾ ಸಾರ್ವಭೌಮ ಧರ್ಮಸ್ಥಳ ಸುರೇಂದ್ರ ಕುಮಾರ್ ರವರು ಗಾಯಕರಾದ ಶಶಿಧರ ಕೋಟೆಯವರೊಡನೆ ಜಿನ ಭಜನೆಯನ್ನು ಹಾಡಿ ಸಂಭ್ರಮಿಸಿದರು.
ಪಾರಿತೋಶಕಕ್ಕೆ ಹೆಸರಿಸಿದ ಮಾರ್ನಾಡು ವರ್ಧಮಾನ ಹೆಗ್ಗಡೆಯವರ ಬಗ್ಗೆ ಶ್ರೀ ಮುನಿರಾಜ್ ರಂಜಾಳರು ವೀಡಿಯೋ ಚಿತ್ರಣದ ಮೂಲಕ ವಿವರಿಸಿದರು. ಹಾಗೇ ಸಂಯೋಜಕರಿಗೂ ಗೌರವಿಸಲಾಯಿತು. ಅ ದಿನದ ತೀರ್ಪುಗಾರರಾಗಿ ಖ್ಯಾತ ಗಾಯಕರಾದ ಶಶಿಧರ ಕೋಟೆ, ಶ್ರೀಯುತ ಮುನಿರಾಜ್ ರಂಜಾಳ್, ಪ್ರಭಾಮಣಿ ಮಂಜುನಾಥ್ ರವರು ಅಗಮಿಸಿದ್ದರು. ಎಲ್ಲರೂ ಕಾತುರದಿಂದ ಕಾಯುತ್ತಿದ ಸ್ಪರ್ಧೆ ಪ್ರಾರಂಭವಾಯಿತು. ಪ್ರತಿ ತಂಡದವರು ಅತ್ಯುತ್ಸಹದಿಂದ ಶಿಸ್ತಿನಿಂದ ಭಾಗವಹಿಸಿದರು.
ನಂತರ ತೀರ್ಪುಗಾರರನ್ನು ಸನ್ಮಾನಿಸಲಾಯಿತು. ಸ್ಪರ್ಧೆಗೆ ಅಯ್ಕೆಯಾಗಿದೆ ಎಲ್ಲಾ 20 ತಂಡಗಳಿಗೂ ಪ್ರಶಸ್ತಿಪತ್ರ ವಿರತರಿಸಲಾಯಿತು. ಎಲ್ಲಾ ವಿಭಾಗಗಳಲ್ಲೂ ನಡೆದ ಸ್ಪರ್ಧೆಗಳ ವೀಡಿಯೋ ಚಿತ್ರೀಕರಣವನ್ನು ಪ್ರದರ್ಶಿಸಲಾಯಿತು.
ಪ್ರಾಚೀನ ಜೈನ ಪರಂಪರೆಯಲ್ಲಿ ಅನೇಕ ಮಹಿಳೆಯರು ಜೈನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಈ ಅಧುನಿಕ ಯುಗದಲ್ಲಿ ಅನಿತ ಸುರೇಂದ್ರಕುಮಾರ್ ರವರು ಸಮಾಜ ಮುಖಿಯಾಗಿ ಧಾರ್ಮಿಕ ಮನೋಭಾವದಿಂದ ಅನೇಕ ಕಾರ್ಯಗಳನ್ನ ಮಾಡುತ್ತಾ ಬಂದಿದ್ದು ಜೈನ ಸಂಸ್ಕೃತಿ ಬೆಳಗುವ ಕಾರ್ಯ ಅವರಿಂದ ಹಾಗುತ್ತಿದೆ. ಅವರ ಈ ಉನ್ನತ ಮಟ್ಟದ ಯೋಜನೆಗೆ ರಾಜ್ಯದೆಲ್ಲೆಡೆಯಿಂದ ಒಳ್ಳೆಯ ಪ್ರತಿಕ್ರಿಯೆ ದೊರಕಿದೆ. ರಾಜ್ಯದ ಮಿಲನ್ನ ಎಲ್ಲಾ ಡಿವಿಜನ್ನವರು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ, ಮಕ್ಕಳಲ್ಲೂ ಕೊಡ ಜಿನ ಭಕ್ತಿಗೀತೆಗಳನ್ನು ಕಲಿಯುವ ಬಗ್ಗೆ ಅಸಕ್ತಿಮೂಡಿಸಿದೆ. ರಾಜ್ಯಮಟ್ಟದಲ್ಲಿ ಐದು ವಿಭಾಗದಲ್ಲಿ ಸ್ಪರ್ಧೆನಡೆದಿದ್ದು ಈ ದಿನ ಸೆಮಿಪೈನಲ್ ಹಂತಕ್ಕೆ ಬಂದಿದ್ದೆವೆ, ಮಂಗಳೂರು, ಧಾರವಾಡ, ಬೆಂಗಳೂರು, ದಾವಣಗೆರೆ, ಮೈಸೂರು ವಿಭಾಗ.
