ದಿನಾಂಕ 7 ಮತ್ತು 8ನೇ ಜನವರಿ 2017ರಂದು ನಮ್ಮ ನೆನಪಿನಲ್ಲಿ ಉಳಿಯುವಂತಹ ಇಡೀ ಕರ್ನಾಟಕ ಜೈನ ಸಮುದಾಯ ಭವನದಿಂದ ಒಳ್ಳೆಯ ಅನಿಸಿಕೆ ಅಭಿಪ್ರಾಯಗಳನ್ನು ಪಡೆದಂತಹ ಒಂದು ಉನ್ನತ ಮಟ್ಟದ ಕಾರ್ಯಕ್ರಮ ಜೈನ್ ಮಿಲನ್ ವಲಯ 8 ರ ವತಿಯಿಂದ ನಡೆಯಿತು. ಅದು ರಾಜ್ಯ ಮಟ್ಟದ ಜಿನಭಜನಾ ಸ್ಪರ್ಧೆ. ಬಹಳ ದಿನಗಳಿಂದ ಪ್ರತಿವಲಯದಲ್ಲೂ ಸ್ಪರ್ಧೆ ಯನ್ನು ನದೆಸಿ ಅಂತಿಮವಾಗಿ ರಾಜ್ಯ ಮಟ್ಟದಲ್ಲಿ ಸ್ಪರ್ಧೆ ನಡೆದಿದ್ದು ಅಭೂತಪೂರ್ವ ಯಶಸ್ಸನ್ನು ಕಂಡಿತು. ಇನ್ನೊಮ್ಮೆ ಆ ದೃಶ್ಯಾವಳಿಗಳನ್ನು ಸವಿಯೋಣ ಬನ್ನಿ.
ಶ್ರೀಮತಿ ಅನಿತಾ ಸುರೇಂದ್ರಕುಮಾರ್ ರವರ ನೇತೃತ್ವದಲ್ಲಿ ಮೂಡಿ ಬಂದ ಕಾರ್ಯಕ್ರಮ ಬೆಂಗಳೂರಿನ ಕರ್ನಾಟಕ ಜೈನ್ ಭವನದಲ್ಲಿ ಸುಂದರ ವೇದಿಕೆಯಲ್ಲಿ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು. ಅಂದು ಸೆಮಿಫೈನಲ್ ಸ್ಪರ್ಧೆ ಆಯೋಜಿಸಲಾಗಿತ್ತು.
ಶ್ರೀ ಸುರೇಂದ್ರಕುಮಾರ್ ಜೈನ್ , ಅನಿತಾ ಸುರೇಂದ್ರಕುಮಾರ್ , ಕೆ. ಪ್ರಸನ್ನ ಕುಮಾರ್, ಅಜ್ಜಪ್ಪನವರು , ಸುಮತಿ ಕುಮಾರ್, ವಿಲಾಸ್ ವಾಸಣ್ಣ ನವರು, ಪುಷ್ಪರಾಜ್ ಜೈನ್ ಹಾಗೂ ಖ್ಯಾತ ಸಂಗೀತ ನಿರ್ದೇಶಕರಾದ ವಿ. ಮನೋಹರ್ ರವರಿಂದ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಬಿಸಿದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ವಿ. ಮನೋಹರ್ ರವರು ಮಾತನಾಡಿ ಹೆಗ್ಗಡೆಯವರ ಮನೆತನದ ಬಗ್ಗೆ ಹಾಗು ಅವರ ಒಡನಾಟದ ಬಗ್ಗೆ ಮಾಡನಾಡಿದರು. ಅಜಿತ್ ರವರು ಸ್ಪರ್ಧಾ ನಿಯಮಗಳನ್ನು ಮತ್ತೊಮ್ಮೆ ತಿಳಿಸಿದರು. ಸ್ಪರ್ಧೆಯು 5 ಡಿವಿಝನ್ ಗಳು ಇದ್ದು, 5 ಡಿವಿಝನ್ ಗಳಲ್ಲೂ ನಾಲ್ಕು ನಾಲ್ಕು ತಂಡಗಳನ್ನು ರಚಿಸಿದ್ದೇವೆ. ಒಟ್ಟು 20 ತಂಡಗಳನ್ನಾಗಿ ಆಯ್ಕೆ ಮಾಡಲಾಗಿದ್ದು, ಅವರೆಲ್ಲರೂ ಇಲ್ಲಿ ಬಂದಿದ್ದಾರೆಂದು ತಿಳಿಸಿದರು. ಹಾಗೆಯೇ ಎಲ್ಲಾ ತಂಡದವರಿಂದ ಗಾಯನ ಸ್ಪರ್ಧೆಯು ಶುರುವಾಗಿ ಕೊನೆಗೆ ಅಂತಿಮ ಸುತ್ತಿಗೆ ಬಂದಂತಹ ತಂಡಗಳ ಹೆಸರುಗಳನ್ನು ಪ್ರಕಟಿಸಿದರು. 8 ತಂಡಗಳನ್ನು ವೇದಿಕೆಯ ಮೇಲೆ ಕರೆದು ಎಲ್ಲರನ್ನೂ ಒಂದು ತಂಡವನ್ನಾಗಿ ರಚಿಸಿದರು. ನಂತರ ಫೈನಲ್ಸ್ ದಿನವನ್ನು ತಿಳಿಸುವುದಾಗಿ ತಿಳಿಸಿದರು.














