ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ಜೈ ಜಿನೇಂದ್ರ ವೀಕ್ಷಕರೆ,
ಸುತ್ತಲೂ ಹಸಿರು ತುಂಬಿದ ಇಬ್ಬನಿಯ ಮನೋಹರ ವಾತಾವರಣದೊಂದಿಗೆ ಇದೇ ದೇವಗಿರಿ.
ನಿಜಕ್ಕೂ ಸ್ವರ್ಗವೇ ಧರೆಗೆ ಇಳಿದಂತೆ ಭಾಸವಾಗುತ್ತಿರುವ ಈ ದೇವನಗರಿ , ದೇವನಂದಿ ಮಹಾರಾಜರಿಂದ ದೇವಗಿರಿ ಎಂದು ಹೆಸರಿಸಲ್ಪಟ್ಟಿದೆ. ನೀವು ನೋಡುತ್ತಿರುವ ಈ ಸುಂದರ ಬಸದಿ 2002ನೇ ಇಸವಿಯಲ್ಲಿ ಊರ ಪರಊರ ದಾನಿಗಳ ನೆರವಿನಿಂದ ಮತ್ತು ಸ್ಥಳೀಯ ಶ್ರಾವಕರ ನೆರವು ಹಾಗೂ ಶ್ರಮಾದಾನದಿಂದ ಕೇವಲ 6 ತಿಂಗಳಲ್ಲಿ ನಿರ್ಮಾಣವಾದಂತಹ ಬಸದಿ, ಪರಮಪೂಜ್ಯ ಸುಮೇರು ಸಾಗರ್ ಜಿ ಮಹಾರಾಜರ ದಿವ್ಯ ಸಾನಿಧ್ಯ ಮಾರ್ಗದರ್ಶನದಲ್ಲಿ ಪಂಚಕಲ್ಯಾಣ ನೆರವೇರಿಸಲಾಗಿತ್ತು. ಪಂಚಕಲ್ಯಾಣದಲ್ಲಿ ಭಗವಾನ್ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾಮಾತೆ ಭೈರಮಾತೆ ಪದ್ಮಾವತಿ ಅಮ್ಮನವರ ಪ್ರತಿಷ್ಠೆ ನೆರವೇರಿಸಲಾಗಿತ್ತು. 2012 ರಲ್ಲಿ ಚತುರ್ವಂಶಿ ತೀರ್ಥಂಕರುಗಳ ಜಿನಬಿಂಬಗಳ ಪ್ರತಿಷ್ಠಾಪನೆ ಪರಮಪೂಜ್ಯ ಮುನಿಶ್ರೀ ಪುಣ್ಯಸಾಗರ ಮುನಿಮಹಾರಾಜರ ದಿವ್ಯ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ನಡೆದಿದ್ದು ಅಜ್ನಾತ ದಾನಿಗಳೊಬ್ಬರು 24 ತೀರ್ಥಂಕರರ ಬಿಂಬಗಳನ್ನು ದಾನ ಮಾಡಿರುತ್ತಾರೆ . ಹಾಗೂ ಇಲ್ಲಿ ನೂತನ ಭೋಜನಶಾಲೆಯೂ ನಿರ್ಮಾಣಗೊಂಡಿತ್ತು. ಶ್ರೀ ಕ್ಷೇತ್ರದ ಆಡಳಿತ ಸಮಿತಿಯಾದ ಶ್ರೀ ತ್ರೈರತ್ನ ದಿಗಂಬರ ಜೈನ ಸಮಿತಿಯು ಶ್ರೀ ಕ್ಷೇತ್ರದ ಪೂಜಾ ವಿಧಿವಿಧಾನಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅಭಿವೃದ್ದಿ ಕಾರ್ಯಗಳನ್ನು ನಡೆಸಿಕೊಡಲಾಯಿತು.
ಬಸದಿಗೆ ಸಂಬಂಧಪಟ್ಟಂತೆ ಮುಂದಿನ ದಿನಗಳಲ್ಲಿ 22 ಶ್ರಾವಕ ಮನೆಗಳಿದ್ದು ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರದಲ್ಲಿ ಅತಿಥಿ ಗೃಹ ನಿರ್ಮಾಣ ಮತ್ತು ಮುನಿ ನಿವಾಸ ನಿರ್ಮಾಣ ಮೊದಲಾದ ಯೋಜನೆಗಳನ್ನು ಸಮಿತಿ ಹೊಂದಿದೆ . ಯಾವ ರೀತಿ ದಾನಿಯೊಬ್ಬರು 24 ತೀರ್ಥಂಕರರು ದಾನ ನೀಡಿದರು ಈ ಯೋಜನೆಗಳಿಗೂ ದಾನಿಗಳ ಸಹಕಾರದೊಂದಿಗೆ ನೆರವೇರಿಸುವ ನಿರೀಕ್ಷೆಯಿದ್ದು ಕ್ಷೇತ್ರದ ಮಹಿಮೆ ಹಾಗೂ ಇಲ್ಲಿನ ಸಮಿತಿ ಸದಸ್ಯರ ಶ್ರಮದಿಂದ ಖಂಡಿತ ಸಾಧ್ಯವಾಗುತ್ತದೆ ಎಂದು ಹೇಳುತ್ತಾ ಜಿನಮಂದಿರಕ್ಕೆ ಭೇಟಿ ನೀಡಿದಾಗ ಅಲ್ಲಿ ನಡೆದ ನವರಾತ್ರಿ ಮಹೋತ್ಸವದ ಭವ್ಯ ಆಚರಣೆ ಸುಂದರ ದೃಶ್ಯಾವಳಿಗಳೊಂದಿಗೆ ನಿಮ್ಮ ಮುಂದಿಡಲಾಗಿದೆ. ಹಾಗೆಯೇ ಇಂತಹ ಸುಂದರವಾದ ದೃಶ್ಯಾವಳಿಗಾಗಿ ವೀಕ್ಷಿಸುತ್ತಿರಿ ಜ್ವಾಲಾಮಾಲಾ ಡಾಟ್ ನ್ಯೂಸ್.














