ಫೆಬ್ರವರಿ 21,2017ರಂದು ಶ್ರವಣಬೆಳಗೊಳ ಶ್ರೀ ಕ್ಷೇತ್ರ ಸ್ಥಾಪಿಸಿರುವ ಚಾವುಂಡರಾಯ ಪ್ರಶಸ್ತಿಯನ್ನು ಧರಣೇಂದ್ರ ಕುರಕುರಿ ರವರಿಗೆ ಬೆಂಗಳೂರಿನ ಕನ್ನಡ ಸಾಹ್ಯಿತ ಪರಿಷತ್ತು ಸಭಾಂಗಣದಲ್ಲಿ ನೀಡಲಾಯಿತು. ಕಾರ್ಯಕ್ರಮವು ಹಿರಿಯ ಗಾಯಕ ಎಮ್.ಆರ್ ಅನಂತಮೂರ್ತಿಯವರ ಮಧುರ ಕಂಟದಿಂದ ಹಾಡಿದ ನಾಡ ಗೀತೆಯೊಂದಿಗೆ ಪ್ರಾರಂಭವಾಯಿತು. ಶ್ರೀ ಚನ್ನೇಗೌಡರವರು ಸ್ವಾಗತಿಸಿದರು. ಕನ್ನಡ ಸಾಹ್ಯಿತ ಪರಿಷತ್ ಅಧ್ಯಕ್ಷರಾದ ಮನು ಬಳಿಗಾರ್, ಪಂಪ ಪ್ರಶಸ್ತಿ ಪುರಸ್ಕೃತ ಹಂಪ ನಾಜರಾಜ್ ರವರು, ಪ್ರಶಸ್ತಿಗೆ ಭಾಜನರಾದ ಧರಣೇಂದ್ರ ಕುರಕುರಿ ರವರು, ಕರ್ನಾಟಕ ರಾಜ್ಯ ಜೈನ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಮಹಾಮಸ್ತಕಾಭಿಷೇಕ ಕಮಿಟಿಯ ಕಾರ್ಯಧ್ಯಕ್ಷರಾದ ಜಿತೇಂದ್ರ ಕುಮಾರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮನು ಬಳಿಗಾರ್ ರವರು ಪ್ರಸ್ತಾವಿಕ ನುಡಿಗಳನ್ನಾಡಿ, ಜೈನ ಧರ್ಮದ ಗುಣ ತತ್ವಗಳು ಹಾಗೂ ಚಾವುಂಡರಾಯ ಪ್ರಶಸ್ತಿಯ ಅರ್ಹತೆಯ ಬಗ್ಗೆ ಹೇಳಿದರಲ್ಲದೆ ಗೊಮ್ಮಟಮೂರ್ತಿಯ ವೈಭವದ ಬಗ್ಗೆ ಹೆಮ್ಮೆಯ ನುಡಿಗಳನ್ನಾಡಿದರು. (ಪ್ರೀತಿ, ವಿಶ್ವಾಸ, ಹಾಗೂ ಸಕಲ ಜೀವರಾಶಿಗಳಲ್ಲಿ ದೇವರನ್ನು ಕಾಣುವಂತಹ ದಿಶೆಯಲ್ಲಿ ಇರುವಂತಹವರಿಗೆ ಚಾವುಂಡರಾಯ ಪ್ರಶಸ್ತಿ ಕೊಡಬೇಕು ಎನ್ನುವುದು ಇದರ ಮೂಲ ಉದ್ದೇಶ ಎಂದರು. ಈ ಬಾರಿ ಚಾವುಂಡರಾಯ ಪ್ರಶಸ್ತಿಯನ್ನು ಎಲ್ಲರ ಒಮ್ಮತದಿಂದ ಧರಣೇಂದ್ರ ಕುರಕುರಿರವರಿಗೆ ನೀಡುತ್ತಿದ್ದೇವೆ ಎಂದರು. ಮತ್ತು ಶ್ರವಣಬೆಳಗೊಳದ ಏಕಶಿಲಾ ಗೊಮ್ಮಟಮೂರ್ತಿಯನ್ನು ಕೆತ್ತನೆಮಾಡಿದ ಚಾವುಂಡರಾಯರನ್ನು ಸಮ್ಮರಿಸುತ್ತಾ ಗೊಮ್ಮಟಮೂರ್ತಿಯ ವೈಭವದ ಬಗ್ಗೆ ಹೆಮ್ಮೆಯ ನುಡಿಗಳನ್ನಾಡಿದರು).
ಶ್ರೀ ಡಾ|| ಧರಣೇಂದ್ರ ಕುರಕುರಿರವರನ್ನು ಸನ್ಮಾನಿಸಲಾಯಿತ್ತು, ಶ್ರೀ ಕ್ಷೇತ್ರದ ವತಿಯಿಂದ ಚಾವುಂಡರಾಯ ಪ್ರಶಸ್ತಿಯ ಪಲಕದೊಂದಿಗೆ ದತ್ತಿನಿಧಿಯನ್ನು ಕೊಡ ಪ್ರಧಾನ ಮಾಡಲಾಯಿತು. ಸಾಹ್ಯಿತ ಪರಿಷತ್ ವತಿಯಿಂದಲು ಸಹ ಗೌರವಿಸಲಾಯಿತು.
ನಂತರ ಡಾ|| ಹಂಪ ನಾಜರಾಜ್ ರವರು ಮಾತನಾಡಿ ಧರಣೇಂದ್ರ ಕುರಕುರಿರವರ ಲೇಖನಗಳ ಬಗ್ಗೆ ಹಾಗೂ ಅವರ ಬಗ್ಗೆ ಅಭಿಮಾನದ ನುಡಿಗಳನ್ನಾಡಿದರು. (ಧರಣೇಂದ್ರ ಕುರಕುರಿರವರ ಜೊತೆಗಿನ ಒಡನಾಟವನ್ನು ವಿವರಿಸಿದರು)
ಶ್ರೀ ಎಸ್. ಜಿತೇಂದ್ರ ಕುಮಾರ್ ರವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಶ್ರವಣಬೆಳಗೊಳದಲ್ಲಿ ನಡೆದ ಸಂದರ್ಭವನ್ನು ಶ್ರವಣಬೆಳಗೊಳದ ಪೂಜ್ಯಶ್ರೀಗಳ ಉದಾರ ಸಹಕಾರವನ್ನು ನೆನಪಿಸಿಕೊಂಡರು.
ಡಾ|| ಧರಣೇಂದ್ರ ಕುರಕುರಿರವರು ಮಾತನಾಡಿ ಶ್ರೀಕ್ಷೇತ್ರದ ವತಿಯಿಂದ ನೀಡುತ್ತಿರುವ ಪ್ರಶಸ್ತಿಯ ಬಗ್ಗೆ ಮನಸ್ಪೂರ್ತಿಯಾಗಿ ವಂದನೆಯನ್ನು ಸಲ್ಲಿಸಿ, ತಮ್ಮ ಪ್ರೀತಿ ಪಾತ್ರರ ಸ್ನೇಹಿತರುಗಳ ಉಪ-ಸ್ಥಿತಿ ಹಾಗೂ ಸಹಕಾರಕ್ಕೆ ವಂದನೆಗಳನ್ನು ಸಲ್ಲಿಸಿದರು. ನಂತರ ಅವರೇ ಬರೆದಂತಹ ಕವನವನ್ನು ವೇದಿಕೆ ಮೇಲೆ ಹೇಳಿದರು.














