ಮಂದಾರಗಿರಿಯಲ್ಲಿ ಸ್ವಚ್ಛತಾ ಆಂದೋಲನ

ಮಂದಾರಗಿರಿಯಲ್ಲಿ ಸ್ವಚ್ಛತಾ ಆಂದೋಲನ ಅಂದರೆ  ಇದು ವಿನೂತನ ರೀತಿಯಲ್ಲಿ ಧರ್ಮ ಸೇವೆ. ನಿಜಕ್ಕೂ ಬೆಂಗಳೂರು ಡಿವಿಝನ್ ನ  ಯುವ ಜೈನ್ ಮಿಲನ್ ತಂಡ ಹಾಗೂ  ಬೆಂಗಳೂರು ಉತ್ತರ ಜೈನ ಸಮಾಜವರು ಬಹಳ ಒಳ್ಳೆ ಕೆಲಸವನ್ನು ಕೈಗೆತ್ತಿಕೊಂಡಿದ್ದರು. ಅದೇನೆಂದರೆ  ಮಂದಾರಗಿರಿ ಬೆಟ್ಟದಲ್ಲಿನ ದೇವಸ್ಥಾನಗಳು ಹಾಗೂ  ಆವರಣದ ಸ್ವಚ್ಛತೆ.

ನಾವಲ್ಲಿ ಹೋಗಿ ನಿಂತಾಗ ಎಲ್ಲೆಲ್ಲೂ ಒಣಗಿದ ಹುಲ್ಲು ಗಟ್ಟಿಯಾಗಿ  ಹರಡಿ ಬೇರೂರಿಕೊಂಡಿತ್ತು. ಇದು ಖಂಡಿತ ಸ್ವಚ್ಛಗೊಂಡಿತಾ ? ಎನ್ನುವ ಪ್ರಶ್ನೆ ನನ್ನಲ್ಲಿ ಶುರುವಾಗಿತ್ತು. ಆದರೆ ಇದ್ಯಾವುದನ್ನು ಯಾವ ಯೋಚನೆಯನ್ನು ಮಾಡದೆ ನಮ್ಮ ಯುವ ತಂಡದವರು ಗುದ್ದಲಿ, ಬಾಣಲಿ ಹಿಡಿದು ಕೆಲಸ ಶುರು ಮಾಡಿಯೆ ಬಿಟ್ಟರು.

 ಅವರುಗಳು ಎಲ್ಲರೂ ಸೇರಿ ಅತಿ ಉತ್ಸಾಹದಿಂದ ಸ್ವಚ್ಛತಾ ಕಾರ್ಯವನ್ನು ಪೂರೈಸಿದರು.  ಅಬ್ಬ  ಇದಕ್ಕೆ ಯುವಶಕ್ತಿ ಅನ್ನೋದು.  ನೋಡ ನೋಡುತ್ತಿದ್ದಂತೆ  ಅಚ್ಚುಕಟ್ಟಾಗಿಯೇ ಬಿಟ್ಟಿತು. ಒಬ್ಬೊಬ್ಬರು ಶ್ರಮ ವಹಿಸಿ ಕೆಲಸ  ಮಾಡಿ ಮುಗಿಸಿಯೇ ಬಿಟ್ಟರು.

 ಆನಂತರ  ಅವರವರ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು. ನಮ್ಮ ಜೈನ್ ನ್ಯೂಸ್ ಚಾನಲ್ ಬಗ್ಗೆ ಯೂ ಸಹ ಅವರುಗಳು ಕೊಂಡಾಡಿ ಮಾತನಾಡಿದರು.  ನಂತರ ತಂಡಗಳ ಮುಖ್ಯ ನಿರ್ವಾಹಕರುಗಳು ಸಹ ಮಾತನಾಡಿದರು. ಅವರುಗಳು ಎಲ್ಲಾರು ಸಹ ಇದೇ ರೀತಿಯಾಗಿ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ  ಮಾಡಲು ಯೋಚಿಸಿದ್ದೇವೆ ಎಂದು ತಮ್ಮ ತಮ್ಮಅಭಿಪ್ರಾಯಗಳನ್ನುಹಂಚಿಕೊಂಡರು.  ತಮ್ಮೆಲ್ಲರ ಸಹಕಾರಗಳು ಅತ್ಯಗತ್ಯ ಎಂದು ತಿಳಿಸಿದರು.

 ಸುಹಾಸ್ ಪಿ ಜೈನ್ ಮಿಲನ್ ರವರಿಂದ  ಊಟದ ವ್ಯವಸ್ಥೆ ಮಾಡಲಾಗಿತ್ತು.  ಯುವಜೈನ್ ಮಿಲನ್ ನ ಮಾರ್ಗದರ್ಶಕರಾದ  ಅಜಿತ್ ಕುಮಾರ್ ರವರು, ಉಪಾಧ್ಯಕ್ಷರಾದ ಸುನಯನ್ ರವರು, ಕಾರ್ಯಕರ್ಶಿಗಳಾದ ಎಮ್. ಎಮ್. ಜಿನೇಂದ್ರ ರವರು ಪಾಲ್ಗೊಂಡಿದ್ದರು.

ನಿಜವಾಗಿಯೂ ನಮ್ಮ  ಸಮಾಜಕ್ಕೆ ಬೇಕಾಗಿರುವುದು  ಇಂತಹ ಒಂದು ಒಳ್ಳೆಯ ಕೆಲಸಗಳು , ಒಳ್ಳೆಯ ಮನಸ್ಸುಗಳು , ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಂತಹ ಕೆಲಸಗಳಲ್ಲಿ  ಪಾಲ್ಗೊಳ್ಳಲಿ ಎಂಬುದು  ಜ್ವಾಲಾಮಾಲಾ ನ್ಯೂಸ್ ಚಾನಲ್ ನ ಆಶಯ.