ಖ್ಯಾತ ಹಿನ್ನೆಲೆ ಗಾಯಕರಾದ ಬಿ.ಕೆ. ಸುಮಿತ್ರಾ, ಖ್ಯಾತ ನಟಿ ಸುಧಾರಾಣಿ, ವಿಜಯರಾಘವೇಂದ್ರ ಕಾರ್ಯಕ್ರಮಕ್ಕೆ ಗ್ಲಾಮರ್ ನೀಡಿದರು. ಮೊದಲಿಗೆ ಪೈನಲ್ಸ್ ನಲ್ಲಿ ಭಾಗವಹಿಸಿ ಸಮಾಧಾನಕರ ಬಹುಮಾನ ಪಡೆದ ನಾಲ್ಕು ತಂಡಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಅನಂತರ ಅತಿಥಿಗಳಾಗಿ ಅಗಮಿಸಿದ್ದ ಈ ತಾರ ಬಳಗ(ಬಿ.ಕೆ. ಸುಮಿತ್ರಾ, ಸುಧಾರಾಣಿ, ವಿಜಯರಾಘವೇಂದ್ರ) ತಮ್ಮ ಮಾತುಗಳಿಂದ ಮತ್ತು ಗಾಯನದ ಮೂಲಕ ಸಭೆಯನ್ನು ರಂಜಿಸಿದರು. ಜೈನ್ ಮಿಲನ್ ಸಂರಕ್ಷಕರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ವಿರೇಂದ್ರ ಹೆಗ್ಗಡೆಯವರ ಶುಭಾಶಯವನ್ನು ವೀಡಿಯೋ ಕ್ಲಿಪಿಂಗ್ಸ್ ಮೂಲಕ ತೊರಿಸಲಾಯಿತು. ಕಾತರದ ಕ್ಷಣ ಬಂದೆಬಿಟ್ಟಿತು ನಾಲ್ಕನೇ ಬಹುಮಾನದಿಂದ ಒಂದನೆ ಬಹುಮಾನದವರೆಗೆ ಬಹುಮಾನವನ್ನು ಘೋಷಿಸಲಾಯಿತು. (ಸನ್ಮತಿ ಸುಧಾ ನಾಲ್ಕನೇ ಸ್ಥಾನ, ಪಾರ್ಶ್ವನಾಥ ಭಜನಾಮಂಡಳಿ ಮೂರನೇ ಸ್ಥಾನ, ಓಂಕಾರ್ ತಂಡ ದ್ವಿತೀಯ ಸ್ಥಾನ ಮತ್ತು ಮೊದಲ ಸ್ಥಾನ )
ನಂತರ ಶ್ರೀ ವಿಲಾಸ್ ಪಾಸಣ್ಣನವರ ವಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯವಾಯಿತು. ಅಂದಿನ ಮಧ್ಯಾನದ ಕಾರ್ಯಕ್ರಮದ ಪ್ರಾರಂಭದಲ್ಲಿ ಬೆಂಗಳೂರುವಿಭಾಗದ ಸದಸ್ಯರು ಹಾಡಿದ ಸುಮಧುರ ಸಮೂಹ ಗೀತೆಯನ್ನು ಈ ಭಾಗದಲ್ಲಿ ಸೇರಿಸಿಲ್ಲ, ಮುಂದಿನ ಭಾಗದಲ್ಲಿ ಅದನ್ನು ವಿವರವಾಗಿ ಪ್ರಸ್ತುತಪಡಿಸಲಾಗುತ್ತಿದೆ ಖಂಡಿತ ನಿರಿಕ್ಷೀಸಿ.
ವಂದನೆಗಳು.














